ಖಲಿಸ್ತಾನಿ ಪ್ರತ್ಯೇಕತಾವಾದಿ ಮತ್ತು ತಮ್ಮ ಪ್ರಜೆ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಆರೋಪದ ನಂತರ, ಉಭಯ ದೇಶಗಳ ನಡುವೆ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿದೆ. ಅದಾಗ್ಯೂ, ಕೆನಡಾ ಸರ್ಕಾರವು ಯಾವುದೇ ಒಂದಿಷ್ಟು ಮಾಹಿತಿಯನ್ನು ಈ ಬಗ್ಗೆ ಹಂಚಿಕೊಂಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ಹೇಳಿದೆ.
ಅದಾಗ್ಯೂ, ಕೆನಡಾ ಸರ್ಕಾರವು ತನ್ನ ರಾಜತಾಂತ್ರಿಕರ ವಿರುದ್ಧ ಸುಳ್ಳು ಆರೋಪಗಳನ್ನು ತಿರಸ್ಕರಿಸುವುದಾಗಿ ಭಾರತ ಹೇಳಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ MEA ವಕ್ತಾರ ರಣಧೀರ್ ಜೈಸ್ವಾಲ್, “ನಾವು ಈ ವಿಷಯದ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಕಳೆದ ಎರಡು ದಿನಗಳಲ್ಲಿ ಹಲವಾರು ಪತ್ರಿಕಾ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“2023ರ ಸೆಪ್ಟೆಂಬರ್‌ನಿಂದ ಕೆನಡಾದ ಸರ್ಕಾರವು ನಮ್ಮೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ನಿನ್ನೆ ಮತ್ತೊಮ್ಮೆ ಕೆನಡಾ ಗಂಭೀರ ಆರೋಪಗಳನ್ನು ಮಾಡಿದೆ. ಆದರೆ ಅದನ್ನು ನಿರೂಪಿಸಲು ಇದುವರೆಗೆ ಯಾವುದೇ ಪುರಾವೆಗಳನ್ನು ನೀಡಿಲ್ಲ ಎಂದು ನಾವು ಹೇಳಿಕೆಯನ್ನು ನೀಡಿದ್ದೇವೆ” ಎಂದು ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
VIDEO | "We had summoned the acting High Commissioner of Canada and thereafter conveyed that we had no faith that the Canadian government will look after the safety of our diplomats and therefore, we had taken a decision to withdraw our High Commissioner and five other diplomats… pic.twitter.com/HP1QOamtPm
— Press Trust of India (@PTI_News) October 17, 2024
ಅದಾಗ್ಯೂ, ಭಾರತ ಮತ್ತು ಕೆನಡಾದ ಆರ್ಥಿಕ ಸಂಬಂಧಗಳು ಉತ್ತಮವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.
“ಭಾರತ-ಕೆನಡಾ ಆರ್ಥಿಕ ಸಂಬಂಧಗಳು ಬಹಳ ಉತ್ತಮವಾಗಿದೆ. ಕೆನಡಾದಲ್ಲಿ ನಾವು ದೊಡ್ಡ ಸಂಖ್ಯೆಯ ಭಾರತೀಯರನ್ನು ಹೊಂದಿದ್ದೇವೆ. ಇದು ನಾವು ಕೆನಡಾದೊಂದಿಗೆ ಗಟ್ಟಿಯಾದ ಜನ ಸಂಪರ್ಕವನ್ನು ನಿರ್ವಹಿಸುವ ಸೇತುವೆಯಾಗಿದೆ. ನಾವು ಬಹುಶಃ ಕೆನಡಾದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ದೊಡ್ಡ ಸಮೂಹವನ್ನು ಹೊಂದಿದ್ದೇವೆ. ಟ್ರೂಡೊ ಸರ್ಕಾರದ ಆಧಾರರಹಿತ ಆರೋಪಗಳಿಂದ ಈ ನಿರ್ದಿಷ್ಟ ಬಿಕ್ಕಟ್ಟು ಉಂಟಾಗಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನಟ ಸಲ್ಮಾನ್ ಖಾನ್ ಹತ್ಯೆಗೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ತರಿಸಲು ಸಿದ್ದತೆ ನಡೆಸಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
ನಟ ಸಲ್ಮಾನ್ ಖಾನ್ ಹತ್ಯೆಗೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ತರಿಸಲು ಸಿದ್ದತೆ ನಡೆಸಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್


