Homeಮುಖಪುಟ"ಜಾತಿ ಭಾರತವನ್ನು ಒಗ್ಗೂಡಿಸುವ ಅಂಶ" : ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡ ಆರ್‌ಎಸ್‌ಎಸ್‌ ಮುಖವಾಣಿ ; ವರದಿ

“ಜಾತಿ ಭಾರತವನ್ನು ಒಗ್ಗೂಡಿಸುವ ಅಂಶ” : ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡ ಆರ್‌ಎಸ್‌ಎಸ್‌ ಮುಖವಾಣಿ ; ವರದಿ

- Advertisement -
- Advertisement -

ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಇತ್ತೀಚಿಗೆ ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜಾತಿ ಪ್ರಶ್ನಿಸಿ ವಿವಾದವೊಂದನ್ನು ಸೃಷ್ಟಿಸಿದ್ದರು. ಈ ಹಿನ್ನೆಲೆ ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ ಸಾಪ್ತಾಹಿಕವು ತನ್ನ ಇತ್ತೀಚಿನ ಸಂಚಿಕೆಯಲ್ಲಿ ಜಾತಿ ವ್ಯವಸ್ಥೆಯನ್ನು ಬಲವಾಗಿ ಸಮರ್ಥಿಸಿದೆ ಎಂದು indianexpress.com ವರದಿ ಮಾಡಿದೆ.

ಜಾತಿ ವ್ಯವಸ್ಥೆಯನ್ನು ಭಾರತೀಯ ಸಮಾಜದ “ಒಗ್ಗೂಡಿಸುವ ಅಂಶ” ಎಂದು ತನ್ನ ಸಂಪಾದಕೀಯದಲ್ಲಿ ಪ್ರತಿಪಾದಿಸಿರುವ ವಾರಪತ್ರಿಕೆ, “ಮೊಘಲರಿಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಬ್ರಿಟಿಷರು ಅದನ್ನು ತಮ್ಮ ಭಾರತವನ್ನು ಆಕ್ರಮಿಸುವ ಮಾರ್ಗದಲ್ಲಿನ ತಡೆ ಎಂಬುವುದಾಗಿ ಪರಿಗಣಿಸಿದ್ದರು” ಎಂದಿದೆ.

“ಜಾತಿ ವ್ಯವಸ್ಥೆಯು ಭಾರತದ ವಿವಿಧ ವರ್ಗಗಳನ್ನು ಅವರ ವೃತ್ತಿ ಮತ್ತು ಸಂಪ್ರದಾಯದ ಆಧಾರದಲ್ಲಿ ವರ್ಗೀಕರಿಸಿದ ಒಂದು ಸರಪಳಿಯಾಗಿತ್ತು. ಕೈಗಾರಿಕಾ ಕ್ರಾಂತಿಯ ನಂತರ, ಬಂಡವಾಳಶಾಹಿಗಳು ಜಾತಿ ವ್ಯವಸ್ಥೆಯನ್ನು ಭಾರತದ ಕಾವಲುಗಾರನಂತೆ ನೋಡಿದರು” ಎಂದು ವಾರಪತ್ರಿಕೆಯ ಸಂಪಾದಕ ಹಿತೇಶ್ ಶಂಕರ್ ಸಂಪಾದಕೀಯದಲ್ಲಿ ಹೇಳಿದ್ದಾರೆ” ಎಂದು indianexpress.com ಹೇಳಿದೆ.

“ಜಾತಿ ವ್ಯವಸ್ಥೆಯು ಯಾವಾಗಲೂ ಆಕ್ರಮಣಕೋರರ ಗುರಿಯಾಗಿತ್ತು ಎಂದು ವಾದಿಸಿರುವ ಶಂಕರ್,‌ ಮೊಘಲರು ತಮ್ಮ ಖಡ್ಗದ ಬಲದಿಂದ ಅದನ್ನು ಗುರಿಯಾಗಿಸಿಕೊಂಡಿದ್ದರೆ, ಕ್ರೈಸ್ತ ಮಿಶನರಿಗಳು ಸೇವೆ ಮತ್ತು ಸುಧಾರಣೆಯ ಸೋಗಿನಲ್ಲಿ ಹಾಗೆ ಮಾಡಿದ್ದರು. ಜಾತಿಯ ರೂಪದಲ್ಲಿ ಭಾರತೀಯ ಸಮಾಜವು ಒಬ್ಬರ ಜಾತಿಗೆ ದ್ರೋಹವನ್ನು ಬಗೆಯುವುದು ದೇಶಕ್ಕೆ ದ್ರೋಹವಾಗಿದೆ ಎಂಬ ಸರಳವಾದ ವಿಷಯವನ್ನು ಅರ್ಥ ಮಾಡಿಕೊಂಡಿದೆ. ಮಿಶನರಿಗಳು ಭಾರತದ ಈ ಒಗ್ಗಟ್ಟಿನ ಸಮೀಕರಣವನ್ನು ಮೊಘಲರಿಗಿಂತ ಚೆನ್ನಾಗಿ ಅರಿತಿದ್ದರು. ಭಾರತ ಮತ್ತು ಅದರ ಸ್ವಾಭಿಮಾನವನ್ನು ಮುರಿಯಬೇಕಿದ್ದರೆ ಮೊದಲು ಜಾತಿ ವ್ಯವಸ್ಥೆಯನ್ನು ಬಂಧನ ಅಥವಾ ಶೃಂಖಲೆ ಎಂದು ಕರೆಯುವ ಮೂಲಕ ಜಾತಿಯ ಏಕೀಕರಣ ಸಮೀಕರಣವನ್ನು ಮುರಿಯಬೇಕು ಎನ್ನುವುದನ್ನು ಅವರು ಕಂಡುಕೊಂಡಿದ್ದರು. ಜಾತಿ ವ್ಯವಸ್ಥೆಯ ಕುರಿತು ಮಿಶನರಿಗಳ ಈ ತಿಳುವಳಿಕೆಯನ್ನು ಬ್ರಿಟಿಷರು ತಮ್ಮ ‘ಒಡೆದು ಆಳುವ’ ನೀತಿಗಾಗಿ ಅಳವಡಿಸಿಕೊಂಡಿದ್ದರು” ಎಂದು ಸಂಪಾದಕೀಯವು ವಾದಿಸಿದೆ ವರದಿ ತಿಳಿಸಿದೆ.

‘ಪಾಂಚಜನ್ಯ’ ದಿಂದ ಜಾತಿ ವ್ಯವಸ್ಥೆಯ ಈ ಸಮರ್ಥನೆಯು ಮಹತ್ವದ್ದಾಗಿದೆ, ಏಕೆಂದರೆ ವಂಚಿತ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಗೆ ತಾನು ವಿರುದ್ಧವಾಗಿಲ್ಲ ಎಂದು ವಿವರಿಸುವುದು ಆರೆಸ್ಸೆಸ್‌ಗೆ ಕಷ್ಟವಾಗಿರುವ ಸಮಯದಲ್ಲಿ ಈ ಸಮರ್ಥನೆ ಬಂದಿದೆ.

ಜಾತಿ ತಾರತಮ್ಯವು ಭಾರತೀಯ ಸಮಾಜಕ್ಕೆ ಶಾಪವಾಗಿದೆ ಮತ್ತು ಅದನ್ನು ತೊಡೆದುಹಾಕಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಪದೇ ಪದೇ ಹೇಳುತ್ತಾರೆ. ತಮ್ಮ ಸಹೋದ್ಯೋಗಿಗಳ ಜಾತಿ ತಮಗೆ ತಿಳಿದಿಲ್ಲ ಎಂದು ಆರೆಸ್ಸೆಸ್ ಸದಸ್ಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಕಳೆದ 2,000 ವರ್ಷಗಳಿಂದ ಕೆಳಜಾತಿಗಳು ಅನುಭವಿಸಿರುವ ತಾರತಮ್ಯವನ್ನು ಸರಿದೂಗಿಸಲು ಮೀಸಲಾತಿಯನ್ನು ಇನ್ನೂ 200 ವರ್ಷಗಳ ಕಾಲ ಮುಂದುವರಿಸಿದರೂ ತಾನು ಅದನ್ನು ಬೆಂಬಲಿಸುತ್ತೇನೆ ಎಂದು ಭಾಗವತ್ ಕಳೆದ ವರ್ಷ ಹೇಳಿದ್ದರು.

“ಒಂದು ಜಾತಿ ಗುಂಪಿನಲ್ಲಿ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಗೊಂಡ ಕೌಶಲ್ಯಗಳಿಂದಾಗಿ ಬಂಗಾಳದ ನೇಕಾರರಂತಹ ಕುಶಲಕರ್ಮಿಗಳು ಎಷ್ಟೊಂದು ನಿಪುಣರಾಗಿದ್ದರೆಂದರೆ ಅವರಂತೆ ಉತ್ಪನ್ನಗಳನ್ನು ಉತ್ಪಾದಿಸಲು ಮ್ಯಾಂಚೆಸ್ಟರ್‌ನ ಜವಳಿ ಗಿರಣಿಗಳಿಗೂ ಸಾಧ್ಯವಾಗಿರಲಿಲ್ಲ ಎಂದು ಪ್ರತಿಪಾದಿಸಿರುವ ಸಂಪಾದಕೀಯವು, ಆಕ್ರಮಣಕೋರರು ಭಾರತದ ಕೈಗಾರಿಕೆಗಳನ್ನು ನಾಶಗೊಳಿಸಿದ್ದು ಮಾತ್ರವಲ್ಲ, ಭಾರತದ ಅನನ್ಯತೆಯನ್ನು ಬದಲಿಸಲು ಮತಾಂತರದ ಮೇಲೂ ಕೇಂದ್ರೀಕರಿಸಿದ್ದರು. ಜಾತಿಗತ ಗುಂಪುಗಳು ಇದಕ್ಕೆ ಮಣಿಯದಿದ್ದಾಗ ಅವರನ್ನು ಅವಮಾನಿಸಲಾಗಿತ್ತು. ಸ್ವಾಭಿಮಾನಿ ಸಮುದಾಯವು ತನ್ನ ತಲೆಯ ಮೇಲೆ ಮಾನವ ಮಲ ಹೊರುವಂತೆ ಬಲವಂತಗೊಳಿಸಿದ್ದವರು ಇದೇ ಜನರಾಗಿದ್ದರು. ಅದಕ್ಕೂ ಮೊದಲು ಭಾರತದಲ್ಲಿ ಇಂತಹ ಸಂಪ್ರದಾಯವಿರಲಿಲ್ಲ”ಎಂದು ಹೇಳಿದೆ.

“ಭಾರತೀಯ ಪೀಳಿಗೆಗಳ ಪ್ರತಿಭೆಗಳನ್ನು ಕಂಡು ಮತ್ಸರ ಪಡುತ್ತಿದ್ದ ಅವೇ ಕಣ್ಣುಗಳು ಹಿಂದೂ ಧರ್ಮದ ವೈವಿಧ್ಯತೆ, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ನಾಶಗೊಳಿಸುವ ಕನಸು ಕಾಣುತ್ತಿವೆ” ಎಂದು ಶಂಕರ್ ಸಂಪಾದಕೀಯದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಂಪಾದಕೀಯ, “ಹಿಂದೂ ಜೀವನವು ಘನತೆ, ನೈತಿಕತೆ, ಜವಾಬ್ದಾರಿ ಮತ್ತು ಕೋಮು ಭ್ರಾತೃತ್ವವನ್ನು ಒಳಗೊಂಡಿದ್ದು, ಜಾತಿಯ ಸುತ್ತ ಸುತ್ತುತ್ತದೆ. ಇದು ವೈಯಕ್ತಿಕ ಕೇಂದ್ರಿತ ಮಿಷನರಿಗಳಿಗೆ ಅರ್ಥವಾಗದ ವಿಷಯ. ಮಿಷನರಿಗಳು ತಮ್ಮ ಮತಾಂತರ ಕಾರ್ಯಕ್ರಮಕ್ಕೆ ಜಾತಿಯನ್ನು ಅಡ್ಡಿಯಾಗಿ ಕಂಡರೆ, ಕಾಂಗ್ರೆಸ್ ಅದನ್ನು ಹಿಂದೂ ಐಕ್ಯತೆಗೆ ಒಂದು ತಡೆಯಾಗಿ ನೋಡುತ್ತದೆ. ಬ್ರಿಟಿಷರ ಮಾದರಿಯಲ್ಲಿ ಲೋಕಸಭೆ ಸ್ಥಾನಗಳನ್ನು ಜಾತಿ ಆಧಾರದ ಮೇಲೆ ವಿಭಜಿಸಿ ದೇಶದಲ್ಲಿ ವಿಭಜನೆಯನ್ನು ಹೆಚ್ಚಿಸಲು ಬಯಸುತ್ತಿದೆ. ಅದಕ್ಕಾಗಿಯೇ ಅದು ಜಾತಿ ಗಣತಿಯನ್ನು ಬಯಸುತ್ತದೆ ಎಂದು ಪಾಂಚಜನ್ಯ ಸಂಪಾದಕೀಯ ಹೇಳಿದೆ ಎಂದು indianexpress.com ವಿವರಿಸಿದೆ.

ಇದನ್ನೂ ಓದಿ : ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ; ಕೃತ್ಯದ ನಂತರ ತನ್ನ ಬಟ್ಟೆಗಳನ್ನು ತೊಳೆದಿದ್ದ ಆರೋಪಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ : 15 ಮಂದಿಗೆ 24 ಗಂಟೆಯೊಳಗೆ ದೇಶ ತೊರೆಯಲು ಆದೇಶ : ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡ ಕುಟುಂಬಸ್ಥರು

ಅಸ್ಸಾಂನ ನಾಗಾಂವ್ ಜಿಲ್ಲಾಡಳಿತವು 15 ಘೋಷಿತ ವಿದೇಶಿಯರಿಗೆ 24 ಗಂಟೆಗಳ ಒಳಗೆ ರಾಜ್ಯ ತೊರೆಯುವಂತೆ ಆದೇಶಿಸಿದ ಬಗ್ಗೆ ವರದಿಯಾಗಿದೆ. ಬುಧವಾರ (ಡಿ.17) ಜಿಲ್ಲಾಡಳಿತ ಈ ಆದೇಶ ನೀಡಿತ್ತು. ಆದರೆ, ಇದುವರೆಗೆ (ಡಿ.20) ಈ 15...

ಸಿರಿಯಾದ ಐಸಿಸ್ ಅಡಗುತಾಣಗಳ ಮೇಲೆ ಅಮೆರಿಕ ವಾಯುದಾಳಿ

ಕಳೆದ ವಾರ ಅಮೆರಿಕದ ಸಿಬ್ಬಂದಿ ಮೇಲೆ ನಡೆದ ಮಾರಕ ದಾಳಿಗೆ ಪ್ರತೀಕಾರವಾಗಿ ಅಮೆರಿಕವು ಮಧ್ಯ ಸಿರಿಯಾದಾದ್ಯಂತ ಡಜನ್‌ಗಟ್ಟಲೆ ಇಸ್ಲಾಮಿಕ್ ಸ್ಟೇಟ್ (ಐಎಸ್) ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಆಪರೇಷನ್ ಹಾಕೈ...

16 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ‘ಮನರೇಗಾ’ ಪಟ್ಟಿಯಿಂದ ಕೈಬಿಟ್ಟ ಕೇಂದ್ರ ಸರ್ಕಾರ: ವರದಿ

ಯುಪಿಎ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹೆಸರನ್ನು ಬದಲಿಸಲು ಪ್ರಯತ್ನಿಸುವ 'ವಿಕ್ಷಿತ್ ಭಾರತ್ - ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ–ಜಿ...

ಅಮೆರಿಕದ ಬಹು ನಿರೀಕ್ಷಿತ ‘ಎಪ್‌ಸ್ಟೀನ್ ಫೈಲ್ಸ್’ ಬಿಡುಗಡೆ : ಬಿಲ್ ಕ್ಲಿಂಟನ್, ಮೈಕಲ್ ಜಾಕ್ಸನ್ ಸೇರಿದಂತೆ ಪ್ರಮುಖರ ಫೋಟೋಗಳು ಬಹಿರಂಗ

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ(ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು...

ಕೋಮು ಸಾಮರಸ್ಯಕ್ಕಾಗಿ ಭಾರತದ ಮುಸ್ಲಿಮರು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು: ಜಮಾಅತ್ ಅಧ್ಯಕ್ಷ

'ಭಾರತದ ಮುಸ್ಲಿಮರು, ದೇಶದಲ್ಲಿ ಕೋಮು ಸಾಮರಸ್ಯಕ್ಕಾಗಿ ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳೊಂದಿಗೆ ಮುಂದೆ ಬರಬೇಕು' ಎಂದು ಜಮಾಅತೆ-ಇ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ ಅವರು ಒತ್ತಾಯಿಸಿದರು. ಕೋಮು ಸಾಮರಸ್ಯ ಇಲಾಖೆಯು ಆಯೋಜಿಸಿದ್ದ 'ಅಖಿಲ...

3 ವರ್ಷಗಳಲ್ಲಿ ರಷ್ಯಾ ಸೇನೆ ಸೇರಿದ 200 ಕ್ಕೂ ಹೆಚ್ಚು ಭಾರತೀಯರು; 26 ಮಂದಿ ಸಾವು: ವಿದೇಶಾಂಗ ಸಚಿವಾಲಯ

2022 ರಿಂದ ಕನಿಷ್ಠ 202 ಭಾರತೀಯ ಪ್ರಜೆಗಳು ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇಬ್ಬರನ್ನು ರಷ್ಯಾದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ)...

ಎಸ್‌ಐಆರ್‌ ಬಳಿಕ ಕರಡು ಮತದಾರರ ಪಟ್ಟಿ ಪ್ರಕಟ : ತಮಿಳುನಾಡಿನಲ್ಲಿ 97 ಲಕ್ಷ, ಗುಜರಾತ್‌ನಲ್ಲಿ 73 ಲಕ್ಷ ಹೆಸರು ಡಿಲೀಟ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ತಮಿಳುನಾಡು ಮತ್ತು ಗುಜರಾತ್‌ನ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದ್ದು, ಕ್ರಮವಾಗಿ 97.3 ಮತ್ತು 73.7 ಲಕ್ಷ ಮತದಾರರ...

ಅಸ್ಸಾಂ | ರಾಜಧಾನಿ ಎಕ್ಸ್ ಪ್ರೆಸ್ ರೈಲು ಢಿಕ್ಕಿ : 8 ಆನೆಗಳು ಸಾವು

ಶನಿವಾರ (ಡಿಸೆಂಬರ್ 20, 2025) ಬೆಳಗಿನ ಜಾವ ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸಾಯಿರಂಗ್-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಎಂಟು ಆನೆಗಳು ಸಾವನ್ನಪ್ಪಿದ್ದು, ಒಂದು ಗಾಯಗೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಐದು...

ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ...

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...