ಮಹಿಳಾ ನೈರ್ಮಲ್ಯ ಕಾರ್ಯಕರ್ತೆಯೊಬ್ಬರು (ಪೌರ ಕಾರ್ಮಿಕ ಮಹಿಳೆ) ಬೈಕ್ ಸವಾರನಿಗೆ ಪೊರಕೆಯಿಂದ ಹೊಡೆಯುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಸೋಮವಾರ ಮುಂಜಾನೆ ರಾಯಪುರಂನ 55 ವರ್ಷದ ಪೌರಕಾರ್ಮಿಕ ಮಹಿಳೆ ಅಡ್ಯಾರ್ ಫ್ಲೈಓವರ್ ಕೆಳಗೆ ತನ್ನ ದಿನನಿತ್ಯದ ಶುಚಿಗೊಳಿಸುವ ಕೆಲಸದಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ.
ಬೈಕ್‌ನಲ್ಲಿ ಬಂದ ಯುವಕನೊಬ್ಬ ಮಹಿಳೆಯನ್ನು ಹಲವು ಸಮಯದವರೆಗೆ ನೋಡುತ್ತಿದ್ದ. ಸ್ಥಳದಲ್ಲಿ ಜನ ಯಾರೂ ಇಲ್ಲದಿದ್ದಾಗ, ಅವನು ತನ್ನ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ವರದಿಯಾಗಿದೆ.
A 25-year-old man was arrested for sexually harassing a 50-year-old conservancy worker on the Adyar flyover. The worker chased him away by hitting him with a broom. #news #chennai #Adyar #womensafety #chennailive pic.twitter.com/aFP40oun5h
— Chennai Live Digital 104.8 (@chennailive1048) November 11, 2025
ಇಡೀ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಸವಾರನ ದುಷ್ಕೃತ್ಯಕ್ಕೆ ಮಹಿಳೆ ತಕ್ಷಣ ಪ್ರತಿಕ್ರಿಯಿಸಿ, ತನ್ನ ಪೊರಕೆಯಿಂದ ಆತನಿಗೆ ಹೊಡೆದಿರುವುದನ್ನು ದೃಶ್ಯಗಳು ಕಾಣಬಹುದು.
ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆತನನ್ನು ಆಂಧ್ರಪ್ರದೇಶದ ಕರ್ನೂಲ್‌ನ ಯುವಕ ಎಂದು ಗುರುತಿಸಲಾಗಿದೆ. ಅವರು ಚೆನ್ನೈನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಘಟನೆ ನಡೆದ ಸಮಯದಲ್ಲಿ ತಾನು ಕುಡಿದಿದ್ದಾಗಿ ಮತ್ತು ಮೂತ್ರ ವಿಸರ್ಜಿಸಲು ರಸ್ತೆಬದಿಯಲ್ಲಿ ತನ್ನ ಬೈಕನ್ನು ನಿಲ್ಲಿಸಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಸಾವಿರಕ್ಕೂ ಅಧಿಕ ‘ನಕಲಿ ಮತದಾರರು’ ಪತ್ತೆ : ಮಹತ್ವದ ಅಧ್ಯಯನ ವರದಿ ಬಿಡುಗಡೆ


