ಬಸವನ ಬಾಗೇವಾಡಿ ಶಾಸಕ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಸಚಿವ ಶಿವಾನಂದ ಅವರು ಬಿಜಾಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸವಾಲನ್ನು ಸ್ವೀಕರಿಸಿ ಶನಿವಾರ ತನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ಸಲ್ಲಿಸಿದ್ದರು. ಯತ್ನಾಳ್ ಸವಾಲು
ಏಪ್ರಿಲ್ 30 ರಂದು ಯತ್ನಾಳ್ ಅವರು ಶಿವಾನಂದ ಅವರ ವಿರುದ್ಧ ಅಶ್ಲೀಲ ವಾಗ್ದಾಳಿ ನಡೆಸಿದ್ದರು. “ಶಿವಾನಂದ ಪಾಟೀಲ್ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ” ಎಂದು ಸವಾಲು ಎಸೆದಿದ್ದರು. ಏಪ್ರಿಲ್ 28 ರಂದು ವಿಜಯಪುರದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಯತ್ನಾಳ್ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಶಿವಾನಂದ್ ಭಾಗವಹಿಸಿದ್ದರು.
ಈ ರ್ಯಾಲಿಯಲ್ಲಿ ಮಾತನಾಡಿದ್ದ ಶಿವಾನಂದ್ ಅವರು, ಯತ್ನಾಳ್ ಅವರನ್ನು ಸೋಲಿಸಲು ವಿಜಯಪುರಕ್ಕೆ ಬರಲು ಸಿದ್ಧ ಎಂದು ಹೇಳಿದ್ದರು. ಇದಕ್ಕೆ ಅಸಮಾಧಾನಗೊಂಡಿದ್ದ ಯತ್ನಾಳ್ ಅವರ ವಿರುದ್ಧ ಹೇಳಿಕೆ ನೀಡಿ ಅವರಿಗೆ ಸವಾಲೆಸೆದಿದ್ದರು.
ಅವರ ಸವಾಲು ಸ್ವೀಕರಿಸಿದ್ದ ಸಚಿವ ಶಿವಾನಂದ್ ಅವರು, “ವಿಜಯಪುರ ನಗರ ಶಾಸಕ ಬಸನಗೌಡ ಆರ್ ಪಾಟೀಲ (ಯತ್ನಾಳ್) ರವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ಈ ಸವಾಲನ್ನು ಸ್ವೀಕರಿಸಿ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಖಾದರ್ ಅವರಿಗೆ ಸಲ್ಲಿಸಿದ್ದರು.
“ಬಸನಗೌಡ ಪಾಟೀಲ್ ಯತ್ನಾಳ್ ಸಹ ಸವಾಲು ಸ್ವೀಕರಿಸಿ ರಾಜೀನಾಮೆ ಸಲ್ಲಿಸಿದರೆ ತಮ್ಮ ರಾಜೀನಾಮೆ ಪತ್ರವನ್ನು ಅಂಗೀಕರಿಸಿ” ಎಂದು ಸಭಾಧ್ಯಕ್ಷರಿಗೆ ಪತ್ರದಲ್ಲಿ ಹೇಳಿದ್ದರು. ಅದಾಗ್ಯೂ, ಶುಕ್ರವಾರ ಸಂಜೆ, ಸ್ಪೀಕರ್ ಖಾದರ್ ಅವರು ಶಿವಾನಂದ್ ಅವರ ಅವರ ಷರತ್ತುಬದ್ಧ ರಾಜೀನಾಮೆಯನ್ನು ತಿರಸ್ಕರಿಸಿದ್ದಾರೆ. ಯತ್ನಾಳ್ ಸವಾಲು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರೌಡಿ ಹತ್ಯೆಯ ಹಿಂಸಾಚಾರದ ದಿನದ ನಂತರ ಸಹಜ ಸ್ಥಿತಿಯತ್ತ ಕರಾವಳಿ

