ರಾಜ್ಯ ಸಚಿವ ಸಂಪುಟ ಶುಕ್ರವಾರ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಸಮೀಕ್ಷೆ)ಯನ್ನು ಮಂಡನೆ ಮಾಡಿದೆ. ಏಪ್ರಿಲ್ 17 ರಂದು ನಿಗದಿಯಾಗಿರುವ ವಿಶೇಷ ಸಂಪುಟ ಸಭೆಯಲ್ಲಿ ಇದನ್ನು ಚರ್ಚಿಸಲಾಗುವುದು ಎಂದು ವರದಿ ಹೇಳಿದೆ. ಜಾತಿ ಸಮೀಕ್ಷೆ ವರದಿ
2015 ರಲ್ಲಿ ಎಚ್. ಕಾಂತರಾಜ್ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿ, ಫೆಬ್ರವರಿ 2024 ರಲ್ಲಿ ಅವರ ಉತ್ತರಾಧಿಕಾರಿ ಕೆ ಜಯಪ್ರಕಾಶ್ ಹೆಗ್ಡೆ ಅವರು ಅಂತಿಮಗೊಳಿಸಿದ ಈ ಸಮೀಕ್ಷೆಯನ್ನು ಮುಚ್ಚಿದ ಲಕೋಟೆಯಲ್ಲಿ ಸಚಿವ ಸಂಪುಟದ ಮುಂದೆ ಇಡಲಾಗಿದ್ದು, ಸಂಪುಟದ ಮುಂದೆಯೆ ಮುದ್ರೆ ತೆರೆಯಲಾಯಿತು.
ವರದಿಗಾರರಿಗೆ ಮಾಹಿತಿ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ, ಏಪ್ರಿಲ್ 17 ರ ಸಭೆಯ ಮೊದಲು ಎಲ್ಲಾ ಸಂಪುಟ ಸದಸ್ಯರು ಸಂಶೋಧನೆಗಳನ್ನು ಅಧ್ಯಯನ ಮಾಡುವಂತೆ ವರದಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ವರದಿಯು ವಿವಿಧ ಜಾತಿ ಮತ್ತು ಸಮುದಾಯ-ಸಂಬಂಧಿತ ಅಂಶಗಳ ಕುರಿತು ವಿವರಗಳನ್ನು ಒಳಗೊಂಡಿರುವ 50 ಸಂಪುಟಗಳನ್ನು ಹೊಂದಿದೆ.
ಸರ್ಕಾರವು ಸಮೀಕ್ಷೆಯ ಸಂಶೋಧನೆಗಳನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ ಎಂಬ ತನ್ನ ಪ್ರತಿಪಾದನೆಯನ್ನು ಸಮಸರ್ಥಿಸಲು ಸಮೀಕ್ಷೆ ನಡೆಸಿದ ಸಂಖ್ಯೆಗಳನ್ನು ಒದಗಿಸಿದೆ. ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು 2015 ರ ಈ ಸಮೀಕ್ಷೆಯನ್ನು ಸರಿಯಾಗಿ ಮಾಡಲಾಗಿಲ್ಲ ಮತ್ತು ಅವರ ಸಂಖ್ಯೆಯನ್ನು ಕಡಿಮೆ ಎಣಿಸಲಾಗಿದೆ ಎಂದು ವಾದಿಸಿವೆ.
“2011 ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ 6.11 ಕೋಟಿ. 2015 ರಲ್ಲಿ, ಸಮೀಕ್ಷೆ ನಡೆಸಿದಾಗ, ರಾಜ್ಯದ ಜನಸಂಖ್ಯೆ ಸುಮಾರು 6.35 ಕೋಟಿ ಎಂದು ಅಂದಾಜಿಸಲಾಗಿದೆ. ಸಮೀಕ್ಷೆಯು 5.98 ಕೋಟಿ ನಾಗರಿಕರನ್ನು ಒಳಗೊಂಡಿತ್ತು, ಇದು ಶೇಕಡಾ 94.17 ರ ವ್ಯಾಪ್ತಿಯಾಗಿದೆ” ಎಂದು ಸಚಿವ ತಂಗಡಗಿ ಹೇಳಿದ್ದಾರೆ.
ಸಮೀಕ್ಷೆಯಿಂದ ಕೇವಲ 37 ಲಕ್ಷ ಜನರು ಮಾತ್ರ ಹೊರಗುಳಿದಿದ್ದು, ಅಂದರೆ ಶೇಕಡಾ 5.83 ರಷ್ಟು ಜನರು ಸಮೀಕ್ಷೆಯನ್ನು ತಪ್ಪಿಸಿಕೊಂಡಿದ್ದಾರೆ ಎಂದು ತಂಗಡಗಿ ಹೇಳಿದ್ದಾರೆ. “1.6 ಲಕ್ಷ ಅಧಿಕಾರಿಗಳು ಸಮೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಸಮೀಕ್ಷೆಗಾಗಿ, ತಜ್ಞರ ಸಮಿತಿಯನ್ನು ರಚಿಸಲಾಯಿತು ಮತ್ತು ಅದು 54 ಮಾನದಂಡಗಳನ್ನು ನೀಡಿತು” ಎಂದು ಅವರು ಹೇಳಿದ್ದಾರೆ. ಜಾತಿ ಸಮೀಕ್ಷೆ ವರದಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜಾತಿ ತಾರತಮ್ಯದ ಆರೋಪ ಮಾಡಿದ ಬಿಎಚ್‌ಯು ದಲಿತ ಪ್ರಾಧ್ಯಾಪಕ

