2.5 ಕೋಟಿ ರೂಪಾಯಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ನಡೆಸಿದ ಒಂದು ದಿನದ ನಂತರ, ಮೀರತ್‌ನ ಬುಲಂದ್‌ಶಹರ್‌ನಲ್ಲಿ ಅಂಚೆ ಕಚೇರಿಯ ದಲಿತ ಉದ್ಯೋಗಿಯೊಬ್ಬರು ಭಾನುವಾರ ಮುಂಜಾನೆ ರೈಲಿನ ಮುಂದೆ ಹಾರಿ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಲಖೋಥಿ ಬ್ಲಾಕ್ ಪೋಸ್ಟ್ ಆಫೀಸ್‌ನಲ್ಲಿ ಸಬ್ ಪೋಸ್ಟ್‌ಮಾಸ್ಟರ್ ಆಗಿದ್ದ ಬುಲಂದ್‌ಶಹರ್ ನಗರದ ನಿವಾಸಿ ರಾಹುಲ್ ಕುಮಾರ್ (28) ಅವರು, ಗಿರ್ಧಾರಿ ನಗರ ಪ್ರದೇಶದ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನವೆಂಬರ್ 26 ರಂದು ‘ಕರ್ತವ್ಯದಲ್ಲಿ ನಿರ್ಲಕ್ಷ್ಯ’ಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಶನಿವಾರ ವಿಚಾರಣೆ ನಡೆಸಲಾಯಿತು.
ಅವರ ಸೋದರ ಸಂಬಂಧಿ ಅಂಕಿತ್ ಕುಮಾರ್ ಮಾತನಾಡಿ, “ರಾಹುಲ್ ತೀವ್ರ ಒತ್ತಡದಲ್ಲಿದ್ದರು, ಅವರು ತಮ್ಮ ಹೆಸರನ್ನು ಪ್ರಕರಣದಿಂದ ತೆರವುಗೊಳಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಇದು ಅವರನ್ನು ಇಂಥ ಹೆಜ್ಜೆ ಇಡಲು ಕಾರಣವಾಯಿತು” ಎಂದು ಹೇಳಿದರು.
ತನ್ನ ಜೇಬಿನಲ್ಲಿ ಸಿಕ್ಕ ಸೂಸೈಡ್ ನೋಟ್‌ನಲ್ಲಿ ರಾಹುಲ್ ತಾನು ಮುಗ್ಧ ಎಂದು ಹೇಳಿಕೊಂಡಿದ್ದಾರೆ. ತನ್ನ ಸಹೋದ್ಯೋಗಿಗಳಿಗೆ ಕಿರುಕುಳ ಮತ್ತು ಜಾತಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾನು ತನ್ನ ವಿವಾಹೇತರ ಸಂಬಂಧವನ್ನು ಕಚೇರಿಯೊಳಗೆ ಬಹಿರಂಗಪಡಿಸಿದ ನಂತರ ಹಿರಿಯ ಮಹಿಳಾ ಸಹೋದ್ಯೋಗಿ ನನಗೆ ಕಿರುಕುಳ ನೀಡಿದರು. ಅವರು ಜಾತಿ ನಿಂದನೆಗಳನ್ನು ಬಳಸಿದರು ಮತ್ತು ಸುಳ್ಳು ಭ್ರಷ್ಟಾಚಾರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ” ಎಂದು ವಿವರಿಸಿದ್ದಾರೆ/
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ (ಎಸ್‌ಪಿ) ಶಂಕರ್ ಪ್ರಸಾದ್, “ಆತ್ಮಹತ್ಯೆ ಪತ್ರದಲ್ಲಿ ಮಾಡಲಾದ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಎಂದು ಹೇಳಿದರು.
ಬುಲಂದ್‌ಶಹರ್ ಹೆಡ್ ಪೋಸ್ಟ್ ಆಫೀಸ್‌ನ ಸೂಪರಿಂಟೆಂಡೆಂಟ್ ತ್ರಿಭುವನ್ ಪ್ರಸಾದ್ ಸಿಂಗ್ (55) ಒಳಗೊಂಡಿರುವ ಇದೇ ರೀತಿಯ ಪ್ರಕರಣದ ತಿಂಗಳ ನಂತರ ಈ ಘಟನೆ ನಡೆದಿದೆ. ಆಗಸ್ಟ್ 21 ರಂದು ಅಲಿಘರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸಿಂಗ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ; ತಮಿಳುನಾಡು: ಕಾರಿನ ಧೂಳಿನ ಮೇಲೆ ಗೀಚಿದ ದಲಿತ ಬಾಲಕನಿಗೆ ಥಳಿಸಿದ ಮಾಲೀಕ, ಪ್ರಶ್ನಿಸಿದವರಿಗೆ ಚಾಕು ಇರಿತ


