ಫೇಸ್‌ಬುಕ್ ಮಾಲಿಕತ್ವದ ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತದೆ/ಮಾರುತ್ತದೆ, ಚಾಟ್‌ಗಳನ್ನು ನೋಡುತ್ತದೆ ಎಂಬ ಟೀಕೆಗಳ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ವಾಟ್ಸಾಪ್ ಸ್ಪಷ್ಟೀಕರಣ ನೀಡಿದೆ.
“ತನ್ನ ಗೌಪ್ಯತಾ ನೀತಿಗಳಲ್ಲಿ ತಂದ ಬದಲಾವಣೆಗಳಲ್ಲಿ ಕೆಲವನ್ನು ತಿದ್ದುಪಡಿ ಮಾಡುತ್ತಿದ್ದೇವೆ. ನಿಮ್ಮ ಸ್ನೇಹಿತರು-ಸಂಬಂಧಿಕರೊಂದಿಗಿನ ಚಾಟ್‌ಗಳು ಸುರಕ್ಷಿತವಾಗಿರಲಿವೆ, ಎಂಡ್ ಟು ಎಂಡ್ encryption 100% ಮುಂದುವರೆಯಲಿದೆ” ಎಂದು ವಾಟ್ಸಾಪ್ ಟ್ವೀಟ್ ಮಾಡಿದೆ.
We want to address some rumors and be 100% clear we continue to protect your private messages with end-to-end encryption. pic.twitter.com/6qDnzQ98MP
— WhatsApp (@WhatsApp) January 12, 2021
ವಾಟ್ಸಾಪ್ ಘೋಷಿಸಿರುವ/ಸ್ಪಷ್ಟನೆ ನೀಡಿರುವ ಅಂಶಗಳು ಈ ಕೆಳಗಿನಂತಿವೆ.
- ವಾಟ್ಸಾಪ್ ಆಗಲಿ ಅಥವಾ ಫೇಸ್‌ಬುಕ್ ಆಗಲಿ ನಿಮ್ಮ ಖಾಸಗಿ ಸಂದೇಶಗಳನ್ನು ನೋಡುವುದಿಲ್ಲ ಅಥವಾ ನಿಮ್ಮ ಕರೆಗಳನ್ನು ಕೇಳಿಸಿಕೊಳ್ಳುವುದಿಲ್ಲ.
- ಪ್ರತಿಯೊಬ್ಬರ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ವಾಟ್ಸಾಪ್ ಇರಿಸಿಕೊಳ್ಳುವುದಿಲ್ಲ.
- ನಿಮ್ಮ ಲೊಕೇಶನ್ ನೋಡಲು ವಾಟ್ಸಾಪ್ ಮತ್ತು ಫೇಸ್‌ಬುಕ್‌ಗೆ ಸಾಧ್ಯವಿಲ್ಲ.
- ವಾಟ್ಸಾಪ್ ನಿಮ್ಮ ಸಂಪರ್ಕಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಿಲ್ಲ.
- ವಾಟ್ಸಾಪ್ ಗುಂಪುಗಳು ಖಾಸಗಿಯಾಗಿ ಉಳಿಯುತ್ತವೆ.
- ನಿಮ್ಮ ಸಂದೇಶಗಳನ್ನು ಕಣ್ಮರೆಯಾಗುವಂತೆ ನೀವು ಹೊಂದಿಸಬಹುದು.
- ನಿಮ್ಮ ಡೇಟಾವನ್ನು ನೀವು ಡೌನ್‌ಲೋಡ್ ಮಾಡಬಹುದು.
ಒಂದು ವಾರದ ಹಿಂದೆ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೋಟಿಸ್ ಮೂಲಕ ತನ್ನ ಗೌಪ್ಯತಾ ನೀತಿಗಳನ್ನು ಬದಲಿಸುತ್ತಿರುವುದಾಗಿ ಮಾಹಿತಿ ನೀಡಿತ್ತು. “ಪ್ರಸ್ತುತ ಕೆಲವು ವರ್ಗಗಳ ಮಾಹಿತಿಯನ್ನು ಫೇಸ್‌ಬುಕ್ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಇತರ ಕಂಪನಿಗಳೊಂದಿಗೆ ನಾವು ಹಂಚಿಕೊಳ್ಳುವ ಮಾಹಿತಿಯು ನಿಮ್ಮ ಖಾತೆ ನೋಂದಣಿ ಮಾಹಿತಿಯನ್ನು ಒಳಗೊಂಡಿದೆ (ಉದಾಹರಣೆಗೆ ನಿಮ್ಮ ಫೋನ್ ಸಂಖ್ಯೆ), ವಹಿವಾಟು ಡೇಟಾ, ಸೇವೆ-ಸಂಬಂಧಿತ ಮಾಹಿತಿ, ನಮ್ಮ ಸೇವೆಗಳನ್ನು ಬಳಸುವಾಗ ನೀವು ಇತರರೊಂದಿಗೆ ಹೇಗೆ ವರ್ತಿಸುತ್ತೀರಿ (ವ್ಯವಹಾರಗಳು ಸೇರಿದಂತೆ), ಮೊಬೈಲ್ ಸಾಧನ ಮಾಹಿತಿ, ನಿಮ್ಮ ಐಪಿ ವಿಳಾಸ, ಮತ್ತು ಗೌಪ್ಯತೆ ನೀತಿ ವಿಭಾಗದಲ್ಲಿ ಗುರುತಿಸಲಾದ ಇತರ ಮಾಹಿತಿಯನ್ನು ‘ನಾವು ಸಂಗ್ರಹಿಸುವ ಮಾಹಿತಿ ‘ಅಥವಾ ನಿಮಗೆ ಸೂಚನೆಯ ಮೇರೆಗೆ ಅಥವಾ ನಿಮ್ಮ ಒಪ್ಪಿಗೆಯ ಆಧಾರದ ಮೇಲೆ ಪಡೆಯಲಾಗಿದೆ” ಎಂದು ವಾಟ್ಸಾಪ್ ತಿಳಿಸಿತ್ತು.
ಇದನ್ನೂ ಓದಿ: ನಿಮ್ಮ ವೈಯಕ್ತಿಕ ಡೇಟಾ ಬಳಸಲು ಅನುಮತಿಸಿ, ಇಲ್ಲವೆ ಹೊರನಡೆಯಿರಿ: ವಾಟ್ಸಾಪ್ ಎಚ್ಚರಿಕೆ
ಇದಕ್ಕಾಗಿ 2021ರ ಫೆಬ್ರವರಿ 8ರವರೆಗೆ ಗಡುವು ನೀಡಿದ್ದು, ಬಳಕೆದಾರರು ಈ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಿದೆ. ಇಲ್ಲದಿದ್ದಲ್ಲಿ ಅಂತಹ ವಾಟ್ಸಾಪ್ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಅದು ಎಚ್ಚರಿಸಿತ್ತು.
ಇದರಿಂದ ಕೆರಳಿದ ಕೋಟ್ಯಾಂತರ ಬಳಕೆದಾರರು ವಾಟ್ಸಾಪ್ ತ್ಯಜಿಸಿ ಸಿಗ್ನಲ್ ಎಂಬ ಸುರಕ್ಷತಾ ಆಪ್‌ಗೆ ಸೇರಿಕೊಂಡಿದ್ದರು. ಹಾಗಾಗಿ ಭಾರತ ಸೇರಿದಂತೆ ಆರು ರಾಷ್ಟ್ರಗಳಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಪ್‌ಗಳ ಪಟ್ಟಿಯಲ್ಲಿ ಸಿಗ್ನಲ್ ನಂಬರ್ ಒನ್ ಸ್ಥಾನಕ್ಕೇರಿದೆ.
ಇದನ್ನೂ ಓದಿ: ವಾಟ್ಸಾಪ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಸಿಗ್ನಲ್: ಭಾರತ ಸೇರಿ 7 ದೇಶಗಳಲ್ಲಿ ಸಿಗ್ನಲ್ ಪಾರುಪತ್ಯ ಶುರು
ಸಿಗ್ನಲ್ ಆಪ್‌ನ ಘೋಷವಾಕ್ಯವೇ ಖಾಸಗಿತನಕ್ಕೆ ಹೆಲೋ ಹೇಳಿ ಎಂಬುದಾಗಿದೆ. ಇದರಲ್ಲಿ ಎಂಡ್ ಟು ಎಂಡ್ ಎನ್‌ಕ್ರಿಪ್ಡೆಡ್ ಇದ್ದು ಯಾವುದೇ ಸಂದೇಶ-ಸಂಭಾಷಣೆಯನ್ನು ಬೇರೆಯವರು ತಿಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಿಗ್ನಲ್ ಆಪ್ ಅನ್ನು ಸ್ವತಂತ್ರ ಲಾಭರಹಿತ ಸಂಸ್ಥಯು ಅಭಿವೃದ್ದಿಪಡಿಸಿದೆ.
ಇದನ್ನೂ ಓದಿ: ವಾಟ್ಸಾಪ್‌ಗೆ ಗುಡ್‌ಬೈ ಹೇಳಿ, ಸಿಗ್ನಲ್‌ಗೆ ಹೆಲೋ ಹೇಳಿ: ಏನಿದು ಸಿಗ್ನಲ್ ಆಪ್?


