‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಯೋಗಾಲಯಗಳಾಗಿ ಬದಲಾಗುತ್ತಿವೆ” ಎಂದು ಸಿರ್ಸಾ ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಆರೋಪಿಸಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳು ದಲಿತರ ಮೇಲಿನ ದೌರ್ಜನ್ಯಗಳ ಪ್ರಯೋಗಶಾಲೆಗಳಾಗಿ ಮಾರ್ಪಟ್ಟಿವೆ. ಮೀಸಲಾತಿ ಸ್ಥಾನಗಳು ಭರ್ತಿಯಾಗದೆ ಉಳಿದಿವೆ, ದಲಿತರ ಕಲ್ಯಾಣಕ್ಕಾಗಿ ಘೋಷಣೆಗಳನ್ನು ಚುನಾವಣೆ ಸಮಯದಲ್ಲಿ ಮಾತ್ರ ಮಾಡಲಾಗುತ್ತದೆ. ಚುನಾವಣೆ ಮುಗಿದ ಮೇಲೆ ದಲಿತರನ್ನು ಮರೆತು ದಬ್ಬಾಳಿಕೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಕಾಲೇಜು ಶುಲ್ಕ ಪಾವತಿಸದ ಕಾರಣಕ್ಕಾಗಿ ಪರೀಕ್ಷೆಯನ್ನು ನಿರಾಕರಿಸಿದ ದಲಿತ ಬಾಲಕಿ ದೀಕ್ಷಾ ಅವರ ದುರಂತ ಆತ್ಮಹತ್ಯೆಯ ವಿಷಯವನ್ನು ಪ್ರಸ್ತಾಪಿಸಿದ ಸೆಲ್ಜಾ, “ಅಂಚಿನಲ್ಲಿರುವ ಸಮುದಾಯಗಳನ್ನು ರಕ್ಷಿಸುವಲ್ಲಿ ಬಿಜೆಪಿ ವಿಫಲವಾಗಿದೆ. ದೀಕ್ಷಾ ಅವರ ಏಕೈಕ ದೋಷವೆಂದರೆ, ಬಡ ದಲಿತ ಕುಟುಂಬದಲ್ಲಿ ಜನಿಸಿದ್ದು. ಈ ಘಟನೆಯು ಬಿಜೆಪಿಯ ‘ಬೇಟಿ ಬಚಾವೋ, ಬೇಟಿ ಪಢಾವೋ’ ಘೋಷಣೆಯ ಪೊಳ್ಳು ಸ್ವರೂಪವನ್ನು ಬಹಿರಂಗಪಡಿಸುತ್ತದೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ಸರ್ಕಾರವು ತಾರತಮ್ಯವನ್ನು ಯಾವಾಗ ಕೊನೆಗೊಳಿಸುತ್ತದೆ ಎಂದು ಅವರು ಪ್ರಶ್ನಿಸಿದರು. “ಬಿಜೆಪಿಯ ಅಭಿವೃದ್ಧಿಯ ಮಾದರಿಯು ಆಯ್ದ ಕೆಲವರಿಗೆ ಸೀಮಿತವಾಗಿದೆಯೇ? ದಲಿತ ಮತ್ತು ದುರ್ಬಲ ವರ್ಗದ ಮಕ್ಕಳ ಕನಸುಗಳಿಗೆ ಬೆಲೆ ಇಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.
ಧಾರ್ಮಿಕ ಮತಾಂತರದ ಆರೋಪದ ಮೇಲೆ ಒಡಿಶಾದಲ್ಲಿ ಬುಡಕಟ್ಟು ಮಹಿಳೆಯರನ್ನು ಥಳಿಸಿರುವುದು ಮತ್ತು ಮಧ್ಯಪ್ರದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ದಲಿತ ಯುವಕನ ಸಾವು ಸೇರಿದಂತೆ ದಬ್ಬಾಳಿಕೆಯ ಅನೇಕ ಘಟನೆಗಳನ್ನು ಸೆಲ್ಜಾ ಉಲ್ಲೇಖಿಸಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ.
‘ಬಿಜೆಪಿ ಆಡಳಿತವಿರುವ ರಾಜ್ಯಗಳು ದಲಿತರ ಮೇಲಿನ ದೌರ್ಜನ್ಯಗಳ ಪ್ರಯೋಗಾಲಯಗಳಾಗಿ ಮಾರ್ಪಟ್ಟಿವೆ. ಮೀಸಲಾತಿ ಸ್ಥಾನಗಳು ಭರ್ತಿಯಾಗದೆ ಉಳಿದಿವೆ ಮತ್ತು ದಲಿತರ ಕಲ್ಯಾಣಕ್ಕಾಗಿ ಘೋಷಣೆಗಳನ್ನು ಚುನಾವಣೆ ಸಮಯದಲ್ಲಿ ಮಾತ್ರ ಮಾಡಲಾಗುತ್ತದೆ. ಚುನಾವಣೆ ಮುಗಿದ ನಂತರ ದಲಿತರನ್ನು ಮರೆತು ದಬ್ಬಾಳಿಕೆ ಮುಂದುವರಿದಿದೆ” ಎಂದು ಆರೋಪಿಸಿದರು.
ಹರಿಯಾಣ ಮತ್ತು ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳನ್ನು ಅವರು ಟೀಕಿಸಿದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಏಕೆ ಹೆಚ್ಚುತ್ತಿವೆ ಎಂದು ಕೇಳಿದ್ದಾರೆ.
ಹರಿಯಾಣದ 22% ಮತದಾರರನ್ನು ಒಳಗೊಂಡಿರುವ ದಲಿತರು ಸಾಮಾನ್ಯವಾಗಿ ಸಂಪನ್ಮೂಲಗಳು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ತಿಳಿಸಿದರು. “ದಲಿತರು ಹೆಚ್ಚಾಗಿ ಸಣ್ಣ ಕೆಲಸಗಳಲ್ಲಿ ಅಥವಾ ಭೂಮಾಲೀಕರ ಹೊಲಗಳಲ್ಲಿ ದುಡಿಮೆಯಲ್ಲಿ ಬದುಕುತ್ತಾರೆ. ಅವರಿಗೆ ನೀಡಲಾದ ಸಾಂವಿಧಾನಿಕ ಹಕ್ಕುಗಳು ಹರಿಯಾಣದಲ್ಲಿ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿವೆ” ಎಂದು ಅವರು ಹೇಳಿದರು.
29% ಜಾಟ್ ಮತ್ತು ಜಾಟ್ ಸಿಖ್ ಮತದಾರರ ನಂತರ ಹರಿಯಾಣದಲ್ಲಿ ದಲಿತರು ಎರಡನೇ ಅತಿದೊಡ್ಡ ಮತ ಬ್ಯಾಂಕ್ ಆಗಿದ್ದಾರೆ. ಆದರೆ, ಅವರ ಧ್ವನಿಯನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ ಎಂದು ಸೆಲ್ಜಾ ಹೇಳಿದರು. “ಇಲ್ಲಿನ ಸಮುದಾಯಗಳು ಸಾಮರಸ್ಯದಿಂದ ಬದುಕುತ್ತಿರುವಾಗ, ಕೆಲವು ಅಂಶಗಳು ಆಗಾಗ್ಗೆ ಈ ಸಾಮರಸ್ಯವನ್ನು ಹಾಳುಮಾಡುತ್ತವೆ. ಆಳುವ ಶಕ್ತಿಗಳು ಮೌನವಾಗಿದ್ದು, ಅನ್ಯಾಯಗಳು ಮುಂದುವರಿಯಲು ಅವಕಾಶ ಮಾಡಿಕೊಡುತ್ತವೆ” ಎಂದು ಅವರು ಹೇಳಿದರು.
“ಸಬ್ಕಾ ಸಾಥ್, ಸಬ್ಕಾ ವಿಕಾಸ್” (ಎಲ್ಲರಿಗೂ ಅಭಿವೃದ್ಧಿ) ಎಂಬ ತನ್ನ ಘೋಷಣೆಗೆ ಬಿಜೆಪಿಯ ಬದ್ಧತೆಯನ್ನು ಪ್ರಶ್ನಿಸಿದ ಅವರು, “ದುರ್ಬಲ ಮತ್ತು ಹಿಂದುಳಿದ ವರ್ಗಗಳ ದಬ್ಬಾಳಿಕೆ ಈ ಘೋಷಣೆಯ ಹೊಸ ವ್ಯಾಖ್ಯಾನವೇ” ಎಂದರು.
ದಲಿತರು ಅನೇಕ ಹಂತಗಳಲ್ಲಿ ಅವಮಾನಕ್ಕೊಳಗಾಗುತ್ತಾರೆ; ತುಳಿತಕ್ಕೊಳಗಾಗುತ್ತಾರೆ. ಇಂದು, ದಲಿತರು ಘನತೆಯಿಂದ ಬದುಕಲು ಬಯಸುತ್ತಾರೆ. ಆದರೆ, ಇದು ಕೆಲವರಿಗೆ ಸ್ವೀಕಾರಾರ್ಹವಲ್ಲ. ದಲಿತ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಸರ್ಕಾರ ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ; ಗೋಹತ್ಯೆ ಶಂಕೆ : ವ್ಯಕ್ತಿಯನ್ನು ಥಳಿಸಿ ಕೊಂದ ಸ್ವಘೋಷಿತ ಗೋರಕ್ಷಕರು


