ಆರಾಧನಾ ಸ್ಥಳಗಳ ಕಾಯ್ದೆ-1991ರ ಸಾವಿಂಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಉದ್ದೇಶಪೂರ್ವ ವಿಳಂಬ ಮಾಡುತ್ತಿದೆ. ಇದರಿಂದ ವಿಚಾರಣೆ ತಡವಾಗುತ್ತಿದೆ ಎಂದು ಮಥುರಾದ ಶಾಹಿ ಈದ್ಗಾ ಮಸೀದಿ ಸಮಿತಿ ಆರೋಪಿಸಿದೆ.
ಕೇಂದ್ರ ಸರ್ಕಾರ ಯಾವುದೇ ಸೂಕ್ತ ಕಾರಣ ಕೊಡದೆ ಪ್ರತಿಕ್ರಿಯೆ ನೀಡಲು ವಿಳಂಬ ಮಾಡುತ್ತಿರುವ ಕಾರಣ, ಪ್ರತಿಕ್ರಿಯೆ ನೀಡುವ ಅವರ ಹಕ್ಕನ್ನು ರದ್ದುಗೊಳಿಸಿ ವಿಚಾರಣೆ ಮುಂದುವರೆಸುವಂತೆ ಮಸೀದಿ ಸಮಿತಿ ಸುಪ್ರೀಂ ಕೋರ್ಟ್‌ಗೆ ಕೋರಿದೆ.
ಮಾರ್ಚ್ 2021ರಲ್ಲಿ ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅವರು ಪದೇ ಪದೇ ಸಮಯ ವಿಸ್ತರಣೆ ಮಾಡುವಂತೆ ಕೋರುತ್ತಿದ್ದಾರೆ. ಇದುವರೆ ಅಫಿಡವಿಟ್ ಸಲ್ಲಿಸಿ ತಮ್ಮ ನಿಲುವು ವ್ಯಕ್ತಪಡಿಸಿಲ್ಲ. ವಿಚಾರಣೆ ವಿಳಂಬಗೊಳಿಸಲು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಮಸೀದಿ ಸಮಿತಿ ನ್ಯಾಯಾಲಯಕ್ಕೆ ತಿಳಿಸಿದೆ.
ಫೆಬ್ರವರಿ 17ಕ್ಕೆ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನಿಗದಿ ಮಾಡಿದೆ. ನ್ಯಾಯದ ಹಿತದೃಷ್ಠಿಯಿಂದ ಅಷ್ಟರೊಳಗೆ ಕೇಂದ್ರ ಸರ್ಕಾರ ತನ್ನ ಪ್ರತಿಕ್ರಿಯೆ ನೀಡಬೇಕು ಎಂದು ಮಸೀದಿ ಸಮಿತಿ ಅಗ್ರಹಿಸಿದೆ.
ಉತ್ತರ ಪ್ರದೇಶದ ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನಲ್ಲಿ 17 ಅರ್ಜಿಗಳು ವಿಚಾರಣೆಯ ಹಂತದಲ್ಲಿದೆ. ಇಲ್ಲಿ ಹಿಂದೂ ಪಕ್ಷಕಾರರು ಶಾಹಿ ಈದ್ಗಾ ಮಸೀದಿ ಇರುವ ಸಂಪೂರ್ಣ ಭೂಮಿಯ ಮೇಲೆ ಹಕ್ಕು ಪ್ರತಿಪಾದಿಸಿದ್ದಾರೆ. ಕೃಷ್ಣ ಜನ್ಮಸ್ಥಾನದ ಮೇಲೆ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಶಾಹಿ ಈದ್ಗಾ ಜೊತೆಗೆ ದೇಶದಲ್ಲಿ ಸಂಭಾಲ್ ಜಾಮಾ ಮಸೀದಿ, ಅಜ್ಮೀರ್ ದರ್ಗಾ ಶರೀಫ್ ಸೇರಿದಂತೆ ಹಲವು ಮಸೀದಿ-ಮಂದಿರಗಳ ವಿವಾದಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.
ಈ ನಡುವೆ ಮಸೀದಿ-ಮಂದಿರ ವಿವಾದದ ಯಾವುದೇ ಅರ್ಜಿಗಳನ್ನು ಪರಿಗಣಿಸಬಾರದು 1991 ಆರಾಧನಾ ಸ್ಥಳಗಳ ಕಾಯ್ದೆ ಎತ್ತಿ ಹಿಡಿಯಬೇಕೆಂದು ಸುಪ್ರೀಂ ಕೋರ್ಟ್‌ಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿ. ಸುಪ್ರೀಂ ಕೋರ್ಟ್ ಎಲ್ಲಾ ಅರ್ಜಿ ವಿಚಾರಣೆಗಳಿಗೆ ಮಧ್ಯಂತರ ತಡೆ ನೀಡಿದೆ.
‘ಜನ್ಮಸಿದ್ದ ಪೌರತ್ವ’ ಹಕ್ಕು ರದ್ದುಗೊಳಿಸಿದ ಟ್ರಂಪ್ : ಆತಂಕದಲ್ಲಿ ಲಕ್ಷಾಂತರ ಭಾರತೀಯರು


