ಕೇಂದ್ರ ಸರ್ಕಾರ ಘೋಷಿಸಿರುವ ಜಾತಿಗಣತಿಗೆ ಸಾಕಷ್ಟು ಹಣ ಹಂಚಿಕೆ ಮತ್ತು ಸಮಯ ಮಿತಿಯನ್ನು ನಿಗದಿಪಡಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಜಾತಿ ಗಣತಿಯನ್ನು ಒತ್ತಾಯಿಸಿ ದೇಶಾದ್ಯಂತ ಅದಕ್ಕಾಗಿ ಆಂದೋಲನಗಳನ್ನು ನಡೆಸಿದ್ದು, ಈಗ ನಮ್ಮ ಉದ್ದೇಶವನ್ನು ಸಾಧಿಸಿದ್ದೇವೆ ಎಂದು ಸಂತೋಷಪಡುತ್ತೇವೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಅವರು ಹೇಳಿದ್ದಾರೆ.
“ಸಾಮಾನ್ಯ ಜನಗಣತಿಯ ಜೊತೆಗೆ ಜಾತಿ ಗಣತಿಯ ಬಗ್ಗೆ ನಾನು ಎರಡು ವರ್ಷಗಳ ಹಿಂದೆ ಪತ್ರ ಬರೆದಿದ್ದೆ. ಆಗ ಅವರು ಒಪ್ಪಲಿಲ್ಲ, ಆದರೆ ಈಗ ಸರ್ಕಾರ ಸಾಮಾನ್ಯ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ಒಳ್ಳೆಯ ವಿಚಾರವಾಗಿದೆ ಮತ್ತು ನಾವು ಇದಕ್ಕೆ ಸಂಪೂರ್ಣವಾಗಿ ಸಹಕರಿಸುತ್ತೇವೆ. ಆದರೆ ಅವರು (ಬಿಜೆಪಿ) ಜವಾಹರಲಾಲ್ ನೆಹರು ಅವರ ಬಗ್ಗೆ ಅವರು ಇದನ್ನು ವಿರೋಧಿಸುತ್ತಿದ್ದರು, ಅದು, ಇದು ಎಂದು ಅನಗತ್ಯವಾಗಿ ಕಾಮೆಂಟ್ ಮಾಡಬಾರದು” ಎಂದು ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಂಘ ಮತ್ತು ಆರ್‌ಎಸ್‌ಎಸ್ ಹುಟ್ಟಿನಿಂದಲೇ ಮೀಸಲಾತಿಯನ್ನು ವಿರೋಧಿಸುತ್ತವೆ. ಅಂತಹ ಜನರು ಈಗ ಕಾಂಗ್ರೆಸ್ ಜಾತಿ ಗಣತಿಯ ಪರವಾಗಿಲ್ಲ ಎಂದು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
“ನಾವು ಜಾತಿ ಜನಗಣತಿಯನ್ನು ವಿರೋಧಿಸಿದ್ದರೆ, ಎರಡು ವರ್ಷಗಳ ಹಿಂದೆಯೇ ನಾನು ಪತ್ರ ಬರೆಯುತ್ತಿದ್ದೆವೆಯೆ? ಅದಕ್ಕಾಗಿ ನಾವು ಇಷ್ಟೊಂದು ಆಂದೋಲನಗಳನ್ನು ನಡೆಸುತ್ತಿದ್ದೆವಾ? ಅವರು (ಬಿಜೆಪಿ) ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಾರೆ ಮತ್ತು ದೇಶದ ಕಲ್ಯಾಣದಲ್ಲಿ ತಾವು ಮಾತ್ರ ಆಸಕ್ತಿ ಹೊಂದಿದ್ದೇವೆ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಇದು ನಕಲಿ ನಡವಳಿಕೆಯಾಗಿದ್ದು, ಅದನ್ನು ನಾನು ಒಪ್ಪುವುದಿಲ್ಲ. ರಾಜಕೀಯ ಉದ್ದೇಶಗಳಿಗಾಗಿ, ಅವರು ಯಾವಾಗಲೂ ಅಂತಹ ಕೆಲಸಗಳನ್ನು ಮಾಡುತ್ತಲೆ ಬಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಬುಧವಾರ ಮುಂಬರುವ ಜನಗಣತಿ ಪ್ರಕ್ರಿಯೆಯಲ್ಲಿ “ಪಾರದರ್ಶಕ” ರೀತಿಯಲ್ಲಿ ಜಾತಿಗಣತಿ ಮಾಡಲಿದ್ದೇವೆ ಎಂದು ಘೋಷಿಸಿದೆ.
ಸರ್ಕಾರವು ತನ್ನ ಘೋಷಣೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ ಖರ್ಗೆ, ಸರ್ಕಾರ ಈ ಪ್ರಕ್ರಿಯೆಗೆ ಸಾಕಷ್ಟು ಹಣವನ್ನು ಹಂಚಿಕೆ ಮಾಡಿಲ್ಲ ಮತ್ತು ಹಣವಿಲ್ಲದೆ ಸಮೀಕ್ಷೆಯನ್ನು ಹೇಗೆ ನಡೆಸಲು ಸಾಧ್ಯ ಎಂದು ಕೇಳಿದ್ದಾರೆ. “ಅವರು ಅದಕ್ಕಾಗಿ ಸಮಯ ಮಿತಿಯನ್ನು ಸಹ ನಿಗದಿ ಮಾಡಬೇಕು. ಯಾವುದೇ ಸಮಯ ಮಿತಿ ನಿಗದಿ ಮಾಡದಿದ್ದರೆ, ಅದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ನನ್ನ ಸಲಹೆಯೆಂದರೆ ಅವರು ಜಾತಿಗಣತಿಗೆ ವಿಶೇಷ ಗಮನ ನೀಡಬೇಕು ಮತ್ತು ಎರಡು ಅಥವಾ ಮೂರು ತಿಂಗಳೊಳಗೆ… ಅಥವಾ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಿದರೂ ಅವರು ಸಮೀಕ್ಷೆಯನ್ನು ನಡೆಸಿ ಜನರ ಭರವಸೆ ಮತ್ತು ಬೇಡಿಕೆಯನ್ನು ಪೂರೈಸಬೇಕು.” ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಜೆಪಿ ಯೂಟರ್ನ್ | ಮಾವೋವಾದಿ ಚಿಂತನೆಗೆ ಮನಸೋತು ನಗರ ನಕ್ಸಲ್ ಆದರೆ ಪ್ರಧಾನಿ ಮೋದಿ?
ಬಿಜೆಪಿ ಯೂಟರ್ನ್ | ಮಾವೋವಾದಿ ಚಿಂತನೆಗೆ ಮನಸೋತು ನಗರ ನಕ್ಸಲ್ ಆದರೆ ಪ್ರಧಾನಿ ಮೋದಿ?

