ಚೆನ್ನೈನಲ್ಲಿ ನಡೆದ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ಆಗಮಿಸಿದ್ದ ಕನಿಷ್ಠ ಐವರು ಪ್ರೇಕ್ಷಕರು ಕಾರ್ಯಕ್ರಮದ ನಂತರ ಸಾವನ್ನಪ್ಪಿದ್ದಾರೆ ಎಂದು ಡಿಎಂಕೆ ಸಂಸದೆ ಕೆ ಕನಿಮೊಳಿ ಹೇಳಿದ್ದಾರೆ. ಅವರಲ್ಲಿ ಒಬ್ಬನನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.
ಮತ್ತೊಬ್ಬ ವ್ಯಕ್ತಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿಸಿಲಿನ ಝಳಕ್ಕೆ ತುತ್ತಾಗಿದ್ದಾನೆ ಎನ್ನಲಾಗಿದೆ. ಗೋಶಾ ಆಸ್ಪತ್ರೆ ಮತ್ತು ವಾಲಾಜಾ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೈಕ್ ಸವಾರ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಅಸ್ವಸ್ಥರಾಗಿದ್ದರು ಎನ್ನಲಾಗಿದೆ.
“ಜನಸಂದಣಿಯ ನಡುವೆ ನಿಯಂತ್ರಣ ಕಳೆದುಕೊಂಡು ಸಿಲುಕಿದ್ದ ಅವರ ಸ್ಥಿತಿಯನ್ನು ಸ್ವಯಂಸೇವಕರು ಗುರುತಿಸಿದ್ದಾರೆ. ಕೂಡಲೇ ಅವರಿಗೆ ಬೈಕ್‌ನಿಂದ ಇಳಿಯಲು ಸಹಾಯ ಮಾಡಿದರು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ಕಾರಣವನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಕನಿಮೋಳಿ, “ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ಐಎಎಫ್ ಸಾಹಸ ಕಾರ್ಯಕ್ರಮವನ್ನು ವೀಕ್ಷಿಸಿದ ಸಾರ್ವಜನಿಕರು ಜನಸಂದಣಿಯಲ್ಲಿ ಸಿಲುಕಿದ್ದಾರೆ. ತಾಪಮಾನವು ಹೆಚ್ಚಾದಾಗ 5 ಜನರು ಸಾವನ್ನಪ್ಪಿರುವ ಸುದ್ದಿ ತುಂಬಾ ದುಃಖ ಮತ್ತು ನೋವಿನ ಸಂಗತಿಯಾಗಿದೆ” ಎಂದು ಹೇಳಿದ್ದಾರೆ.
15 ಲಕ್ಷ ವೀಕ್ಷಕರನ್ನು ಸಜ್ಜುಗೊಳಿಸುವ ಗುರಿಯೊಂದಿಗೆ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಲು ಅಜ್ಜಾಗಿದ್ದ ಭಾರತೀಯ ವಾಯುಪಡೆಯು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದು, ಚೆನ್ನೈ ಸಿಟಿ ಪೊಲೀಸರ ಕಳಪೆ ಜನಸಂದಣಿ ಮತ್ತು ಟ್ರಾಫಿಕ್ ನಿರ್ವಹಣೆಯೇ ಘಟನೆಗೆ ಕಾರಣ ಎಂದು ಹೇಳಿದ್ದಾರೆ.
ಕಾರ್ಯಕ್ರಮವು ಮುಂದೆ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು, ದೊಡ್ಡ ಪ್ರಮಾಣದ ಟ್ರಾಫಿಕ್ ಡೈವರ್ಶನ್ ಮತ್ತು ಪಾರ್ಕಿಂಗ್ ನಿಯಮಗಳಿದ್ದವು. ಆದರೆ, ಏರ್ ಶೋ 11 ಗಂಟೆಗೆ ನಿಗದಿಯಾಗಿತ್ತು. ಜನಸಂದಣಿಯು ತುಂಬಾ ದೊಡ್ಡದಾಯಿತು, ಮರೀನಾ ಬೀಚ್ ರಸ್ತೆಯು ಜನರ ಸಮುದ್ರವಾಗಿ ಮಾರ್ಪಟ್ಟವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರ್ಯಕ್ರಮದ ನಂತರ ಇಡೀ ಗುಂಪು ಚದುರಲು ಪ್ರಾರಂಭಿಸಿದಾಗ ಗೊಂದಲವು ಉಂಟಾಯಿತು. ಬೀಚ್ ರಸ್ತೆಯ ಇಂಚಿಂಚೂ ಜಾಗವನ್ನು ಜನ ಮತ್ತು ವಾಹನಗಳು ಆಕ್ರಮಿಸಿಕೊಂಡಿದೆ. ಪ್ರೇಕ್ಷಕರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮರ್ಪಕ ವ್ಯವಸ್ಥೆ ಇರಲಿಲ್ಲ. ತಾಪಮಾನ ಏರಿಕೆ ಮತ್ತು ಸಾರ್ವಜನಿಕ ಸಾರಿಗೆ ಇಲ್ಲದ ಕಾರಣ, ನೂರಾರು ಜನರು ಯಾವುದೇ ಸಾರ್ವಜನಿಕ ಸಾರಿಗೆಯನ್ನು ಪಡೆಯಲು ಅಥವಾ ತಮ್ಮ ವಾಹನಗಳನ್ನು ತೆಗೆದುಕೊಳ್ಳಲು ಜಾಮ್ ಆಗಿದ್ದ ರಸ್ತೆಗಳಲ್ಲಿ ಮೂರರಿಂದ ನಾಲ್ಕು ಕಿಲೋಮೀಟರ್ ನಡೆಯಬೇಕಾಯಿತು.
ಅವರಲ್ಲಿ ಅನೇಕರು ಮಕ್ಕಳು ಮತ್ತು ವೃದ್ಧರಿದ್ದರು. ನಿರ್ಜಲೀಕರಣದ ಕಾರಣಕ್ಕೆ ಅವರೆಲ್ಲರೂ ಕಾಲುದಾರಿಯ ಮೇಲೆ ಕುಳಿತುಕೊಂಡರು. ಅನೇಕರು ಮೂರ್ಛೆಹೋಗಿದ್ದು, ಅಲ್ಲಿದ್ದವರು ಅವರಿಗೆ ನೆರವಾಗುತ್ತಿದ್ದರು.
ಮೈದಾನದಲ್ಲಿ ಯಾವುದೇ ಪರಿಣಾಮಕಾರಿ ಪೊಲೀಸ್ ನಿಯಂತ್ರಣವಿಲ್ಲದೆ, ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಅಡ್ಡಾದಿಡ್ಡಿಯಾಗಿ ಎರಡೂ ಮಾರ್ಗಗಳನ್ನು ಪ್ರವೇಶಿಸಿದವು ಎನ್ನಲಾಗಿದ್ದು, ಹೆಚ್ಚಿನ ರಸ್ತೆಗಳಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಜಾಮ್ ಆಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಸಂದರ್ಭದಲ್ಲಿ ಅನೇಕ ಪೊಲೀಸ್ ಸಿಬ್ಬಂದಿ ಮೂಕಪ್ರೇಕ್ಷಕರಾಗಿ ತಮ್ಮ ದ್ವಿಚಕ್ರ ವಾಹನಗಳಲ್ಲಿ ಹಿಂತಿರುಗುವುದರಲ್ಲಿ ನಿರತರಾಗಿದ್ದರು. ಸಾರ್ವಜನಿಕ ಗಲಾಟೆಯಾಗುವವರೆಗೂ ಅವರು ಪರಿಸ್ಥಿತಿಯನ್ನು ನಿಯಂತ್ರಿಸಲಿಲ್ಲ ಅಥವಾ ಸಿಕ್ಕಿಬಿದ್ದ ಆಂಬ್ಯುಲೆನ್ಸ್‌ಗಳಿಗೆ ಸಹಾಯ ಮಾಡಲು ಮಧ್ಯಪ್ರವೇಶಿಸಲಿಲ್ಲ ಎಂದು ಜನರು ಆರೋಪಿಸಿದ್ದಾರೆ.
ರಸ್ತೆಯುದ್ದಕ್ಕೂ ಕುಡಿಯುವ ನೀರಿನ ಕೇಂದ್ರಗಳಿರಲಿಲ್ಲ. ಈ ಪ್ರದೇಶದಲ್ಲಿ ಹೆಚ್ಚಿನ ತಿನಿಸು ಅಂಗಡಿಗಳು ಮುಚ್ಚಲ್ಪಟ್ಟವು. ತೆರೆದಿದ್ದ ಅಂಗಡಿಗಳಲ್ಲಿ ನೀರು ಮತ್ತು ತಂಪು ಪಾನೀಯಗಳು ಖಾಲಿಯಾಗಿದ್ದವು.
ಇದನ್ನೂ ಓದಿ; ರೈಲು ಹಳಿಗಳಲ್ಲಿ ಕುಕ್ಕರ್ ಬಾಂಬ್ | 6 ದುಷ್ಕರ್ಮಿಗಳಿಗೆ ಜೈಲು ಶಿಕ್ಷೆ ವಿಧಿಸಿದ INA ಕೋರ್ಟ್


