ಭಿನ್ನ ಸಮುದಾಯದ ಬಾಲಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ದಲಿತ ಯುವಕನನ್ನು ಬಟ್ಟೆ ಬಿಚ್ಚಿ ಥಳಿಸಿದ ಘಟನೆ ಛತ್ತೀಸ್‌ಗಢದ ಶಕ್ತಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಶುಕ್ರವಾರ ವರದಿ ಮಾಡಿದೆ. ಛತ್ತೀಸ್‌ಗಢ
ಇತರ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ 16 ವರ್ಷದ ಬಾಲಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ 21 ವರ್ಷದ ದಲಿತ ಯುವಕನ ಮೇಲೆ ಗುರುವಾರ ಹಲ್ಲೆ ನಡೆಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಹಲ್ಲೆಯ ವೀಡಿಯೊಗಳನ್ನು ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ನಂತರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮುದಾಯದ ಮುಖ್ಯಸ್ಥರನ್ನು ದೂರುದಾರರನ್ನಾಗಿ ನೇಮಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಶಕ್ತಿ ಪೊಲೀಸ್ ವರಿಷ್ಠಾಧಿಕಾರಿ ಅಂಕಿತಾ ಶರ್ಮಾ ಹೇಳಿದ್ದಾರೆ ಎಂದು ದಿ ಹಿಂದೂ ಉಲ್ಲೇಖಿಸಿದೆ. ಭಾರತೀಯ ನ್ಯಾಯ ಸಂಹಿತಾದ ಕೊಲೆ ಯತ್ನ ಸೆಕ್ಷನ್ ಅಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ-1989 ಹಾಗೂ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಥಳಿತಕ್ಕೊಳಗಾದ ದಲಿತ ಯುವಕನ ವ್ಯಕ್ತಿಯ ಎಡ ಕಣ್ಣು ಮತ್ತು ದೇಹಕ್ಕೆ ಗಾಯಗಳಾಗಿದ್ದು, ರಾಯಗಢ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ಹೇಳಿದೆ. ಯುವಕನೂ ಬಾಲಕಿಯ ಮನೆಗೆ ಭೇಟಿ ನೀಡಿದ್ದಾಗ ಮನೆಯವರ ಕುಟುಂಬವು ಅವರನ್ನು ಬಂಧಿಸಿದೆ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ.
ರಾತ್ರಿಯಿಡೀ ಯುವಕನನ್ನು ಬಂಧಿಸಿ ನೀರಿನ ಪೈಪ್‌ಗಳು, ಲಾಠಿ, ಪಾದರಕ್ಷೆಗಳು ಮತ್ತು ಸೂಜಿಗಳಿಂದ ಹಲ್ಲೆ ಮಾಡಲಾಯಿತು ಎಂದು ಸಂತ್ರಸ್ತ ಯುವಕನ ಸಹೋದರ ಹೇಳಿದ್ದಾರೆ.
“ನಾವು ಸತ್ನಾಮಿ ಸಮುದಾಯದವರು [ಛತ್ತೀಸ್‌ಗಢದ ಪರಿಶಿಷ್ಟ ಜಾತಿ ಗುಂಪು] ಮತ್ತು ಅವರು ಇತರ ಹಿಂದುಳಿದ ವರ್ಗಗಳಿಗೆ ಸೇರಿರುವ ಚಂದ್ರ ಸಮುದಾಯದವರು. ಆದ್ದರಿಂದ, ಅವರಿಬ್ಬರ ಪ್ರೇಮ ಸಂಬಂಧವನ್ನು ವಿರೋಧಿಸಿದರು. ನನ್ನ ಸಹೋದರನ ಮೇಲೂ ಜಾತಿ ನಿಂದನೆ ಮಾಡಲಾಗಿದ್ದು, ಅವರು ಅವನನ್ನು ವಿವಸ್ತ್ರಗೊಳಿಸಿ ನಂತರ ಚಿತ್ರೀಕರಿಸಿದರು.” ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊ ತುಣುಕುಗಳಲ್ಲಿ ಒಂದರಲ್ಲಿ, ಯುವಕ ನೀರು ಕೇಳುತ್ತಿರುವುದನ್ನು ದಾಖಲಾಗಿದ್ದು, ಅವರ ವಿನಂತಿಯನ್ನು ಅವರು ನಿರಾಕರಿಸುತ್ತಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಒಬ್ಬ ವ್ಯಕ್ತಿ ಹಗ್ಗದಂತಹ ವಸ್ತುವಿನಿಂದ ಆತನನ್ನು ಥಳಿಸುತ್ತಿರುವುದು ಕೂಡಾ ದಾಖಲಾಗಿದ್ದು, ಇನ್ನೊಂದು ಕ್ಲಿಪ್‌ನಲ್ಲಿ ಸೂಜಿಯಿಂದ ಚುಚ್ಚಲಾಗಿದೆ ಎಂದು ಹೇಳುವುದನ್ನು ಕೇಳಬಹುದಾಗಿದೆ. ಛತ್ತೀಸ್‌ಗಢ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ: 10 ಪೊಲೀಸರಿಗೆ ಗಾಯ
ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ: 10 ಪೊಲೀಸರಿಗೆ ಗಾಯ

