ಏಮ್ಸ್ ಸುತ್ತಮುತ್ತಲಿನ ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಸುರಂಗಮಾರ್ಗಗಳಲ್ಲಿ ಬೀಡುಬಿಟ್ಟಿದ್ದ ಹಲವಾರು ರೋಗಿಗಳು ಮತ್ತು ಅವರ ಕುಟುಂಬಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಭೇಟಿ ಮಾಡಿದರು
“ಕೇಂದ್ರ ಮತ್ತು ದೆಹಲಿ ಸರ್ಕಾರವು ಹೊರ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರ ಬಗ್ಗೆ ಸಂವೇದನಾರಹಿತವಾಗಿದೆ ವರ್ತಿಸುತ್ತಿದೆ” ಎಂದು ಆರೋಪಿಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಏಮ್ಸ್ ಸುತ್ತಮುತ್ತಲಿನ ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಸುರಂಗಮಾರ್ಗಗಳಲ್ಲಿ ನೆಲೆಸಿರುವ ರೋಗಿಗಳು, ಕುಟುಂಬಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳು ಮತ್ತು ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು.
“ರೋಗದ ಹೊರೆ, ಕೊರೆಯುವ ಚಳಿ ಮತ್ತು ಸರ್ಕಾರದ ಅಸಂವೇದನಾಶೀಲತೆ, ಇಂದು ನಾನು ಏಮ್ಸ್ ಹೊರಗಿನ ರೋಗಿಗಳು ಮತ್ತು ಅವರ ಕುಟುಂಬಗಳನ್ನು ಭೇಟಿಯಾದೆ, ಅವರು ಚಿಕಿತ್ಸೆಗಾಗಿ ದೂರದೂರದಿಂದ ಬಂದಿದ್ದಾರೆ” ಎಂದು ರಾಹುಲ್ ಗಾಂಧಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಚಿಕಿತ್ಸೆ ಪಡೆಯುವ ಹಾದಿಯಲ್ಲಿ, ಅವರು ರಸ್ತೆಗಳು, ಪಾದಚಾರಿ ಮಾರ್ಗಗಳು ಮತ್ತು ಸುರಂಗಮಾರ್ಗಗಳಲ್ಲಿ ಮಲಗಲು ಒತ್ತಾಯಿಸಲ್ಪಡುತ್ತಾರೆ. ತಣ್ಣನೆಯ ನೆಲ, ಹಸಿವು ಮತ್ತು ಅನಾನುಕೂಲತೆಗಳ ನಡುವೆ ಭರವಸೆಯ ಜ್ವಾಲೆಯನ್ನು ಉರಿಯುತ್ತಲೇ ಇರುತ್ತಾರೆ” ಎಂದು ಹೇಳಿದರು.
“ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಸಾರ್ವಜನಿಕರ ಬಗೆಗಿನ ತಮ್ಮ ಜವಾಬ್ದಾರಿಯನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ” ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ; ಕೆಪಿಸಿಸಿ ನಾಯಕತ್ವ ಬದಲಾವಣೆ ವದಂತಿಗಳನ್ನು ತಳ್ಳಿಹಾಕಿದ ರಣದೀಪ್ ಸಿಂಗ್ ಸುರ್ಜೇವಾಲಾ


