Homeಮುಖಪುಟಚೆಗುವಾರ ನೆನಪು: ಸಂಗಾತಿ 'ಚೆ' ಎಂಬ ವಿಸ್ಮಯಕ್ಕೆ ಸಾವಿಲ್ಲ..

ಚೆಗುವಾರ ನೆನಪು: ಸಂಗಾತಿ ‘ಚೆ’ ಎಂಬ ವಿಸ್ಮಯಕ್ಕೆ ಸಾವಿಲ್ಲ..

ಕ್ಯೂಬಾ ವಿಮೋಚನಾ ಹೋರಾಟದ ಮಹಾದಂಡನಾಯಕನಾಗಿ ಕಾರ್ಯನಿರ್ವಹಿಸಿದ ಚೆ ಕ್ಯೂಬಾ ವಿಮೋಚನೆಯಾದ ಬಳಿಕ ಅಧಿಕಾರದ ಕುರ್ಚಿಯಲ್ಲಿ ಆಸೀನನಾಗಿ ಸುಖಃ ಅನುಭವಿಸಬಹುದಿತ್ತು. ಆತನಿಗೆ ಉನ್ನತೋನ್ನತ ಸ್ಥಾನಗಳು ಒದಗಿಬಂದರೂ ಆತ ಎಂದೂ ‌ಮೈ ಮರೆಯಲಿಲ್ಲ. ಕ್ಯೂಬಾದ ಮಂತ್ರಿಯಾಗಿಯೂ ಕಬ್ಬಿನ ಗದ್ದೆಗಳಲ್ಲಿ ಅತೀ ಸಾಮಾನ್ಯ ರೈತನಂತೆ ದುಡಿದ.

- Advertisement -
- Advertisement -

ಸಂಗಾತಿ ಅರ್ನೆಸ್ಟೋ ಚೆಗುವಾರ ಅವರನ್ನು ಕ್ಯೂಬನ್ ಕ್ರಾಂತಿಕಾರಿಯೆನ್ನುವುದು ಆತನ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿದಂತೆ. ಆತ ಅರ್ಜೆಂಟೈನಾದಲ್ಲಿ ಹುಟ್ಟಿದ… ಕ್ಯೂಬಾದಲ್ಲಿ ತನ್ನ ಬದುಕಿನ ಹೆಚ್ಚಿನ ವರ್ಷಗಳನ್ನು ಕಳೆದು ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ. ಕೊನೆಗೆ ಬೊಲಿವಿಯಾದಲ್ಲಿ ಕಾಂತ್ರಿ ಸಾಧಿಸಲು ಹೊರಟು ಹುತಾತ್ಮನಾದ.

ಆದರೆ ಆತ ಯಾವುದೇ ಒಂದು ದೇಶಕ್ಕೆ ಮಾತ್ರ ಸೀಮಿತವಾಗಲಿಲ್ಲ… ಆತನ ಪ್ರಭಾವ ಲ್ಯಾಟಿನ್ ಅಮೆರಿಕಾದ ಹೆಚ್ಚು ಕಡಿಮೆ ಎಲ್ಲೆಡೆಯ ವಿಮೋಚನಾ ಹೋರಾಟದಲ್ಲಿತ್ತು. ಆತ ಕ್ರಾಂತಿಯ ಅದೆಂತಹ ಅದಮ್ಯ ಚೇತನವೆಂದರೆ ಜಗತ್ತಿನ ಯಾವುದೇ ಮೂಲೆಯಲ್ಲಿಯಾದರೂ ಅನ್ಯಾಯ, ಶೋಷಣೆ, ದೌರ್ಜನ್ಯದ ವಿರುದ್ಧ ಯಾರು ಹೋರಾಡುತ್ತಾರೋ…. ತಮ್ಮ ನಾಡಿನ ವಿಮೋಚನೆಗಾಗಿ ಯಾರು ಹೋರಾಡುತ್ತಾರೋ… ಅವರೆಲ್ಲರೂ ನನ್ನ ಸಂಗಾತಿಗಳು ಎಂದು ಘೋಷಿಸಿದ್ದ.

ಆತ ಹುತಾತ್ಮನಾಗಿ ಸುಮಾರು ಐವತ್ತೈದು ವರ್ಷಗಳಾದರೂ ಆತ ಇಂದಿಗೂ ಓರ್ವ ಸೆಲೆಬ್ರಿಟಿಯಾಗಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಇನ್ನೂ ವಿಚಿತ್ರವೆಂದರೆ ನಮ್ಮ ದೇಶದಲ್ಲಿ ಆತನ ಸಿದ್ಧಾಂತದ ಕಟುವಿರೋಧಿಗಳಾದ ಬಲಪಂಥೀಯ ಯುವಕರೂ ಆತನ ಭಾವಚಿತ್ರವಿರುವ ಟೀ ಶರ್ಟ್ ಧರಿಸುತ್ತಾರೆ…. ಕ್ಯಾಪ್ ಧರಿಸುತ್ತಾರೆ… ಅವರ್ಯಾರೂ ಆತನನ್ನು ಓದಿರಲು ಸಾಧ್ಯವಿಲ್ಲ… ಮತ್ತು ಜಗತ್ತಿನಾದ್ಯಂತದ ಎಡಪಂಥೀಯ ಚಳವಳಿಗಾರರಿಗೆ ಆತ ಓರ್ವ ರೋಲ್ ಮಾಡೆಲ್‌ ಆಗಿ ಇಂದಿಗೂ ಪ್ರಸ್ತುತ.

ಚೆ ಮೂಲತಃ ಓರ್ವ ಚರ್ಮರೋಗ ಶಾಸ್ತ್ರದಲ್ಲಿ ಪರಿಣತಿ ಪಡೆದ ವೈದ್ಯ. ಒಂದು ಕಾಲಕ್ಕೆ ಆತ ತಾನೋರ್ವ ಮಹಾನ್ ವೈದ್ಯಕೀಯ ಸಂಶೋಧಕನಾಗಬೇಕೆಂಬ ಕನಸು ಕಂಡವನು. ಆತ ತಾನು ಬದಲಾದ ಬಗೆಯನ್ನು ತನ್ನ ದಿನಚರಿಯಲ್ಲಿ ಹೀಗೆ ಬರೆಯುತ್ತಾನೆ

“ಕ್ರಾಂತಿಯ ಹಂಬಲ ಹೋರಾಟಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡು ಪಡೆದ ಪಕ್ವ ದೃಷ್ಟಿಕೋನ ನನ್ನ ಹಿಂದಿನ ವೈದ್ಯಕೀಯ ವಿದ್ಯಾರ್ಥಿ ದೆಸೆಯಲ್ಲಿ ಇರಲಿಲ್ಲ. ನಾನು ಎಲ್ಲರಂತೆ ಯಶಸ್ಸಿಗೆ ಆಶಿಸಿದೆ. ನಾನೊಬ್ಬ ಪ್ರಸಿದ್ಧ ಸಂಶೋಧಕನಾಗಿ , ಬಿಡುವಿಲ್ಲದೇ ದುಡಿದು, ಮಾನವ ಜೀವಿಗಳೆಲ್ಲರಿಗೂ ಲಾಭವಾಗುವಂತಹ ಏನಾದರೂ ಸಂಶೋಧನೆ ಮಾಡುವ ಕನಸು ಕಾಣುತ್ತಿದ್ದೆ. ಆದರೆ ಇವೆಲ್ಲಾ ವೈಯಕ್ತಿಕ ಯಶಸ್ಸಿಗಾಗಿ ಕಟ್ಟಿದ ಕನಸುಗಳು.ನಮ್ಮೆಲ್ಲರಂತೆ ನಾನೂ ಸಹ ನಮ್ಮ ಪರಿಸರದಿಂದ ರೂಪಿತವಾದ ವ್ಯಕ್ತಿಯಾಗಿದ್ದೆ. ದಾರಿದ್ರ್ಯದಿಂದಾಗಿ, ಹೇಗೆ ತಂದೆ ತಾಯಿಯರು ತಮ್ಮ ಮಕ್ಕಳ ರೋಗಗಳಿಗೆ ಔಷಧಿ ಕೊಡಲಾರದಾಗಿದ್ದರೆಂಬುದನ್ನು ಕಂಡೆ, ಹಸಿವೆ ಮತ್ತು ನರಳಿಕೆಗಳಿಂದ ಪೀಡಿತನಾದ ತಂದೆ ತನ್ನ ಮಗು ಸಾಯುವುದನ್ನು ನಿರ್ವಿಕಾರವಾಗಿ ಸಾಯುವುದನ್ನು ಸಹಿಸಿಕೊಳ್ಳುವಷ್ಟು ಪಶುಪ್ರಾಯನಾಗಿ ಮನುಷ್ಯನು ಅಧಃಪತನಕ್ಕೆ ಜಾರುವುದನ್ನು ಕಂಡೆ. ಪ್ರಸಿದ್ಧ ಸಂಶೋಧಕನಾಗುವುದಕ್ಕಿಂತ ಅಥವಾ ಆರೋಗ್ಯ ಶಾಸ್ತ್ರಕ್ಕೆ ಒಂದು ಅಮೂಲ್ಯ ಕೊಡುಗೆ ಕೊಡುವುದಕ್ಕಿಂತಲೂ ಯಾವ ರೀತಿಯಲ್ಲೂ ಕನಿಷ್ಟವೆಂದು ಹೇಳಲಾಗದ ಜೀವನದ ಧ್ಯೇಯ ಇನ್ನೊಂದು ಇದೆಯೆಂದು ನಾನು ಕಂಡುಕೊಂಡೆ . ಆಗ ಈ ಜನರ ಸಹಾಯಕ್ಕೆ ನಾನು ಒದಗಬೇಕೆಂಬ ಜ್ಞಾನೋದಯವಾಗಿತ್ತು.”

ಚೆ ಒಂದರ್ಥದಲ್ಲಿ ವಿಶ್ವ ಸಂಚಾರಿ. ಆತ ತನ್ನ ಸಂಚಾರದಲ್ಲಿ ಕಂಡುಕೊಂಡ ಮಾನವಕುಲದ ಹಸಿವು-ನೋವು-ಸಂಕಟ-ನರಳಿಕೆಗಳು ಆತನ ಬದುಕಿನ ಪಥವನ್ನು ಬದಲಿಸಿದವು. ಅಪ್ಪಟ ಮಾನವತಾವಾದಿಯಾಗಿದ್ದ, ಸೂಕ್ಷ್ಮ ಸಂವೇದನೆಯ ವ್ಯಕ್ತಿಯಾಗಿದ್ದ ಚೆ ವಿಮೋಚನಾ ಹೋರಾಟಕ್ಕೊಂದು ಪರ್ಯಾಯ ಹೆಸರೇ ಆಗಿ ಪರಿವರ್ತಿತಗೊಂಡಿದ್ದರ ಹಿಂದೆ ಇರುವುದೇ ಆತ ಕಂಡು ಕೊಂಡ ಸತ್ಯಗಳು.

ಕ್ಯೂಬಾ ವಿಮೋಚನಾ ಹೋರಾಟದ ಮಹಾದಂಡನಾಯಕನಾಗಿ ಕಾರ್ಯನಿರ್ವಹಿಸಿದ ಚೆ ಕ್ಯೂಬಾ ವಿಮೋಚನೆಯಾದ ಬಳಿಕ ಅಧಿಕಾರದ ಕುರ್ಚಿಯಲ್ಲಿ ಆಸೀನನಾಗಿ ಸುಖಃ ಅನುಭವಿಸಬಹುದಿತ್ತು. ಆತನಿಗೆ ಉನ್ನತೋನ್ನತ ಸ್ಥಾನಗಳು ಒದಗಿಬಂದರೂ ಆತ ಎಂದೂ ‌ಮೈ ಮರೆಯಲಿಲ್ಲ. ಕ್ಯೂಬಾದ ಮಂತ್ರಿಯಾಗಿಯೂ ಕಬ್ಬಿನ ಗದ್ದೆಗಳಲ್ಲಿ ಅತೀ ಸಾಮಾನ್ಯ ರೈತನಂತೆ ದುಡಿದ.

ಚೆ ಕ್ಯೂಬಾದಲ್ಲಿ ಅಧಿಕಾರದ್ದಲ್ಲಿದ್ದಾಗ ಅನಾರೋಗ್ಯ ಪೀಡಿತನಾದ. ಆತನಿಗೆ ವಿಶ್ರಾಂತಿಗಾಗಿ ಒಳ್ಳೆಯ ವಸತಿಯ ಅಗತ್ಯ ಬಿತ್ತು. ಆದರೆ ಅದಕ್ಕೆ ತಗಲುವ ಆರ್ಥಿಕ ಚೈತನ್ಯ ಆತನಲ್ಲಿರಲಿಲ್ಲ.ಸರಕಾರ‌ ಆತನಿಗೆ ಉತ್ತಮ ವಸತಿಯ ವ್ಯವಸ್ಥೆ ಮಾಡಿತು. ಆಗ ಚೆ ಹೇಳಿದ ಮಾತು ಇದು ಅತ್ಯಂತ ಐಷಾರಾಮಿ ವಿಲ್ಲಾ. ಇದರಲ್ಲಿ ನಾನು ಅತ್ಯಂತ ಸಾಧಾರಣವಾದುದನ್ನೇ ಆಯ್ದುಕೊಂಡಿದ್ದೇನೆ. ಆದರೆ ನಾನು ಇಲ್ಲೇ ಬೀಡು ಬಿಟ್ಟಿರುವ ವಿಚಾರ ಜನರನ್ನು ನೋಯಿಸಬಹುದು. ನಾನು ಚೇತರಿಸುತ್ತಲೇ ಈ ಮನೆಯನ್ನು ಬಿಟ್ಟು ಹೋಗುವೆನೆಂದು ಕ್ಯೂಬಾದ ಜನತೆಗೆ ಮಾತು ಕೊಡುತ್ತೇನೆ. ಸುಮ್ಮನೆ ನಮ್ಮ ಮಂತ್ರಿ ಮಹೋದಯರ ಬದುಕನ್ನೊಮ್ಮೆ ತಾಳೆ ಹಾಕಿ ನೋಡಿ. ಅಧಿಕಾರ ಮುಗಿದರೂ ವರ್ಷಾನುಗಟ್ಟಲೆ ಜನತೆಯ ತೆರಿಗೆಯ ಹಣವನ್ನು ತಮ್ಮ ಐಷಾರಾಮಿ ಬದುಕಿಗಾಗಿ ಯಾವ ರೀತಿ ದುರುಪಯೋಗಪಡಿಸುತ್ತಾರೆ…

ಸಂಗಾತಿ ಚೆಗುವಾರನನ್ನು 1967ರಲ್ಲಿ ಕೊಲ್ಲಲಾಗುತ್ತದೆ. ಆತನನ್ನು ಯಾವ ಸೈನಿಕ ಕೊಂದಿದ್ದನೋ ಆ ಸೈನಿಕನಿಗೆ ಆತನ ವೃದ್ದಾಪ್ಯದಲ್ಲಿ ಅನಾರೋಗ್ಯ ಕಾಡಿದಾಗ ಆತನಿಗೆ ಚಿಕಿತ್ಸೆ ನೀಡಿ ಆತನನ್ನು ಗುಣಮುಖವಾಗಿಸಿದ್ದು ಕ್ಯೂಬಾದಲ್ಲಿ ಚೆಗುವಾರ ನ ಹೆಸರಲ್ಲೇ ನಿರ್ಮಿಸಲಾಗಿದ್ದ ಆಸ್ಪತ್ರೆಯಲ್ಲಿ. ‘ಚೆ’ಯ ಸಂಗಾತಿ ಕ್ಯೂಬಾದ ಅಂದಿನ ಅಧ್ಯಕ್ಷ ಫಿಡೆಲ್ ಕಾಸ್ಟ್ರೋನಿಗೆ ಆತ ತನ್ನ ಸಂಗಾತಿ ಚೆ ಯನ್ನು ಕೊಂದ ಸೈನಿಕ ಎಂಬ ಸತ್ಯ ಗೊತ್ತಿದ್ದರೂ ಆತನಿಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಚೆ ಮತ್ತು ಫಿಡೆಲ್ ಯುದ್ಧಗಳು ಯುದ್ಧಭೂಮಿಗೆ ಮಾತ್ರ ಸೀಮಿತ ಎಂದು ಅಚಲವಾಗಿ ನಂಬಿದ್ದರು. ಫಿಡೆಲ್ ಪ್ರಕಾರ ಚೆ ಯನ್ನು ಕೊಂದಿದ್ದ ಆ ಸೈನಿಕ ಅಂದು ತನ್ನ ಸೇನೆಯ ಪರವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದ.

ಚೆ ಎಂದರೆ ಓದಿದಷ್ಟೂ ಮತ್ತೆ ಮತ್ತೆ ಓದಿಸುವ ಒಂದು ವಿಸ್ಮಯ ಗ್ರಂಥ. ಕ್ರಾಂತಿಕಾರಿಗೆ ಸಾವಿಲ್ಲ… ಆತ ಸದಾ ಜನರ ಮನದಲ್ಲಿ ಅಜರಾಮರ… ಎಂಬುವುದಕ್ಕೆ ಆಧುನಿಕ ಜಗತ್ತಿನಲ್ಲಿ ಚೆ ಒಂದು ನಿದರ್ಶನ..
ಕಾಮ್ರೇಡ್…. ಚೆಗುವಾರ… ನಿನಗಿದೋ ಕ್ರಾಂತಿಯ ಕೆಂಪು ಸಲಾಂ.


ಇದನ್ನೂ ಓದಿ: “ಅಪ್ಪನಿಂದ ಒಂದು ದೊಡ್ಡ ಮುತ್ತು!”: ಅಪ್ಪನ ಕುರಿತು ಆಪ್ತವಾಗಿ ಮಾತಾಡಿದ ಚೆಗೆವೆರಾನ ಮಗಳು ಅಲೈದಾ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...