ಬಿಪಿಎಲ್ ಕಾರ್ಡ್ ಇರುವ ರಾಜ್ಯದ ಎಲ್ಲ ಅರ್ಹ ಪಡಿತರದಾರರಿಗೆ ನವೆಂಬರ್ 29 ರಿಂದ ಪಡಿತರ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಸೋಮವಾರ ತಿಳಿಸಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ರದ್ದಾಗಿರುವ ಕಾರ್ಡ್‌ಗಳನ್ನು ಪುನಃ ಸಕ್ರಿಯಗೊಳಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ಅವರು ಮಾಧ್ಯಮದ ಜೊತೆಗೆ ಹೇಳಿದ್ದಾರೆ. ರದ್ದಾದ ಬಿಪಿಎಲ್ ಕಾರ್ಡ್
“ಒಂದೂವರೆ ತಿಂಗಳ ಹಿಂದೆ ರದ್ದುಪಡಿಸಿದ್ದ ಎಲ್ಲ ರೇಷನ್ ಕಾರ್ಡ್‌ಗಳನ್ನು ನವೆಂಬರ್ 28 ರೊಳಗೆ ಮರು ಸಕ್ರಿಯಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದು, ಆ ಕಾರ್ಯ ಭರದಿಂದ ನಡೆಯುತ್ತಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಯಾವುದೇ ಕಾರಣಕ್ಕೂ ಪಡಿತರ ತಪ್ಪಿಸುವುದಿಲ್ಲ. ರಾಜ್ಯ ಸರಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಕಾರ್ಡ್ ರದ್ದುಗೊಂಡಿದ್ದರಿಂದ ಕಳೆದ ಎರಡು ತಿಂಗಳಿಂದ ಸಿಗದೇ ಇರುವ ಎಲ್ಲ ಸೌಲಭ್ಯಗಳು ದೊರೆಯಲಿವೆ. ಅರ್ಹರಿಗೆ ಬಿಪಿಎಲ್ ಕಾರ್ಡ್ ತಪ್ಪಿ ಹೋಗಬಾರದು. ಒಂದು ವೇಳೆ ತಪ್ಪಿ ಹೋಗಿದ್ದರೆ, ವಾಪಸ್ ಕೊಡಲಾಗುವುದು” ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ ಎಂದು ವಿಜಯ ಕರ್ನಾಟಕ ಪತ್ರಿಕೆ ವರದಿ ಮಾಡಿದೆ. ರದ್ದಾದ ಬಿಪಿಎಲ್ ಕಾರ್ಡ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜೊತೆಗೆ, ಪಡಿತರ ಚೀಟಿ ಇಲ್ಲವೆಂದು ಆರೋಗ್ಯ ಸೌಲಭ್ಯ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಕಾರ್ಡ್ ರದ್ದಾದ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಫಲಾನುಭವಿಗಳಿಗೆ ಹೊಸ ಕಾರ್ಡ್‌ಗಳನ್ನು ವಿತರಿಸುವ ಬದಲಿಗೆ ಹಳೇ ಕಾರ್ಡ್ ನಂಬರ್ ನಮೂದಿಸಿ ಪಡಿತರ ಪಡೆಯಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಎಂದಿನಂತೆ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಕೆಜಿ ಅಕ್ಕಿ ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳು ದೊರೆಯಲಿವೆ. ಸದ್ಯ, ಅಕ್ರಮವಾಗಿ ಕಾರ್ಡ್‌ಗಳನ್ನು ಹೊಂದಿದ ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿರ್ಧಾರ ಮಾಡಿಲ್ಲ. ಮೊದಲು ರದ್ದಾದ ಅರ್ಹರ ಪಡಿತರ ಕಾರ್ಡ್‌ಗಳನ್ನು ಮರು ಸಕ್ರಿಯಗೊಳಿಸುದೇ ಸರಕಾರದ ಗುರಿ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್‌ಗಳ ರದ್ದತಿಯ ಸುತ್ತ ನಡೆಯುತ್ತಿರುವ ಗೊಂದಲವನ್ನು ಪರಿಹರಿಸಲು ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶವನ್ನು ಹೊರಡಿಸಿದೆ. ಆದಾಯ ತೆರಿಗೆ ಪಾವತಿದಾರರು ಅಥವಾ ಸರ್ಕಾರಿ ನೌಕರರಾಗಿರುವ ವ್ಯಕ್ತಿಗಳ ಬಿಪಿಎಲ್ ಕಾರ್ಡ್‌ಗಳನ್ನು ಮಾತ್ರ ರದ್ದುಪಡಿಸುವುದನ್ನು ಖಾತ್ರಿಪಡಿಸಿಕೊಂಡು, ತಕ್ಷಣ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಆಹಾರ ಇಲಾಖೆಗೆ ಸೂಚನೆ ನೀಡಲಾಗಿದೆ.
ಇತರ ಎಲ್ಲ ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದುಗೊಳಿಸಬಾರದು ಎಂದು ಸರ್ಕಾರ ಒತ್ತಿ ಹೇಳಿದೆ. ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳು ಕಂಡುಬಂದಲ್ಲಿ, ರದ್ದುಪಡಿಸಿದ ಕಾರ್ಡ್‌ಗಳನ್ನು ಮರು ವಿತರಿಸಲು ಆಹಾರ ಇಲಾಖೆಗೆ ಸೂಚಿಸಲಾಗಿದೆ. ಈ ಕ್ರಮಗಳನ್ನು ದಿನದ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಆದೇಶವು ಕಡ್ಡಾಯಗೊಳಿಸಿದ್ದು, ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಬಗ್ಗೆ ಒತ್ತಿ ಹೇಳಿದೆ.
ಅರ್ಹರು ತಮ್ಮ ಕಾರ್ಡ್‌ಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಮತ್ತೆ ಮತ್ತೆ ಭರವಸೆ ನೀಡಿದ್ದಾರೆ. “ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದುಗೊಳಿಸಿದರೆ, ಅವುಗಳನ್ನು ತಕ್ಷಣವೇ ಮರುಸ್ಥಾಪಿಸಬೇಕು” ಎಂದು ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಐದು ವರ್ಷಗಳ ಕಾಲ ಕಾಲ್ ರೆಕಾರ್ಡ್‌ಗಳನ್ನು ಸಂರಕ್ಷಿಸುವಂತೆ ಮಣಿಪುರದ ಟೆಲಿಕಾಂ ಆಪರೇಟರ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ


