ಲಖನೌದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್‍ಯಾಲಿಯಲ್ಲಿ ಸಿಎಎ ಕುರಿತು ಧೈರ್‍ಯವಿದ್ದರೆ ಚರ್ಚೆಗೆ ಬನ್ನಿ ಎಂದು ಗೃಹ ಸಚಿವ ಅಮಿತ್ ಸವಾಲು ಹಾಕಿದ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಜೆಪಿಯೊಂದಿಗೆ ಚರ್ಚಿಗೆ ಸಿದ್ಧ ಎಂದು ಸವಾಲು ಸ್ವೀಕರಿಸಿದ್ದಾರೆ. ಆದರೆ ಚರ್ಚಾ ವಿಷಯ ಮಾತ್ರ ಅಭಿವೃದ್ಧಿಯಾಗಿರಲಿ ಎಂದು ಅವರು ಹೇಳಿದರು.
ಸಮಾಜವಾದಿ ಪಕ್ಷದ ಅಗಲಿದ ನಾಯಕ ಜಾನೇಶ್ವರ್ ಮಿಶ್ರಾ ಅವರ 10 ನೇ ನಿಧನ ವಾರ್ಷಿಕೋತ್ಸವದಂದು ಗೌರವ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚರ್ಚೆಯ ಸ್ಥಳ ಮತ್ತು ಸಮಯವನ್ನು ಬಿಜೆಪಿ ನಿರ್ಧರಿಸಲಿ ಮತ್ತು ನಾನು ಅಲ್ಲಿಗೆ ತಲುಪುತ್ತೇನೆ. ಆದರೆ ಚರ್ಚೆಯ ವಿಷಯವೆಂದರೆ ಅಭಿವೃದ್ಧಿ, ಉದ್ಯೋಗ, ಯುವಜನರು, ರೈತರು ಇತ್ಯಾದಿಗಳಾಗಿರಬೇಕು” ಎಂದು ಅವರು ಒತ್ತಿ ಹೇಳಿದ್ದಾರೆ.
ಅಲ್ಲದೇ ನೈಜ ಸಮಸ್ಯೆಗಳಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ವಿಭಜಕ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಸಿಎಎ ಕುರಿತು ಚರ್ಚೆ ನಡೆಸುವಂತೆ ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಮತ್ತು ಇತರ ವಿರೋಧ ಪಕ್ಷಗಳ ಮುಖಂಡರಿಗೆ ಅಮಿತ್ ಶಾ ಮಂಗಳವಾರ ಸವಾಲು ಹಾಕಿದ್ದರು.
ಷಾ ಅವರ ಟೀಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅಖಿಲೇಶ್ ಬಿಜೆಪಿ ಮುಖಂಡರರು ಬಳಸುವ ಭಾಷೆಯನ್ನು ನೋಡಿದರೆ ಅವರು ರಾಜಕಾರಣಿಗಳು ಎನಿಸುವುದಿಲ್ಲ. ಸಿಎಎಯನ್ನು ಸಮಾಜವಾದಿ ಪಕ್ಷ ಮಾತ್ರ ವಿರೋಧಿಸುತ್ತಿಲ್ಲ. ಬದಲಿಗೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾಮಾನ್ಯ ನಾಗರಿಕರು ಸಹ ಈ ‘ತಾರತಮ್ಯ’ ಕಾನೂನನ್ನು ವಿರೋಧಿಸಿ ರಸ್ತೆಗಳಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
“ಧರ್ಮದ ಆಧಾರದ ಮೇಲೆ ಬಿಜೆಪಿ ನಾಗರಿಕರ ವಿರುದ್ಧ ಎಷ್ಟು ಸಮಯದವರೆಗೆ ತಾರತಮ್ಯವನ್ನು ಮುಂದುವರಿಸುತ್ತದೆ?” ಎಂದು ಯಾದವ್ ಪ್ರಶ್ನಿಸಿದ ಅವರು “ಬಿಜೆಪಿಯು ತನ್ನ ವಿವೇಚನಾರಹಿತ ಬಹುಮತದ ಮೂಲಕ ಜನರ ಧ್ವನಿಯನ್ನು ದಮನಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇನ್ನು ಅಮಿತ್ ಶಾರವರ ಸವಾಲಿಗೆ ಬಹಳಷ್ಟು ಜನ ಟ್ರೋಲ್ ಮಾಡಿದ್ದಾರೆ. ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ “ಶಾಹೀನ್‌ಬಾಗ್‌ನ ದಬಾಂಗ್ ದಾದಿಗಳೊಂದಿಗೆ ಸಿಎಎ ಕುರಿತು ಸಾರ್ವಜನಿಕ ಚರ್ಚೆಯನ್ನು ನಡೆಸಲು, ಶಾಹೀನ್ ಬಾಗ್‌ನಲ್ಲಿ ಕೆಲವು ದಿನಗಳನ್ನು ಕಳೆಯಲು ಧೈರ್ಯವಿದೆಯೇ ಅಮಿತ್ ಶಾ” ಎಂದು ಟ್ವೀಟ್ ಮಾಡಿದ್ದಾರೆ.
ಐಎಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅಧಿಕಾರಿ ಕಣ್ಣನ್ ಗೋಪಿನಾಥ್ “ಪ್ರೀತಿಯ ಅಮಿತ್‌ಶಾ, ನೀವು ಸಿಎಎ ಕುರಿತು ಚರ್ಚೆ ಮಾಡಲು ಬಯಸಿದ್ದೀರಿ ಎಂದು ಕೇಳಿದೆ. “ನಿಮ್ಮ ಕೈಲಾದ ಮಟ್ಟದಲ್ಲಿ ನೀವು ಚರ್ಚಿಸಲು ಪ್ರಯತ್ನಿಸಿದರೆ ಆ ತಾಜಿಂದರ್ ಬಗ್ಗ ಎಂಬ ಹುಡುನೊಂದಿಗೆ ಚರ್ಚೆ ಮಾಡಿ ಎಂದು ನಾನು ಸಲಹೆ ನೀಡುತ್ತೇನೆ. ಯಾರು ಗೆದ್ದರೂ, ನನ್ನ ಕಡೆಯಿಂದ ಬಣ್ಣ ಪುಸ್ತಕ ಕೊಡುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
Dear @AmitShah, heard that you wanted a debate on CAA.
I would suggest you try your hand at your level. May be with that Bagga guy?
Whoever wins, a colouring book from my side.
— Kannan Gopinathan (@naukarshah) January 22, 2020
ಇನ್ನು ಖ್ಯಾತ ಯೂಟ್ಯೂಬರ್ ಧೃವ್ ರಾಠೀ ಪೋಲ್ ಒಂದನ್ನು ಕ್ರಿಯೇಟ್ ಮಾಡಿ, “ಸಿಎಎ, ಎನ್‌ಆರ್‌ಸಿ ಕುರಿತು ಕನ್ನಯ್ಯ ಕುಮಾರ್‌ರವರೊಂದಿಗೆ ಚರ್ಚೆ ನಡೆಸಲು ಅಮಿತ್ ಶಾಗೆ ಧೈರ್ಯವಿದೆಯೇ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಹೌದು ಎಂದು ಶೇ.12% ಜನ ಹೇಳಿದರೆ, ಇಲ್ಲ ಅವರಿಗೆ ಭಯವಿದೆ ಎಂದು 88% ಜನ ಹೇಳಿದ್ದಾರೆ.
Can Amit Shah dare to debate with Kanhayia Kumar on CAA-NRC?
— Dhruv Rathee (@dhruv_rathee) January 22, 2020


