ಜಾತಿ ಆಧಾರಿತ ಜನಗಣತಿ ನಡೆಸುವ ಕೇಂದ್ರದ ನಿರ್ಧಾರವನ್ನು ಪಿಡಿಎ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರು) ಮತ್ತು ಇಂಡಿಯಾ ಮೈತ್ರಿಯ ಒಗ್ಗಟ್ಟಿಗೆ ಸಿಕ್ಕ “100% ಗೆಲುವು” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬುಧವಾರ ಬಣ್ಣಿಸಿದ್ದಾರೆ. ಕೇಂದ್ರದಿಂದ ಜಾತಿಗಣತಿ ನಿರ್ಧಾರ
ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅಖಿಲೇಶ್, “ಜಾತಿ ಜನಗಣತಿ ನಡೆಸುವ ನಿರ್ಧಾರವು 90% ರಷ್ಟು ಇರುವ ಪಿಡಿಎಯ ಒಗ್ಗಟ್ಟಿನ 100%ದಷ್ಟು ವಿಜಯವಾಗಿದೆ. ನಮ್ಮ ಸಾಮೂಹಿಕ ಒತ್ತಡದಿಂದಾಗಿ, ಬಿಜೆಪಿ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಆಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಪಿಡಿಎಯ ಹೋರಾಟದಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ.” ಎಂದು ಹೇಳಿದ್ದಾರೆ.
“ಇದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ, ಜಾತಿ ಜನಗಣತಿಯ ತನ್ನ ಚುನಾವಣಾ ಮೋಸದಿಂದ ದೂರವಿರಿ. ಪ್ರಾಮಾಣಿಕ ಜನಗಣತಿ ಮಾತ್ರ ಪ್ರತಿ ಜಾತಿಯೂ ತನ್ನ ಜನಸಂಖ್ಯೆಯ ಆಧಾರದ ಮೇಲೆ ತನ್ನ ಸರಿಯಾದ ಪಾಲನ್ನು ಪಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು. ಇದನ್ನು ಇದುವರೆಗೆ ಪ್ರಬಲ ಶಕ್ತಿಗಳು ನಿರಾಕರಿಸಿವೆ” ಎಂದು ಅವರು ಹೇಳಿದ್ದಾರೆ.
जाति जनगणना का फ़ैसला 90% पीडीए की एकजुटता की 100% जीत है। हम सबके सम्मिलित दबाव से भाजपा सरकार मजबूरन ये निर्णय लेने को बाध्य हुई है। सामाजिक न्याय की लड़ाई में ये पीडीए की जीत का एक अतिमहत्वपूर्ण चरण है।
भाजपा सरकार को ये चेतावनी है कि अपनी चुनावी धांधली को जाति जनगणना से दूर… pic.twitter.com/n7oszx3v0N
— Akhilesh Yadav (@yadavakhilesh) April 30, 2025
ಈ ನಡೆಯನ್ನು ಪರಿವರ್ತನಾ ಚಳವಳಿಯ ಆರಂಭ ಎಂದು ಕರೆದ ಅಖಿಲೇಶ್, “ಇದು ಹಕ್ಕುಗಳಿಗಾಗಿ ಸಕಾರಾತ್ಮಕ ಪ್ರಜಾಸತ್ತಾತ್ಮಕ ಚಳವಳಿಯ ಮೊದಲ ಹಂತ ಮತ್ತು ಬಿಜೆಪಿಯ ನಕಾರಾತ್ಮಕ ರಾಜಕೀಯದ ಕೊನೆಯ ಹಂತ. ಬಿಜೆಪಿಯ ‘ಪ್ರಭುತ್ವವಾದಿ’ (ಪ್ರಾಬಲ್ಯ-ಚಾಲಿತ) ಚಿಂತನೆಯ ಅಂತ್ಯ ಅನಿವಾರ್ಯ.” ಎಂದು ಹೇಳಿದ್ದಾರೆ.
‘ಮನ್ವಿಧಾನ’ (ತನ್ನ ಸ್ವಂತ ಇಚ್ಛೆಯಂತೆ ಓಡಾಡುವುದು) ಸಂವಿಧಾನದ ವಿರುದ್ಧವಾಗಿದ್ದು, ದೀರ್ಘಕಾಲ ನಿಲ್ಲಲು ಸಾಧ್ಯವಿಲ್ಲ. ಇದು ಭಾರತದ ಗೆಲುವು ಎಂದು ಅವರು ಹೇಳಿದ್ದಾರೆ. ಅಖಿಲೇಶ್ ಅವರ ಎಸ್‌ಪಿ ಪಕ್ಷವೂ ತನ್ನ ಚುನಾವಣಾ ಪ್ರಚಾರಗಳಲ್ಲಿ ಜಾತಿಗಣತಿಯನ್ನು ನಿರಂತರವಾಗಿ ಪ್ರಮುಖ ವಿಷಯವನ್ನಾಗಿ ಮಾಡಿತ್ತು.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂಬರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಆಧಾರಿತ ಡೇಟಾವನ್ನು “ಪಾರದರ್ಶಕ ರೀತಿಯಲ್ಲಿ” ಸೇರಿಸಲು ಸರ್ಕಾರ ನಿರ್ಧರಿಸಿದೆ ಎಂದು ಘೋಷಿಸಿದ್ದಾರೆ. ಜನಗಣತಿ ಕೇಂದ್ರ ವಿಷಯವಾಗಿದ್ದರೂ, ಕೆಲವು ರಾಜ್ಯಗಳು ವಿಭಿನ್ನ ಹೆಸರುಗಳಲ್ಲಿ ಜಾತಿ ಸಮೀಕ್ಷೆಗಳನ್ನು ಪ್ರಯತ್ನಿಸಿವೆ ಎಂದು ಅವರು ಹೇಳಿದ್ದಾರೆ.
ಮೂಲತಃ ಏಪ್ರಿಲ್ 2020 ರಲ್ಲಿ ಪ್ರಾರಂಭವಾಗಬೇಕಿದ್ದ ರಾಷ್ಟ್ರೀಯ ಜನಗಣತಿಯು ಕೊರೊನಾ ಕಾರಣಕ್ಕೆ ವಿಳಂಬವಾಗಿದ್ದು, 2025 ಆದರೂ ಇನ್ನೂ ಈ ಬಗ್ಗೆ ಕೇಂದ್ರ ಸರ್ಕಾರ ಸರಿಯಾದ ತೀರ್ಮಾನ ಕೈಗೊಂಡಿಲ್ಲ. ಕೇಂದ್ರದಿಂದ ಜಾತಿಗಣತಿ ನಿರ್ಧಾರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉತ್ತರ ಪ್ರದೇಶ | ‘ಮುಸ್ಲಿಂ ಬಹಿಷ್ಕಾರ’ಕ್ಕೆ ಹಿಂದುತ್ವವಾದಿಗಳ ಒತ್ತಡ: ಸಾಧ್ಯವಿಲ್ಲ ಎಂದ ಬಂಕೆ ಬಿಹಾರಿ ದೇವಾಲಯ
ಉತ್ತರ ಪ್ರದೇಶ | ‘ಮುಸ್ಲಿಂ ಬಹಿಷ್ಕಾರ’ಕ್ಕೆ ಹಿಂದುತ್ವವಾದಿಗಳ ಒತ್ತಡ: ಸಾಧ್ಯವಿಲ್ಲ ಎಂದ ಬಂಕೆ ಬಿಹಾರಿ ದೇವಾಲಯ

