ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ಜೂನ್ 2023 ರಿಂದ ಜೈಲಿನಲ್ಲಿರುವ ತಮಿಳುನಾಡಿನ ಮಾಜಿ ವಿದ್ಯುತ್ ಸಚಿವ ವಿ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ನೀಡಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಅವರ ಆರೋಗ್ಯವನ್ನು ಉಲ್ಲೇಖಿಸಿ ಜಾಮೀನು ಅರ್ಜಿಯ ವಾದ ಆಲಿಸಲು ನಿರಾಕರಿಸಿತು. ಅವರ ವಾದಗಳಿಂದ ನಾವು ತೃಪ್ತಿ ಹೊಂದಿಲ್ಲ, ಅವರ ಸ್ಥಿತಿಯನ್ನು ಔಷಧಿಗಳಿಂದ ಗುಣಪಡಿಸಬಹುದು ಎಂದು ಹೇಳಿತ್ತು.
ಬಾಲಾಜಿ ಅವರು 2011-2016 ರ ಹಿಂದಿನ ಜಯಲಲಿತಾ ಅವರ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ಮನಿ-ಲಾಂಡರಿಂಗ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರು ಡಿಸೆಂಬರ್ 2018 ರಲ್ಲಿ ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ ಪ್ರಸ್ತುತ ಆಡಳಿತ ಪಕ್ಷವಾದ ಡಿಎಂಕೆಗೆ ಸೇರಿ ಸಚಿವರಾಗಿದ್ದರು.
ಬಾಲಾಜಿ ಅವರ ಜಾಮೀನು ಅರ್ಜಿಗಳನ್ನು ಫೆಬ್ರವರಿಯಲ್ಲಿ ಮದ್ರಾಸ್ ಹೈಕೋರ್ಟ್ ಎರಡು ಬಾರಿ ವಜಾಗೊಳಿಸಿತು. ಮೂರು ಬಾರಿ ವಿಚಾರಣಾ ನ್ಯಾಯಾಲಯವು ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಸರ್ವೋಚ್ಚ ನ್ಯಾಯಾಲಯವು ಪರಿಹಾರ ನೀಡಿದ ನಂತರ ಮಾತನಾಡಿದ ಅವರ ವಕೀಲ ಎನ್‌ಆರ್ ಇಳಂಗೊ, “ಪೂರ್ವಭಾವಿ ಅಪರಾಧ ಮತ್ತು ಪಿಎಂಎಲ್‌ಎ (ಹಣ ಲಾಂಡರಿಂಗ್ ತಡೆ ಕಾಯ್ದೆ) ಪ್ರಕರಣದಲ್ಲಿ ವಿಚಾರಣೆಯನ್ನು ನಡೆಸುವಲ್ಲಿ ದೀರ್ಘ ವಿಳಂಬ ಇರಬಹುದು” ಎಂದರು.
“ಕೆಲವು ಷರತ್ತುಗಳ ಮೇಲೆ ಜಾಮೀನು ನೀಡಲಾಗಿದೆ, ಅವರು ವಾರಕ್ಕೆ ಎರಡು ಬಾರಿ ಅಧಿಕಾರಿಗಳ ಮುಂದೆ ಹಾಜರಾಗಬೇಕು, ಸಾಕ್ಷ್ಯ ಅಥವಾ ಸಾಕ್ಷಿಗಳನ್ನು ಹಾಳು ಮಾಡಬಾರದು ಮತ್ತು ಅವರ ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕು” ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಬಾಲಾಜಿ ಅವರ ಬಿಡುಗಡೆಯನ್ನು ಅವರ ಬೆಂಬಲಿಗರು ಮತ್ತು ಡಿಎಂಕೆ ಪಕ್ಷದ ಕಾರ್ಯಕರ್ತರು ಪಟಾಕಿ ಸಂಭ್ರಮಿಸಿದ್ದಾರೆ. ಪಕ್ಷದ ಧ್ವಜಗಳನ್ನು ಬೀಸಿ, ಅವರ ಹೆಸರಿನಲ್ಲಿ ಘೋಷಣೆಗಳನ್ನು ಕೂಗಿದರು.
ಈಗ ಅವರನ್ನು ತಮಿಳುನಾಡು ಸಚಿವ ಸಂಪುಟಕ್ಕೆ ಮರುಸೇರ್ಪಡೆ ಮಾಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಬೆಂಬಲದ ಸೂಚಕವಾಗಿ ಸ್ಟಾಲಿನ್ ಅವರು ಬಾಲಾಜಿ ಅವರನ್ನು ಸಂಪುಟದಲ್ಲಿ ಉಳಿಸಿಕೊಂಡಿದ್ದರು. ಆದರೆ, ಅದು ರಾಜ್ಯಪಾಲ ಆರ್‌ಎನ್ ರವಿ ಅವರೊಂದಿಗೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ರಾಜಕೀಯ ಒತ್ತಾಯಗಳು ಸಾರ್ವಜನಿಕ ನೈತಿಕತೆಯನ್ನು ಮೀರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದ ನಂತರ ಅವರು ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದರು.
ಕಳೆದ ವರ್ಷ, ಗಂಟೆಗಳ ವಿಚಾರಣೆಯ ನಂತರ ಅವರನ್ನು ಅವರನ್ನು ಬಂಧಿಸಲಾಯಿತು; ಜಾರಿ ನಿರ್ದೇಶನಾಲಯವು ಅವರನ್ನು ವಶಕ್ಕೆ ತೆಗೆದುಕೊಂಡಿತ್ತು. ಕೆಲವೇ ಗಂಟೆಗಳ ಬಳಿಕ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಚೆನ್ನೈ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಮ್ ಚಿಕಿತ್ಸೆಗೆ ಒಳಗಾಗಿದ್ದರು.
ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಬಾಲಾಜಿ ತಮ್ಮ ಅಳಲು ತೋಡಿಕೊಂಡರು. ಆಂಬ್ಯುಲೆನ್ಸ್‌ನಲ್ಲಿ ಮತ್ತು ನಂತರ ಆಸ್ಪತ್ರೆಯಲ್ಲಿ ಅವರು ಅಳುತ್ತಿರುವ ದೃಶ್ಯಗಳು ವ್ಯಾಪಕವಾಗಿ ವೈರಲ್ ಆಗಿತ್ತು. ಅವರ ಹಲವಾರು ಡಿಎಂಕೆ ಸಹೋದ್ಯೋಗಿಗಳು ಬೆಂಬಲವಾಗಿ ಮಾತನಾಡಿದರು, ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಫೆಡರಲ್ ಏಜೆನ್ಸಿಯನ್ನು ದೂಷಿಸಿದರು.
ಇದನ್ನೂ ಓದಿ; ಇಸ್ರೇಲ್ ವಾಯುದಾಳಿ: ಲೆಬನಾನ್ ಪ್ರಯಾಣ ತಪ್ಪಿಸುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ


