Homeಅಂಕಣಗಳುಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

- Advertisement -
- Advertisement -

ಇಂದಿಗೆ ಸುಮಾರು 103 ವರ್ಷಗಳ ಹಿಂದೆ ಬ್ರಿಟಿಷ್ ಸರಕಾರ ಚಂಪಾರಣ ಕೃಷಿ ಕಾಯಿದೆ ತಂದಿತು. ಅದರ ಮೂಲ ಉದ್ದೇಶಗಳು ಎರಡು- ವಿವಾದಿತ ತೀನ್ ಕಥಿಯಾ ಉಳುಮೆ ಪದ್ಧತಿ ರದ್ದು ಮಾಡುವುದು ಹಾಗೂ ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳಲು ರೈತರಿಗೆ ಸ್ವತಂತ್ರ ನೀಡುವುದು. ಇದು ಯಾಕ್ ಬಂತಪಾ ಅಂದ್ರ ಅದರ ಹಿಂದ ಎಂಟು ತಿಂಗಳ ರೈತರ ಹೋರಾಟ ಇತ್ತು. ಅದರ ಹಿಂದ ಸುಮಾರು ಒಂದು ಶತಮಾನದ ಶೋಷಣೆ ಇತ್ತು.

ಈಸ್ಟ್ ಇಂಡಿಯಾ ಕಂಪನಿ 1790ರೊಳಗ ಜಮೀನ್ದಾರಿ ಪದ್ಧತಿ ಜಾರಿಗೆ ತಂದಿತ್ತು. ಅದರ ಪ್ರಕಾರ ಊರಾಗಿನ ಎಲ್ಲಾ ಜಮೀನಿನ ಸುಂಕ ಒಂದೇ ಕುಟುಂಬದವರು ಕೊಡಬೇಕಾಗಿತ್ತು. ಈ ಸುಂಕ ಸುಲಿಗೆದಾರರು, ಇತರ ರೈತರಿಂದ ತೆರಿಗೆ ಸಂಗ್ರಹ ಮಾಡಿ, ಅದರಲ್ಲಿ ಸ್ವಲ್ಪ ಕಮಿಷನ್ ಮುರಕೊಂಡು ಬ್ರಿಟಿಷರಿಗೆ ಕೊಡಬೇಕಾಗಿತ್ತು.

ಆ ತೆರಿಗೆ ಕಟ್ಟುವ ಮುನೀಂ-ಮುನ್ಷಿಗಳು ಸಣ್ಣ ಸಣ್ಣ ರೈತರ ಜೊತೆ ಏನು ವ್ಯವಹಾರ ಮಾಡೋದು ಬಿಡು ಅಂತ ಹೇಳಿ ಜಾರಡಿನ ಮತೆಸೊನ, ಈ. ಪಬಾನೆ, ಸಸೂನ, ವಾಡಿಯಾ, ಸ್ವೈರನಂತಾ ದೊಡ್ಡ ದೊಡ್ಡ ಕೆಮಿಕಲ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡರು. ಆ ಕಂಪನಿಗಳು ರೈತರ ಜೊತೆ ಒಪ್ಪಂದ ಮಾಡಿಕೊಂಡರು. ಅದಕ್ಕ ಅನುಕೂಲ ಆಗಲಿ ಅಂತ ಬಿಹಾರ, ಒರಿಸ್ಸಾ ಹಾಗೂ ಬಂಗಾಳ ರಾಜ್ಯಗಳ ಸರಕಾರಗಳು ತೀನ್ ಕಥಿಯ ನಿಯಮಗಳಿಗೆ ಒಪ್ಪಿಗೆ ನೀಡಿದವು. ತೀನ್ ಕಥಿಯ ಅಂದ್ರ ಪ್ರತಿ 10 ಎಕರೆ ಜಮೀನಿನ ಒಳಗ ಮೂರು ಎಕರೆ ಇಂಡಿಗೋ ನೀಲಿ ಬೆಳಿ ಬೆಳಿಯಬೇಕು. ಇದು ಕಡ್ಡಾಯ. ಇದಕ್ಕೆ ತಪ್ಪಿದರೆ ಜಮೀನುದಾರ, ಗುಮಾಸ್ತ ಹಾಗೂ ಕಂಪನೀ ಸರಕಾರ ಅವರಿಗೆ ಶಿಕ್ಷೆ ಕೊಡಬಹುದಾಗಿತ್ತು. ನೀಲಿ ಗಿಡದಿಂದ ನೀಲಿ ಬಣ್ಣ ತಯಾರು ಆಗುತ್ತಿತ್ತು.

ಅಷ್ಟರಾಗ ಜರ್ಮನಿ ವಿಜ್ಞಾನಿಗಳು 1901ಕ್ಕ ಒಂದು ಕೃತಕ ನೀಲಿ ಬಣ್ಣ ಕಂಡುಹಿಡಿದರು. ಆಗ ಇಂಡಿಗೋದ ಬೇಡಿಕೆ ಕಮ್ಮಿ ಆತು. ಬ್ರಿಟಿಷರ ಬೆಂಬಲಿತ ಕೆಮಿಕಲ್ ಕಂಪನಿಗಳು ರೈತರಿಗೆ ಕೊಡೋ ಹಣ ಕಮ್ಮಿ ಮಾಡಿದರು. 1910-1915ರ ನಡುವಿನ ಮೊದಲನೇ ಮಹಾಯುದ್ಧದ ಕಾಲಕ್ಕ ಮತ್ತೊಮ್ಮೆ ಇಂಡಿಗೋಗೆ ಬೆಲೆ ಬಂತು. ಅದರ ದುರಾಸೆಗೆ ಕಂಪನಿಗಳು ರೈತರಿಗೆ ಹೆಚ್ಚು ನೀಲಿ ಬೆಳಿಯಲಿಕ್ಕೆ ಒತ್ತಾಯ ಮಾಡಿದವು. ಒಲ್ಲೆ ಅಂದವರಿಗೆ ಹಿಂಸೆ ಕೊಟ್ಟರು. ಅವರ ಜಮೀನು ಕಸಗೊಂಡರು, ಜೈಲಿಗೆ ಹಾಕಿದರು.

ಮೋಹನ್ ದಾಸ್ ಗಾಂಧಿ ಅವರು ದಕ್ಷಿಣ ಆಫ್ರಿಕಾ ಬಿಟ್ಟು ಭಾರತಕ್ಕ 1915ಕ್ಕ ಬಂದಿದ್ದರು. ಅವರನ್ನ ಕಾಂಗ್ರೆಸ್ ಸಮಾವೇಶದೊಳಗ ಭೇಟಿ ಮಾಡಿದ ಚಂಪಾರಣದ ರಾಜ್‌ಕುಮಾರ್ ಶುಕ್ಲ ಹಾಗೂ ಸಂತ ರಾವುತ ಅನ್ನುವ ಇಬ್ಬರು ಕಾರ್ಯಕರ್ತರು ನಮ್ಮೂರಿಗೆ ಬನ್ನಿ, ಅಲ್ಲಿ ರೈತರು ಸಂಕಷ್ಟದೊಳಗ ಅದಾರು, ಅವರಿಗೆ ಒಂದು ಹೋರಾಟ ರೂಪಿಸಿಕೊಡರಿ ಅಂತ ಕೇಳಿದರು. ಒಂದು ವರ್ಷದ ನಂತರ ಗಾಂಧೀಜಿ ಅಲ್ಲಿಗೆ ಹೋದರು. ಅಲ್ಲಿ ಅಸಹಕಾರ ಚಳವಳಿ ನಡೆಸಿ, ಜೈಲಿಗೆ ಹೋದರು. ಸುಮಾರು ಎಂಟು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿದ್ದಕ್ಕ ಬ್ರಿಟಿಷರ ಮನಸ್ಸು ಕರಗಿತು. ಅವರು ಚಂಪಾರಣ ಕೃಷಿ ಕಾಯಿದೆ ರೂಪಿಸಿದರು. ತೀನ್ ಕಥಿಯಾ ನಿಯಮ ರದ್ದಾಗಿ ರೈತರು ತಮಗೆ ತಿಳಿದ ಬೆಲೆ ಬೆಳಿಯಲಿಕ್ಕೆ ಅವಕಾಶ ಮಾಡಿಕೊಟ್ಟರು.

ಈ ಹೋರಾಟದ ನಂತರ ಶುಕ್ಲ ಹಾಗೂ ರಾವುತ ಅವರು ಗಾಂಧಿಗೆ ಬಾಪು ಹಾಗೂ ಮಹಾತ್ಮ ಅಂತ ಕರೆದರು. ‘ಗಾಂಧಿ ಚಂಪಾರಣ—ತಿವನ್ನು ಬದಲು ಮಾಡಲಿಲ್ಲ. ಚಂಪಾರಣ ಗಾಂಧಿಯನ್ನು ಬದಲು ಮಾಡಿತು. ಸತ್ಯ ಹಾಗೂ ಅಹಿಂಸೆಯ ದಾರಿ ಅವರಿಗೆ ಕಾಯಂ ಆಗುವಂತೆ ಮಾಡಿತು’ ಅಂತ ಇತಿಹಾಸಕಾರ ಡೇವಿಡ್ ಅರ್ನಾಲ್ಡ್ ಹೇಳಿದರು.

ಇಷ್ಟು ಹೊತ್ತು ಕೇಳಿದ ಕತಿ ಒಂಥರಾ ಒಪ್ಪಂದ ಕೃಷಿಯ ಕತಿ ಕೇಳಿದ ಹಂಗ ಆತಲ್ಲಾ. ಈಗ ನೋಡ್ರಿ, ಕೇಂದ್ರ ಸರಕಾರದವರು ಮೂರು ಕೃಷಿ ಕಾನೂನು ಪಾಸು ಮಾಡಿದಾರು. ರಾಜ್ಯದವರು ಅವರಿಗೆ ಮುಂದ ಹೋಗಿ ಐದು ಕಾಯಿದೆ ಪಾಸು ಮಾಡಿದಾರು. ಇವು ರೈತರಿಗೆ ಅನುಕೂಲ. ಅವರ ಸ್ವಾತಂತ್ರ್ಯ ಹೆಚ್ಚಿಸಿ ಅವರ ಆದಾಯ ದುಪ್ಪಟ್ಟು ಮಾಡುವ ಕಾಯಿದೆ ಅಂತ ಹೇಳಿದಾರು. ಆದರ ಅವು ಆಳುವ ಪಕ್ಷದ ಗೆಳೆಯರ ಆದಾಯ ದುಪ್ಪಟ್ಟುಗಿಂತಲೂ ಹೆಚ್ಚು ಮಾಡಿದಾವು. ಅವರ ಸ್ವಾತಂತ್ರ್ಯವನ್ನು ಅತಿಯಾಗಿ ಜಾಸ್ತಿ ಮಾಡಿ ಅವರ ಮ್ಯಾಲೆ ಯಾವ ನಿಯಂತ್ರಣ ಇರಲಾರದ ಹಂಗ ಮಾಡಿಬಿಟ್ಟಾವು.

ಕೇಂದ್ರದವರು ಮಾಡಿದ ಕಾನೂನುಗಳು ಇಡೀ ದೇಶಕ್ಕೆ ದುಷ್ಪರಿಣಾಮ ಬೀರಿದರೂ ಸಹಿತ ಅವು ಕೇವಲ ಪಂಜಾಬಿನ ಸಮಸ್ಯೆ ಅಂತ ಕೆಲವರು ಅದನ್ನ ದುರ್ಲಕ್ಷ್ಯ ಮಾಡಿದಾರ. ಕರ್ನಾಟಕದ ಘನ ಸರಕಾರ ‘ಒಂದು ಜಿಲ್ಲೆಗೆ ಒಂದು ಪ್ರಮುಖ ಬೆಳೆ’ ಅಂತ ಹೇಳಿ ಒಂದು ಪಟ್ಟಿ ಹೊರಡಿಸಿಬಿಟ್ಟೆತಿ. ಕೇಂದ್ರದ ಒಪ್ಪಂದ ಕೃಷಿ ಕಾನೂನಿನಾಗ ಕಂಪನಿಗಳು ರೈತರಿಗೆ ಮೂಲ ಒಪ್ಪಂದದ ಪ್ರಕಾರ ಹಣ ಕೊಡದೆ ಹೋದರೆ ರೈತರು ಕೋರ್ಟಿಗೆ ಹೋಗಲಿಕ್ಕೆ ಬರೋದಿಲ್ಲ ಅಂತ ಒಂದು ಮಾತು ಐತಿ. ಅವರು ಉಪವಿಭಾಗ ಅಧಿಕಾರಿಯ ಮಂಡಳಿಗೆ ಆರ್ಜಿ ಸಲ್ಲಿಸಬೇಕು. ಅವರು ಆದೇಶ ನೀಡಬಹುದು, ಅಥವಾ ಪರ್ಯಾಯ ನ್ಯಾಯ ನಿರ್ಣಯದ ಮೂಲಕ ಅವರಿಗೆ ನಷ್ಟ ತುಂಬಿ ಕೊಡಬೇಕು ಅಂತ ಅದರಾಗ ಶಿಫಾರಸು ಐತಿ. ಭಾರತದ ಯಾವ ಉಪವಿಭಾಗ ಅಧಿಕಾರಿ, ಬಹು ರಾಷ್ಟ್ರೀಯ ಕಂಪನಿ ಅಥವಾ ಮದ್ದಾನಿ ಕಂಪನಿಗಳ ವಿರುದ್ಧ ಆದೇಶ ಪಾಸು ಮಾಡುವ ಧೈರ್ಯ ತೋರಸ್ತಾನ ಅನ್ನುವ ಪ್ರಶ್ನೆಗೆ ಅಲ್ಲಿ ಉತ್ತರ ಇಲ್ಲ.

ಇನ್ನೂ ರಾಜ್ಯ ಕೃಷಿ ಸಚಿವ ಬಸನಗೌಡ ಚನ್ನಬಸನಗೌಡ ಪಾಟೀಲ್ ಅವರು ಒನ್ ಜಿಲ್ಲಾ ಒನ್ ಕ್ರಾಪ್ ಅನ್ನೋದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆ, ಅದರಿಂದ ರೈತರಿಗೆ ಒಳ್ಳೆ ಮಾರುಕಟ್ಟೆ ಸಿಗತದ ಅಂತ ಘೋಷಣೆ ಮಾಡಿದಾರು. ಅವರ ಪ್ರಕಾರ ಖರೀದಿ ಮಾಡುವನಿಗೆ ಅನುಕೂಲ ಮಾಡಿಕೊಟ್ಟರ ರೈತರಿಗೆ ಒಳ್ಳೆ ಬೆಲೆ ಕೊಟ್ಟ ಹಂಗ.

ಇದು ಲೆಕ್ಕಾಚಾರ ಏನಾದರೂ ತಪ್ಪಿದರ ಅನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದರಿಂದ ರೈತರಿಗೆ ತಮ್ಮ ಮನಸ್ಸಿನ ಬೆಳೆ ಬೆಳೆಯುವ ಸ್ವಾತಂತ್ರ್ಯ ತಪ್ಪಿ ಹೋಗತದ ಅನ್ನುವ ಸಂದೇಹಕ್ಕ ಅವರು ಪರಿಹಾರ ಸೂಚಿಸಿಲ್ಲ.

ಒಂದು ಜಿಲ್ಲೆಯ ಎಲ್ಲಾ ರೈತರು ಒಂದೇ ಬೆಳೆ ಬೆಳೆದರ ಕೀಟ ಬಾಧೆ ಕಾಡಬಹುದು ಅಂತ ಕೆಲವರು ತಜ್ಞರು ಹೇಳತಾರ. ಆದರ ಸರಕಾರ ಅದಕ್ಕ ಇನ್ನೂ ಉತ್ತರ ಕೊಡಲಿಕ್ಕೆ ಹತ್ತಿಲ್ಲ. ಮುಂದೆ ಒಂದು ದಿವಸ ಮದ್ದಾನೀ ಕಂಪನಿಗಳ ಕೀಟ ನಾಶಕ ಉಪಯೋಗಿಸಿರಿ ಅಂತ ಹೇಳಬಹುದು.

ಎಲ್ಲರೂ ಒಂದೇ ಬೆಳೆ ಬೆಳೆದರೆ ಪೂರೈಕೆ ಹಾಗೂ ಬೇಡಿಕೆಯ ತಕ್ಕಡಿ ಉಲ್ಟಾ ಆಗಿ ರೈತರಿಗೆ ಅನ್ಯಾಯ ಆಗಬಹುದು ಅನ್ನುವುದಕ್ಕೆ ಅವರಲ್ಲಿ ಉತ್ತರ ಇಲ್ಲ. ಸರ್ಕಾರದ ನಿಯಮದ ಪ್ರಕಾರ ಬೆಳೆ ಆಯ್ಕೆ ಮಾಡದೆ ಇತರ ಬೆಳೆ ಬೆಳೆದರೆ ಅವರಿಗೆ ಸರಕಾರದಿಂದ ಸಿಗೋ ಅನುಕೂಲಗಳು ಸಿಗೋದಿಲ್ಲ, ಸಾಲ ಸಿಗದೇ ಇರಬಹುದು, ಬೆಳೆ ವಿಮೆ ಸಿಗದೇ ಇರಬಹುದು ಅಂತ ಕೆಲವು ಏಜೆಂಟರು ಪಿಸುಗುಟ್ಟಲಿಕ್ಕೆ ಹತ್ತಿಬಿಟ್ಟಾರು.

ಚಂಪಾರಣ ಅಂದ್ರ ಸಂಪಿಗೆ ಬನ ಅಂತ. ಆ ಬನಕ್ಕೆ ಬೆಂಕಿ ಬಿದ್ದಾಗ ಅದನ್ನು ಆರಿಸಲು ಗಾಂಧಿ ಬಂದರು. ರೈತರು ಒಗ್ಗಟ್ಟು ತೋರಿಸಿ ಹೋರಾಟ ಮಾಡಿದರು. ಸೂರ್ಯ ಮುಳುಗದ ಸಾಮ್ರಾಜ್ಯದ ಈಸ್ಟ್ ಇಂಡಿಯಾ ಕಂಪನಿ ಮಂದಿಯ ಕಲ್ಲಿನ ಹೃದಯ ಕರಗಿಹೋತು. ರೈತರ ಬವಣೆ ತಪ್ಪಿಸಲು ಅವರು ಕಾನೂನು ಮಾಡಿದರು. ಈಗ ಗಾಂಧಿ ಇಲ್ಲ. ಸಂಪಿಗೆ ಬನದ ನೊಂದವರ ಹಾಡು ಕೇಳಿ ಕರಗುವ ಹೃದಯ ಇಂದಿನ ಆಳುವವರಿಗೆ ಇಲ್ಲ. ತಮ್ಮ ಗೆಳೆಯರಾಗಿರುವ ವೆಸ್ಟ್ ಇಂಡಿಯಾ ಕಂಪನಿಗಳಿಗೆ ಲುಕ್ಸಾನ ಆಗತದ ಅಂತ ಗೊತ್ತಾದರ ಸರಕಾರಗಳು ಯಾವ ಕಾನೂನನ್ನು ಕೂಡ ಬದಲು ಮಾಡೋ ಹಂಗ ಕಾಣೋದಿಲ್ಲಾ. ಈಗ ಸಂಪಿಗೆ ಬನದ ಹಾಡು ಹೇಳೋರು ಯಾರು? ಹೇಳಿದರೂ ಕೇಳೋರು ಯಾರು?


ಇದನ್ನೂ ಓದಿ: ರೈತ ವಿರೋಧಿ ಕಾಯಿದೆಗಳು: ಪ್ರಧಾನಿ ಮೋದಿ v/s ಮುಖ್ಯಮಂತ್ರಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಭಾರತೀಯ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ

ಢಾಕಾ: ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್‌ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ...

ತೀವ್ರ ವಿರೋಧಗಳ ನಡುವೆ ಗಣರಾಜ್ಯೋತ್ಸವ ಆಚರಣೆಯಲ್ಲಿ ‘ವಂದೇ ಮಾತರಂ’ ಹಾಡಲು ನಿರ್ಧರಿಸಿದ ಕೇಂದ್ರ ಸರ್ಕಾರ 

ಗಣರಾಜ್ಯೋತ್ಸವದ ಸಂದರ್ಭದಲ್ಲಿ 'ವಂದೇ ಮಾತರಂ' ಗೀತೆಯನ್ನು ಪ್ರಧಾನವಾಗಿ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ ಮುಂದಿನ ತಿಂಗಳು ಭಾರತಕ್ಕೆ ಆಗಮಿಸುವ...

ಅಣು ವಿದ್ಯುತ್ ಯೋಜನೆ ಕುರಿತು ಯುಪಿ ಸರ್ಕಾರದೊಂದಿಗೆ ಅದಾನಿ ಗ್ರೂಪ್ ಮಾತುಕತೆ: ವರದಿ

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿದೆ. ಈ ಬೆನ್ನಲ್ಲೇ...

ಅನಧಿಕೃತ ಬುದ್ಧಿಮಾಂದ್ಯ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಅಮಾನವೀಯ ಹಲ್ಲೆ: ದಂಪತಿಯನ್ನು ವಶಕ್ಕೆ ಪಡೆದ ಪೊಲೀಸರು

ಬಾಗಲಕೋಟೆ: ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ ಶಿಕ್ಷಕ ದಂಪತಿ ಬುದ್ಧಿಮಾಂದ್ಯನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ವೀಡಿಯೋ ವೈರಲ್ ಆದ ಬೆನ್ನಲ್ಲೇ ಘಟನೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಮುಧೋಳ ತಾಲೂಕಿನ ಮಂಟೂರು ಗ್ರಾಮದ 16...

ಜೆಫ್ರಿ ಎಪ್‌ಸ್ಟೀನ್ ಫೈಲ್ಸ್: ನ್ಯಾಯಾಂಗ ಇಲಾಖೆಯ ವೆಬ್ ಪುಟದಿಂದ ಟ್ರಂಪ್ ಫೋಟೋ ಸೇರಿದಂತೆ 16 ದಾಖಲೆಗಳು ಕಣ್ಮರೆ 

ನ್ಯೂಯಾರ್ಕ್: ಜೆಫ್ರಿ ಎಪ್‌ಸ್ಟೀನ್ ಗೆ ಸಂಬಂಧಿಸಿದ ದಾಖಲೆಗಳಿರುವ ಅಮೆರಿಕದ ನ್ಯಾಯ ಇಲಾಖೆಯ (Justice Department) ಸಾರ್ವಜನಿಕ ವೆಬ್‌ಪುಟದಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಸೇರಿದಂತೆ ಕನಿಷ್ಟ 16 ದಾಖಲೆಗಳು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತ...

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ| ಬಿಎನ್‌ಪಿ ನಾಯಕನ ಮನೆಗೆ ಬೆಂಕಿ : 7 ವರ್ಷದ ಮಗಳು ಸಜೀವ ದಹನ

ವಿದ್ಯಾರ್ಥಿ ನಾಯಕ ಹಾಗೂ ಸ್ವತಂತ್ರ ರಾಜಕಾರಣಿ ಷರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾ ದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯ ಮೂರನೇ ದಿನವಾದ ಶನಿವಾರ, ಪ್ರತಿಭಟನಾಕಾರರು ಬಾಂಗ್ಲಾದೇಶ್...

ದಕ್ಷಿಣ ಆಫ್ರಿಕಾದಲ್ಲಿ ಸಾರ್ವಜನಿಕರ ಮೇಲೆ ದಾಳಿಕೋರರು ನಡೆಸಿದ ಗುಂಡಿನ ದಾಳಿಯಲ್ಲಿ 9 ಜನರ ಸಾವು 

ಜೋಹಾನ್ಸ್‌ಬರ್ಗ್‌ನ ಹೊರಗಿನ ಬಾರ್‌ನಲ್ಲಿ ಭಾನುವಾರ ಮುಂಜಾನೆ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಗುಂಡಿನ ದಾಳಿ...

ಬೆಂಗಳೂರು : ಜಿಬಿಎ ಅಧಿಕಾರಿಗಳಿಂದ 200ರಷ್ಟು ಮನೆಗಳ ನೆಲಸಮ : ಬೀದಿಗೆ ಬಿದ್ದ ಬಡ ಜನರು

ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20)...

ಕೇರಳ ದಲಿತ ಕಾರ್ಮಿಕನ ಗುಂಪುಹತ್ಯೆ: ನನ್ನ ವೃತ್ತಿ ಬದುಕಿನಲ್ಲೇ ಇಂತಹ ಹಿಂಸಾಚಾರ ನೋಡಿಲ್ಲ ಎಂದ ವೈದ್ಯರು

ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್‌ನಲ್ಲಿ ಗುಂಪೊಂದು ಹಲ್ಲೆ ನಡೆಸಿ ಹತ್ಯೆ ಮಾಡಿದ ಛತ್ತೀಸ್‌ಗಢದ ದಲಿತ ವಲಸೆ ಕಾರ್ಮಿಕ ರಾಮ್ ನಾರಾಯಣ್ ಅವರ ಮರಣೋತ್ತರ ಪರೀಕ್ಷೆಯು ದಾಳಿಯ ತೀವ್ರ ಕ್ರೌರ್ಯವನ್ನು ಬಹಿರಂಗಪಡಿಸಿದೆ, ದೇಹದ ಒಂದು...

ಪೊಲೀಸ್ ಕಾರ್ಯಾಚರಣೆ ತಡೆದು ಕೋಳಿ ಅಂಕ : ಪುತ್ತೂರು ಶಾಸಕ ಅಶೋಕ್ ರೈ ಸೇರಿ 17 ಮಂದಿ ವಿರುದ್ಧ ಪ್ರಕರಣ ದಾಖಲು

ಶಾಸಕರೇ ಮುಂದೆ ನಿಂತು ಕಾನೂನುಬಾಹಿರ ಚಟುವಟಿಕೆ ನಡೆಸಲು ಜನರನ್ನು ಪ್ರೋತ್ಸಾಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿ ಶನಿವಾರ (ಡಿ.20) ನಡೆದಿದೆ. ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ...