Homeಮುಖಪುಟಸದನದಲ್ಲಿ ಪ್ರಶ್ನೆ ಕೇಳಲು ಲಂಚ : ಲೋಕಪಾಲ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಂಸದೆ ಮಹುವಾ

ಸದನದಲ್ಲಿ ಪ್ರಶ್ನೆ ಕೇಳಲು ಲಂಚ : ಲೋಕಪಾಲ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಂಸದೆ ಮಹುವಾ

- Advertisement -
- Advertisement -

ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡಿದ ಲೋಕಪಾಲ್‌ ಆದೇಶ ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಅನಿಲ್ ಕ್ಷೇತ್ರರ್ಪಾಲ್ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು, ಮೊದಲು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ಅನುಮತಿ ಆದೇಶವನ್ನು ಸಂಪೂರ್ಣವಾಗಿ ಓದುವುದಾಗಿ ಹೇಳಿದ್ದು, ವಿಚಾರಣೆಯನ್ನು ನವೆಂಬರ್ 21ಕ್ಕೆ ಪಟ್ಟಿ ಮಾಡಿದೆ.

ಲೋಕಪಾಲ್ ಕಾಯ್ದೆಯ ಸೆಕ್ಷನ್ 20(7)(ಎ) ಮತ್ತು ಸೆಕ್ಷನ್ 23(1) ರ ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿದ್ದ ಲೋಕಪಾಲ್‌, ನವೆಂಬರ್ 12 ರಂದು ಸಿಬಿಐಗೆ ನಾಲ್ಕು ವಾರಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು. ಜೊತೆಗೆ ಆರೋಪಪಟ್ಟಿಯ ಪ್ರತಿಯನ್ನು ತನಗೆ ಸಲ್ಲಿಸುವಂತೆ ಆದೇಶಿಸಿತ್ತು.

ಲೋಕಪಾಲ್ ಕಾಯ್ದೆಯ ನಿಬಂಧನೆಗಳನ್ನು ಕಡೆಗಣಿಸಿ ಲೋಕಪಾಲ್ ಆದೇಶ ನೀಡಿದೆ ಮತ್ತು ಸ್ವಾಭಾವಿಕ ನ್ಯಾಯದ ತತ್ವಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಮಹುವಾ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ವಿವರವಾದ ಲಿಖಿತ ಮತ್ತು ಮೌಖಿಕ ವಾದ ಪರಿಗಣಿಸದೆಯೇ ಅನುಮತಿ ನೀಡಿರುವುದರಿಂದ ಲೋಕಪಾಲ್ ನೀಡಿರುವ ಆದೇಶ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ- 2013ಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಉದ್ಯಮಿ ದರ್ಶನ್ ಹಿರಾನಂದಾನಿ ಪರವಾಗಿ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಮಹುವಾ ಅವರು ನಗದು ಹಾಗೂ ಉಡುಗೊರೆಗಳನ್ನು ಪಡೆದಿರುವುದಾಗಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದರು.

ಈ ಬಗ್ಗೆ ಸೆಕ್ಷನ್ 20(3)(ಎ) ಅಡಿಯಲ್ಲಿ ಎಲ್ಲಾ ಅಂಶಗಳನ್ನು ತನಿಖೆ ಮಾಡಿ 6 ತಿಂಗಳೊಳಗೆ ವರದಿ ಸಲ್ಲಿಸುವಂತೆ ಲೋಕಪಾಲ್ ಈ ಹಿಂದೆ ಸಿಬಿಐಗೆ ನಿರ್ದೇಶಿಸಿತ್ತು.

ಲೋಕಪಾಲ್ ಅನುಮತಿ ಆದೇಶದ ಜಾರಿಯನ್ನು ತಕ್ಷಣವೇ ತಡೆಹಿಡಿಯದಿದ್ದರೆ ಸಿಬಿಐ ಆರೋಪಪಟ್ಟಿ ಸಲ್ಲಿಸಲು ಮುಂದಾಗುತ್ತದೆ. ಇದರಿಂದ ತನಗೆ ಸರಿಪಡಿಸಲಾಗದಷ್ಟು ಹಾನಿ ಮತ್ತು ತನ್ನಬಗೆಗೆ ಪೂರ್ವಾಗ್ರಹ ಮೂಡುತ್ತದೆ. ಇದರಿಂದ ತಾನು ಸಲ್ಲಿಸುತ್ತಿರುವ ರಿಟ್‌ ಅರ್ಜಿ ಬಹುತೇಕ ಅರ್ಹತೆ ಕಳೆದುಕೊಳ್ಳುತ್ತದೆ. ಆದ್ದರಿಂದ ನ್ಯಾಯಾಲಯ ತುರ್ತಾಗಿ ಅರ್ಜಿ ವಿಚಾರಣೆ ನಡೆಸುವಂತೆ ಮಹುವಾ ಮೊಯಿತ್ರಾ ಕೋರಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಟ ದಿಲೀಪ್ ಖುಲಾಸೆ: ತೀರ್ಪು ಹೊರಬಿದ್ದ ನಂತರ ಮೊದಲ ಪ್ರತಿಕ್ರಿಯೆ ನೀಡಿದ ಸಂತ್ರಸ್ತೆ: ನ್ಯಾಯಾಲದಲ್ಲಿ ನಂಬಿಕೆ ಕಳೆದುಕೊಂಡಿದ್ದೇನೆ ಎಂದ ನಟಿ

ಕೊಚ್ಚಿ: ಕೇರಳ ನಟಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿ, ಇತರ ಆರು ಮಂದಿಯನ್ನು ದೋಷಿಗಳು ಎಂದು ಘೋಷಿಸಿದ ತೀರ್ಪು ಹೊರಬಿದ್ದ ಸುಮಾರು ಒಂದು ವಾರದ ನಂತರ, ಸಂತ್ರಸ್ತ ನಟಿ ...

ಪಿತೂರಿ ಆರೋಪದಲ್ಲಿ ಜಿಮ್ಮಿ ಲೈ ದೋಷಿ ಎಂದು ತೀರ್ಪು ನೀಡಿದ ಹಾಂಗ್ ಕಾಂಗ್ ಹೈಕೋರ್ಟ್: ಇದು  “ನ್ಯಾಯದ ಗರ್ಭಪಾತ” ಎಂದ ಸಂಘಟನೆಗಳು

ಹಾಂಗ್ ಕಾಂಗ್ ಹೈಕೋರ್ಟ್ ಪ್ರಜಾಪ್ರಭುತ್ವ ಕಾರ್ಯಕರ್ತ, ಪತ್ರಕರ್ತ ಜಿಮ್ಮಿ ಲೈ ಅವರನ್ನು ಪಿತೂರಿ ಆರೋಪದ ಮೇಲೆ ದೋಷಿ ಎಂದು ತೀರ್ಪು ನೀಡಿದೆ.  ಚೀನಾದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೂರು ಆರೋಪಗಳಲ್ಲಿ ಪ್ರಜಾಪ್ರಭುತ್ವ ಕಾರ್ಯಕರ್ತ ಮತ್ತು...

ವಿದೇಶದಲ್ಲಿದ್ದಾಗ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಪೋಸ್ಟ್; ಮಂಗಳೂರಿನ ಯುವಕ ಕೇರಳ ಏರ್‌ಪೋರ್ಟ್‌ನಲ್ಲಿ ಬಂಧನ

ವಿದೇಶದಲ್ಲಿದ್ದಾಗ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಕಾರಿ ವಿಷಯವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಭಾರತಕ್ಕೆ ಬಂದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ ಎಂದು 'ಫ್ರೀ ಪ್ರೆಸ್‌...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ | ಸಂಚುಕೋರನಿಗೆ ಶಿಕ್ಷೆಯಾಗಿಲ್ಲ, ನ್ಯಾಯ ಇನ್ನೂ ಅಪೂರ್ಣ : ನಟಿ ಮಂಜು ವಾರಿಯರ್

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ, ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಸೋಮವಾರ (ಡಿ.8) ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ್ದ ದಿಲೀಪ್, ಮಾಜಿ ಪತ್ನಿ ಮಂಜು...

ಉತ್ತರ ಪ್ರದೇಶ| ದಲಿತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಮುಖಂಡನಿಗೆ ಜಾಮೀನು; ಬೆಂಬಲಿಗರಿಂದ ಸಂಭ್ರಮಾಚರಣೆ

ವಿದ್ಯುತ್ ಇಲಾಖೆಯ ದಲಿತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಸ್ಥಳೀಯ ಬಿಜೆಪಿ ಮುಖಂಡ ಮೌ ಜಿಲ್ಲಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಆತನಿಗೆ ಭವ್ಯ ಸ್ವಾಗತ ನೀಡಲಾಗಿದೆ. ಸಂಭ್ರಮಾಚರಣೆ...

15 ಜನರ ಸಾವಿಗೆ ಕಾರಣವಾದ ಬೋಂಡಿ ಬೀಚ್ ಹತ್ಯಾಕಾಂಡದ ಹಿಂದೆ ಪಾಕ್ ಮೂಲದ ತಂದೆ, ಮಗನ ಕೈವಾಡ

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಹನುಕ್ಕಾ ಕಾರ್ಯಕ್ರಮದಲ್ಲಿ ನಡೆದ ಮಾರಕ ಗುಂಡಿನ ದಾಳಿಯ ಹಿಂದೆ ಪಾಕಿಸ್ತಾನದ ತಂದೆ ಮತ್ತು ಮಗನ ಕೈವಾಡ ಇದೆ ಎಂದು ಹೇಳಿರುವ ಅಮೆರಿಕದ ಗುಪ್ತಚರ ಅಧಿಕಾರಿಗಳ ಮಾತುಗಳನ್ನು ಉಲ್ಲೇಖಿಸಿ ಸಿಬಿಎಸ್...

ಅತ್ಯಂತ ‘ಗಂಭೀರ’ ಮಟ್ಟ ತಲುಪಿದ ದೆಹಲಿಯ ವಾಯುಮಾಲಿನ್ಯ : ಶಾಲೆ, ನ್ಯಾಯಾಲಯಗಳು ವರ್ಚುವಲ್ ಮೋಡ್‌ನಲ್ಲಿ ಕಾರ್ಯಾಚರಣೆ

ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ಸೋಮವಾರ (ಡಿಸೆಂಬರ್ 15) 'ಅತ್ಯಂತ ಅಪಾಯಕಾರಿ' (Severe Category)ಮಟ್ಟ ತಲುಪಿದೆ. ಸಂಪೂರ್ಣ ನಗರ ದಟ್ಟವಾದ ಹೊಗೆಯಿಂದ (ಮಂಜು ಮತ್ತು ಧೂಳಿನ ಪದರ) ಅವೃತ್ತವಾಗಿದೆ. ಸರಾಸರಿ ವಾಯು ಗುಣಮಟ್ಟ...

ಕೋವಿಡ್-19 ಲಸಿಕೆ ಮತ್ತು ಯುವ ವಯಸ್ಕರ ಹಠಾತ್ ಸಾವುಗಳ ನಡುವೆ ಯಾವುದೇ ವೈಜ್ಞಾನಿಕ ಸಂಬಂಧ ಕಂಡುಬಂದಿಲ್ಲ: ಏಮ್ಸ್ ಅಧ್ಯಯನ

ನವದೆಹಲಿ: ದೆಹಲಿಯ ಏಮ್ಸ್‌ನಲ್ಲಿ ನಡೆಸಿದ ಒಂದು ವರ್ಷದ ಸಮಗ್ರ, ಶವಪರೀಕ್ಷೆ ಆಧಾರಿತ ವೀಕ್ಷಣಾ ಅಧ್ಯಯನವು, ಯುವ ವಯಸ್ಕರಲ್ಲಿ ಕೋವಿಡ್-19 ಲಸಿಕೆಯನ್ನು ಹಠಾತ್ ಸಾವುಗಳೊಂದಿಗೆ ಸಂಪರ್ಕಿಸುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ, ಇದು ಕೋವಿಡ್ ಲಸಿಕೆಗಳ...

ಬಿಜೆಪಿ ಜನ ನಾಟಕೀಯರು, ದೇಶದ್ರೋಹಿಗಳು; ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಮಲ್ಲಿಕಾರ್ಜುನ ಖರ್ಗೆ

"ಬಿಜೆಪಿಯವರು 'ಗದ್ದಾರ್‌ಗಳು' (ದೇಶದ್ರೋಹಿಗಳು) ಮತ್ತು 'ಡ್ರಮೆಬಾಜ್' (ನಾಟಕೀಯದಲ್ಲಿ ತೊಡಗಿಸಿಕೊಳ್ಳುವವರು). ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ಕೊಟ್ಟಿದ್ದಾರೆ.  ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವೋಟ್ ಚೋರಿ ಕುರಿತ...

ಆಸ್ಟ್ರೇಲಿಯಾ | ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಗುಂಡಿನ ದಾಳಿ : 12 ಜನರು ಸಾವು

ಭಾನುವಾರ (ಡಿ.14) ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಸಮುದಾಯದ 'ಹನುಕ್ಕಾ' ಕಾರ್ಯಕ್ರಮದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ....