ರಾಜಕೀಯ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯು ಮುಂದಿನ ಜನಗಣತಿಯಲ್ಲಿ ಜಾತಿ ಗಣತಿಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ತಿಳಿಸಿದ್ದಾರೆ. ಅದಾಗ್ಯೂ, ಈ ಕಾರ್ಯ ಯಾವಾಗ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿಲ್ಲ. ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಜಾತಿ ಗಣತಿಯ ಬೇಡಿಕೆಯನ್ನು “ಕೇವಲ ರಾಜಕೀಯ ಸಾಧನವಾಗಿ” ಬಳಸಿಕೊಂಡಿವೆ ಎಂದು ಕೇಂದ್ರ ಸಚಿವ ಇದೇ ವೇಳೆ ಆರೋಪಿಸಿದ್ದಾರೆ. ಮುಂದಿನ ಜನಗಣತಿಯೊಂದಿಗೆ
“ಕಾಂಗ್ರೆಸ್ ಸರ್ಕಾರಗಳು ಯಾವಾಗಲೂ ಜಾತಿ ಗಣತಿಯನ್ನು ವಿರೋಧಿಸುತ್ತಿದ್ದವು. ಸ್ವಾತಂತ್ರ್ಯದ ನಂತರ ನಡೆದ ಎಲ್ಲಾ ಜನಗಣತಿ ಕಾರ್ಯಾಚರಣೆಗಳಲ್ಲಿ ಜಾತಿಯನ್ನು ಸೇರಿಸಲಾಗಿಲ್ಲ.” ಎಂದು ಸಚಿವ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಜಾತಿ ಎಣಿಕೆ ಮಾಡಲು 2011 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಡೆಸಿದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯು ಒಂದು ಸಮೀಕ್ಷೆಯಾಗಿತ್ತು, ಅದು ಜನಗಣತಿಯಲ್ಲ ಎಂದು ಅವರು ಹೇಳಿದ್ದಾರೆ. ಅದಾಗ್ಯೂ, ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯಲ್ಲಿ ಜಾತಿಗಳಿಗೆ ಸಂಬಂಧಿಸಿದ ಡೇಟಾವನ್ನು ಸಾರ್ವಜನಿಕಗೊಳಿಸಲಾಗಿಲ್ಲ.
ವಿರೋಧ ಪಕ್ಷಗಳು ಹಲವು ಸಮಯದಿಂದ ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ಒತ್ತಾಯಿಸುತ್ತಿವೆ. ಈ ಗಣತಿಯು ದೇಶದ ಇತರ ಹಿಂದುಳಿದ ವರ್ಗಗಳು ಮತ್ತು ಇತರ ಜಾತಿಗಳ ನಿಜವಾದ ಜನಸಂಖ್ಯೆಯನ್ನು ಗುರುತಿಸಲು ಸಹಾಯ ಮಾಡುತ್ತದೆ, ಜೊತೆಗೆ ವಿಸ್ತೃತ ಮೀಸಲಾತಿಯಂತಹ ನೀತಿಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ವಾದಿಸುತ್ತಾರೆ.
ಜನಗಣತಿಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕೆಲವು ರಾಜ್ಯಗಳು ಜಾತಿಗಳನ್ನು ಎಣಿಸಲು ನಡೆಸಿದ ಪ್ರಕ್ರಿಯೆಗಳು ಸಮೀಕ್ಷೆಗಳಾಗಿದ್ದವು ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.
“ಕೆಲವು ರಾಜ್ಯಗಳು ಇದನ್ನು ಚೆನ್ನಾಗಿ ಮಾಡಿವೆ, ಆದರೆ ಇನ್ನು ಕೆಲವು ರಾಜ್ಯಗಳು ಅಂತಹ ಸಮೀಕ್ಷೆಗಳನ್ನು ಸಂಪೂರ್ಣವಾಗಿ ರಾಜಕೀಯ ದೃಷ್ಟಿಕೋನದಿಂದ ಪಾರದರ್ಶಕವಲ್ಲದ ರೀತಿಯಲ್ಲಿ ನಡೆಸಿವೆ. ಇಂತಹ ಸಮೀಕ್ಷೆಗಳು ರಾಜ್ಯದಲ್ಲಿ ಅನುಮಾನಗಳನ್ನು ಸೃಷ್ಟಿಸಿವೆ” ಎಂದು ಅವರು ಹೇಳಿದ್ದಾರೆ.
ಬಿಹಾರ ಮತ್ತು ತೆಲಂಗಾಣ ತಮ್ಮ ಜಾತಿ ಸಮೀಕ್ಷೆಯ ಡೇಟಾವನ್ನು ಬಿಡುಗಡೆ ಮಾಡಿವೆ. ಜಾರ್ಖಂಡ್ 2025-26ರ ಹಣಕಾಸು ವರ್ಷದಲ್ಲಿ ತನ್ನ ಜಾತಿ ಸಮೀಕ್ಷೆಯನ್ನು ನಡೆಸುವುದಾಗಿ ಹೇಳಿದೆ.
“ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿ ಮತ್ತು ನಮ್ಮ ಸಾಮಾಜಿಕ ರಚನೆಯು ರಾಜಕೀಯದಿಂದ ತೊಂದರೆಗೊಳಗಾಗದಂತೆ ನೋಡಿಕೊಳ್ಳಲು, ಜಾತಿ ಎಣಿಕೆಯನ್ನು ಸಮೀಕ್ಷೆಗಳ ಬದಲಿಗೆ ಜನಗಣತಿಯಲ್ಲಿ ಪಾರದರ್ಶಕವಾಗಿ ಸೇರಿಸಬೇಕು. ಇದು ರಾಷ್ಟ್ರವು ಪ್ರಗತಿಯನ್ನು ಮುಂದುವರಿಸುವಾಗ ನಮ್ಮ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ರಚನೆಯನ್ನು ಬಲಪಡಿಸುತ್ತದೆ.” ಎಂದು ಸಚಿವ ವೈಷ್ಣವ್ ಹೇಳಿದ್ದಾರೆ.
ತೆಲುಗು ದೇಶಂ ಪಕ್ಷ, ಕೇಂದ್ರ ಸಚಿವರಾದ ಚಿರಾಗ್ ಪಾಸ್ವಾನ್ ಮತ್ತು ರಾಮದಾಸ್ ಅಠಾವಳೆ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಆಡಳಿತಾರೂಢ ಬಿಜೆಪಿಯ ಹಲವಾರು ಮಿತ್ರಪಕ್ಷಗಳು ಜಾತಿ ಜನಗಣತಿಯ ಬೇಡಿಕೆಗಳನ್ನು ಬೆಂಬಲಿಸಿವೆ. ಮುಂದಿನ ಜನಗಣತಿಯೊಂದಿಗೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಮುಂಬೈ ಕೋರ್ಟ್
ಮೆಹುಲ್ ಚೋಕ್ಸಿ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ಮುಂಬೈ ಕೋರ್ಟ್

