ಬಲಪಂಥೀಯ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಘೋಷಣೆ ಕೂಗುತ್ತಾ ಯುವಕರಿಗೆ ದೊಣ್ಣೆಯಂತಹ ಆಯುಧವನ್ನು ಪರಸ್ಪರ ಹಂಚಿಕೊಳ್ಳುವ ತರಬೇತಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಚಕ್ರವರ್ತಿ ಸೂಲಿಬೆಲೆ ಕೈಯಿಂದ ಕೈಗೆ ಆಯುಧವನ್ನು ಹಸ್ತಾಂತರಿಸುವ ಯುವಕರಿಗೆ ಜೈ ಶಿವಾಜಿ, ಜೈ ಭವಾನಿ, ಭಾರತ್ ಮಾತಾಕೀ ಜೈ, ವಂದೇ ಮಾತರಂ, ಇಂಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವುದನ್ನು ತಡೆಯುವುದಕ್ಕಾಗಿ ಕೆಲಸ ಮಾಡುತ್ತಿರುವ ಹೇಟ್ ಡಿಡೆಕ್ಟರ್ ಎಂಬ ಖಾತೆಯು ಆ ವಿಡಿಯೋವನ್ನು ಪೋಸ್ಟ್ ಮಾಡಿ “ಗೃಹ ಮಂತ್ರಿ ಆರಗ ಜ್ಞಾನೇಂದ್ರರವರೆ ಮತ್ತು ಕರ್ನಾಟಕದ ಡಿಜಿಪಿಗಳೇ, ಖಾಸಗಿ ಸೇನೆ ಕಟ್ಟು ತರಬೇತಿ ನೀಡುತ್ತಿರುವ ಚಕ್ರವರ್ತಿ ಸೂಲಿಬೆಲೆಯನ್ನು ಬಂಧಿಸಿ ಸೂಕ್ರ ಕ್ರಮ ಕೈಗೊಳ್ಳಿ” ಎಂದು ಒತ್ತಾಯಿಸಿದೆ.
Dear @JnanendraAraga & @DgpKarnataka Sir, Kindly take action and arrest #ChakravartySulibele for raising a private army and training them. Please book him under #NSA and #UAPA.@Copsview @alokkumar6994 #Arrest_Sulibele #ArrestChakravartySulibele #ArrestSulibele pic.twitter.com/OpNertYG2P
— Hate Detector 🔍 (@HateDetectors) August 19, 2022
ಈ ರೀತಿ ಖಾಸಗಿ ಸೇನೆ ಕಟ್ಟಿ ಆಯುಧ ತರಬೇತಿ ನೀಡುವವರನ್ನು ಎನ್‌ಎಸ್‌ಎ ಮತ್ತು ಯುಎಪಿಎ ಕಾಯ್ದೆಯಡಿ ಬಂಧಿಸಿ ಎಂದು ಟ್ವಿಟರ್‌ನಲ್ಲಿ ಆಗ್ರಹಿಸಿಲಾಗಿದೆ.
“ನೆನ್ನೆ ಕನ್ನಡತಿ ಮಲ್ಲಮ್ಮಳ ಹುಟ್ಟುಹಬ್ಬಕ್ಕೆ ಒಂದು ಶುಭಾಶಯ ಹೇಳೋಕೆ ಆಗ್ಲಿಲ್ಲ. ನೆರೆಪರಿಹಾರ,ರೈತರ ಸಮಸ್ಯೆಗಳು,ಯುವಕರಿಗೆ ಉದ್ಯೋಗ,ಆರೋಗ್ಯ ಶಿಕ್ಷಣ,ಜಿಎಸ್ಟಿ ವಾಪಸ್ ಇವುಗಳ ಬಗ್ಗೆ ಮಾತಡದ ಸೂಲಿಬೆಲೆಯವರು ಕನ್ನಡದ ಯುವಕರ ಕೈಗೆ ದೊಣ್ಣೆ ಕೊಟ್ಟು ಕರ್ನಾಟಕನಾ ಏನು ಮಾಡೋಕೆ ಹೊರಟಿದ್ದೀರ ರೀ. ದೊಣ್ಣೆ ಕೊಟ್ಟು ಕರ್ನಾಟಕ ಕಟ್ಟುವೀರಾ?” ಎಂದು ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಪ್ರಶ್ನಿಸಿದ್ದಾರೆ.
ನೆನ್ನೆ ಕನ್ನಡತಿ ಮಲ್ಲಮ್ಮಳ ಹುಟ್ಟುಹಬ್ಬಕ್ಕೆ ಒಂದು ಶುಭಾಶಯ ಹೇಳೋಕೆ ಆಗ್ಲಿಲ್ಲ.
ನೆರೆಪರಿಹಾರ,ರೈತರ ಸಮಸ್ಯೆಗಳು,ಯುವಕರಿಗೆ ಉದ್ಯೋಗ,ಆರೋಗ್ಯ ಶಿಕ್ಷಣ,ಜಿಎಸ್ಟಿ ವಾಪಸ್ ಇವುಗಳ ಬಗ್ಗೆ ಮಾತಡದ ಸೂಲಿಬೆಲೆ @astitvam
ಕನ್ನಡದ ಯುವಕರ ಕೈಗೆ ದೊಣ್ಣೆ ಕೊಟ್ಟು ಕರ್ನಾಟಕನಾ ಏನು ಮಾಡೋಕೆ ಹೊರಟಿದ್ದೀರ ರೀ.🤦
ದೊಣ್ಣೆ ಕೊಟ್ಟು ಕರ್ನಾಟಕ ಕಟ್ಟುವೀರಾ? pic.twitter.com/UU5nf52fTr— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) August 19, 2022
ಒಂದು ಸಮುದಾಯವನ್ನು ಭಯೋತ್ಪಾದಕರೆಂದು ಚಿತ್ರೀಕರಿಸುತ್ತಾ ನಕಲಿ ದೇಶಪ್ರೇಮದ ನಾಟಕವಾಡಿ ಅಮಾಯಕ ಯುವಕರ ಕೈಗೆ ಬಂದೂಕು ಕೊಟ್ಟು ಚೆಲ್ಲಾಟವಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅನ್ನುವ ಗೂಂಡಾ ಮೇಲೆ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿ ಯಾಕೆ ಜೈಲಿಗೆ ಅಟ್ಟಬಾರದು? ಎಂದು ಅಶ್ರಫ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಮರಾಠಿ ರಾಜನ ಗುಣಗಾನ ಮಾಡುತ್ತ ಆಯುಧ ಪ್ರದರ್ಶನೇ ಮಾಡ್ತಾ ಇದಾನೆ ಈ ದ್ರೋಹಿ. ಕಿತ್ತೂರು ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ರಾಯಣ್ಣ , ಮದಕರಿನಾಯಕ, ಪುಲಿಕೇಶೀ, ಶ್ರೀಕೃಷ್ಣದೇವರಾಯ, ಮೈಸೂರು ಅರಸರು ಇನ್ನು ಹಲವರಿಗೆ ಮಾಡುತ್ತಿರುವ ದ್ರೋಹ ಇದು ಈ ನಾಡ ದ್ರೋಹಿಯ ಬಂಧನ ಆಗಲೇಬೇಕು ಎಂದು ಚೇತನ್ ಕೃಷ್ಣರವರು ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಮರಾಠಿ ರಾಜನ ಗುಣಗಾನ ಮಾಡುತ್ತ ಆಯುಧ ಪ್ರದರ್ಶನೇ ಮಾಡ್ತಾ ಇದಾನೆ ಈ ದ್ರೋಹಿ.
ಕಿತ್ತೂರು ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ರಾಯಣ್ಣ , ಮದಕರಿನಾಯಕ, ಪುಲಿಕೇಶೀ, ಶ್ರೀಕೃಷ್ಣದೇವರಾಯ, ಮೈಸೂರು ಅರಸರು ಇನ್ನು ಹಲವರಿಗೆ ಮಾಡುತ್ತಿರುವ ದ್ರೋಹ ಇದು
ಈ ನಾಡ ದ್ರೋಹಿಯ ಬಂಧನ ಆಗಲೇಬೇಕು #ArrestSulibelepic.twitter.com/G6bUjBR9o5
— Chetan Krishna👑 🇮🇳 (@ckchetanck) August 19, 2022
ಇದನ್ನೂ ಓದಿ; ಕಳ್ಳತನದ ಆರೋಪ: ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿ ಹಲ್ಲೆ, ತಲೆ ಬೋಳಿಸಿ ಅವಮಾನಿಸಿದ ಗುಂಪು



ನಾನೂ ಕನ್ನಡಿಗನೆ ಆದರೆ ಇವರಂತೆ ನಕಲಿ ಕನ್ನಡಿಗನಲ್ಲ, ಕರ್ನಾಟಕ ದ ಇತಿಹಾಸ ಸರಿಯಾಗಿ ಓದಲಿ, ಇವರಿಗೆ ಕನ್ನಡ ದ ಹೆಸರಿನಲ್ಲಿ ಸೂಲಿಬೆಲೆಯವರ ಮೇಲೆ ಆರೋಪ ಹೊರಿಸಲು ಯಾವುದೇ ಅಧಿಕಾರವಿಲ್ಲ