ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2024 ರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ತಮಿಳುನಾಡು ವಿಧಾನಸಭೆಯು ಗುರುವಾರ ನಿರ್ಣಯವನ್ನು ಅಂಗೀಕರಿಸಿದೆ. ವಿವಾದಾತ್ಮಕ ಮಸೂದೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ಆಸ್ತಿ ಹಕ್ಕುಗಳ ಮೇಲಿನ ನೇರ ಉಲ್ಲಂಘನೆ ಮಾಡುತ್ತದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ. ಕೇಂದ್ರ ವಕ್ಫ್ ಮಸೂದೆ
ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಲ್ಪಸಂಖ್ಯಾತರು ಮತ್ತು ಬಿಜೆಪಿಯೇತರ ಆಡಳಿತದ ರಾಜ್ಯಗಳ ವಿರುದ್ಧ “ವ್ಯವಸ್ಥಿತ ತಾರತಮ್ಯ” ಎಸಗುತ್ತಿದೆ ಎಂದು ಆರೋಪಿಸಿದ್ದಾರೆ. “ವಕ್ಫ್ (ತಿದ್ದುಪಡಿ) ಮಸೂದೆಯು ಮುಸ್ಲಿಮರ ಧಾರ್ಮಿಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರವು ಮಾಡುತ್ತಿರುವ ಮತ್ತೊಂದು ಪ್ರಯತ್ನವಾಗಿದೆ” ಎಂದು ಸ್ಟಾಲಿನ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
“ಈ ಕಾನೂನು ವಕ್ಫ್ ಆಸ್ತಿಗಳ ಮೇಲಿನ ಸರ್ಕಾರದ ನಿಯಂತ್ರಣವನ್ನು ಹೆಚ್ಚಿಸುತ್ತದೆ, ಅವರ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.
“ಮಸೂದೆಯು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ತೀವ್ರವಾಗಿ ಹಾನಿ ಮಾಡುತ್ತದೆ. ಹಾಗಾಗಿ ಈ ಮಸೂದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ನಿರ್ಣಯವು ಪ್ರತಿಪಾದಿಸುತ್ತದೆ. ತಮಿಳುನಾಡು ಈಗಾಗಲೇ ಸಂಸದೀಯ ಜಂಟಿ ಸಮಿತಿಯ ಮುಂದೆ ತನ್ನ ವಿರೋಧವನ್ನು ದಾಖಲಿಸಿದ್ದು, ಆದರೆ ಅದನ್ನು ನಿರ್ಲಕ್ಷಿಸಲಾಗಿದೆ. ವಿಧಾನಸಭೆಯಲ್ಲಿ ಅದನ್ನು ಔಪಚಾರಿಕವಾಗಿ ವಿರೋಧಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಸ್ಟಾಲಿನ್ ಹೇಳಿದ್ದಾರೆ.
“ಪೌರತ್ವ ತಿದ್ದುಪಡಿ ಕಾಯ್ದೆಯಾಗಿರಲಿ, ಹಿಂದಿ ಹೇರಿಕೆಯಾಗಿರಲಿ, ಬಿಜೆಪಿಯೇತರ ರಾಜ್ಯಗಳ ವಿರುದ್ಧ ಆರ್ಥಿಕ ತಾರತಮ್ಯವಾಗಿರಲಿ ಅಥವಾ ನೀಟ್ ಮತ್ತು ಎನ್‌ಇಪಿಯಂತಹ ಸಾಮಾಜಿಕ ನ್ಯಾಯ ವಿರೋಧಿ ನೀತಿಗಳಾಗಿರಲಿ. ಕೇಂದ್ರ ಸರ್ಕಾರದ ಪ್ರತಿಯೊಂದು ಕ್ರಮವು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸುತ್ತದೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ಬಿಜೆಪಿ ತನ್ನ ಆಡಳಿತದಲ್ಲಿ “ವಿಭಜಕ ಕಾರ್ಯಸೂಚಿ”ಯನ್ನು ಪರಿಚಯಿಸುತ್ತಿದೆ ಎಂದು ಆರೋಪಿಸಿದ ಅವರು, ಮಸೂದೆಯು ವಕ್ಫ್ ಸಂಸ್ಥೆಗಳಿಗೆ ಅನಗತ್ಯ ಕಾನೂನು ಅಡೆತಡೆಗಳನ್ನು ಸೃಷ್ಟಿಸುತ್ತದೆ ಮತ್ತು ಅವುಗಳ ಸರಿಯಾದ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ವಕ್ಫ್ ಮಸೂದೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಮ್ಮದು ರಾಜಕೀಯ ಗಲಭೆಯಲ್ಲ; ಘನತೆಗಾಗಿ ನಡೆಯುತ್ತಿರುವ ಹೋರಾಟ: ಆದಿತ್ಯನಾಥ್‌ಗೆ ಸ್ಟಾಲಿನ್ ತಿರುಗೇಟು
ನಮ್ಮದು ರಾಜಕೀಯ ಗಲಭೆಯಲ್ಲ; ಘನತೆಗಾಗಿ ನಡೆಯುತ್ತಿರುವ ಹೋರಾಟ: ಆದಿತ್ಯನಾಥ್‌ಗೆ ಸ್ಟಾಲಿನ್ ತಿರುಗೇಟು

