”ಮೂಲವಾಸಿ ಬಚಾವೋ ಮಂಚ್” ಎಂಬ ಆದಿವಾಸಿ ಸಮುದಾಯದ ಸಂಘಟನೆಯನ್ನು ಛತ್ತೀಸ್‌ಗಢದ ಬಿಜೆಪಿ ಸರ್ಕಾರ ಒಂದು ವರ್ಷದವರೆಗೆ ನಿಷೇಧಿಸಿದೆ. ಅಕ್ಟೋಬರ್ 30 ರಂದು ಛತ್ತೀಸ್‌ಗಢ ವಿಶೇಷ ಸಾರ್ವಜನಿಕ ಭದ್ರತಾ ಕಾಯಿದೆ, 2005 ರ ಅಡಿಯಲ್ಲಿ ನಿಷೇಧವನ್ನು ವಿಧಿಸಲಾಗಿದ್ದು, ಸಂಘಟನೆಯು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು “ನಿರಂತರವಾಗಿ ವಿರೋಧಿಸುತ್ತಿದ್ದು, ಸಾರ್ವಜನಿಕರನ್ನು ಪ್ರಚೋದಿಸುತ್ತಿದೆ” ಎಂದು ಸರ್ಕಾರ ಆರೋಪಿಸಿದೆ. ಈ ಬಗ್ಗೆ ಹೋರಾಟಗಾರರು ಮತ್ತು ಜನಪರ ಸಂಘಟನೆಗಳು ತೀವ್ರ ಆಕ್ರೊಶ ವ್ಯಕ್ತಪಡಿಸಿವೆ.
ಅಭಿವೃದ್ಧಿ ಯೋಜನೆಗಳಿಗಾಗಿ ನಿರ್ಮಿಸಲಾದ ಭದ್ರತಾ ಶಿಬಿರಗಳ ವಿರುದ್ಧ ಸಂಘಟನೆಯು ಜನರನ್ನು ಪ್ರಚೋದಿಸುತ್ತಿದೆ ಎಂದು ಸರ್ಕಾರ ಆರೋಪಿಸಿದೆ. ಸಂಘಟನೆಯು ಕಾನೂನು ಜಾರಿಯಲ್ಲಿ ಮಧ್ಯಪ್ರವೇಶಿಸುತ್ತಿದ್ದು, ಜೊತೆಗೆ ಕಾನೂನಿನಿಂದ ಸ್ಥಾಪಿಸಲಾದ ಸಂಸ್ಥೆಗಳಿಗೆ ಅಸಹಕಾರವನ್ನು ಉತ್ತೇಜಿಸುತ್ತಿದೆ ಎಂದು ಸರ್ಕಾರ ಹೇಳಿದೆ. “ಈ ಮೂಲಕ ಸಂಘಟನೆಯು ಸಾರ್ವಜನಿಕ ಸುವ್ಯವಸ್ಥೆ, ಶಾಂತಿ ಮತ್ತು ನಾಗರಿಕರ ಸುರಕ್ಷತೆಗೆ ಧಕ್ಕೆಯುಂಟುಮಾಡುತ್ತದೆ. ಇದು ರಾಜ್ಯದ ಭದ್ರತೆಗೆ ಹಾನಿಕರವಾಗಿದೆ” ಎಂದು ಸರ್ಕಾರ ಹೇಳಿದೆ. ಛತ್ತೀಸ್‌ಗಢ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆದಾಗ್ಯೂ, ಹೋರಾಟಗಾರರು ಮತ್ತು ಜನಪರ ಸಂಘಟನೆಗಳು, ಮೂಲವಾಸಿ ಬಚಾವೋ ಮಂಚ್ ಮೇಲಿನ ನಿಷೇಧವನ್ನು ಸರ್ವಾಧಿಕಾರ ಎಂದು ಬಣ್ಣಿಸಿದ್ದಾರೆ. ರಾಜ್ಯ ಸರ್ಕಾರವನ್ನು ವಿಮರ್ಶೆ ಮಾಡುವ ಧ್ವನಿಗಳನ್ನು ಮೌನಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ಮೂಲವಾಸಿ ಬಚಾವೋ ಮಂಚ್ ಅನ್ನು ನಿಷೇಧಿಸುವುದಕ್ಕೆ ಆಧಾರವೇನಿದೆ? ಬಸ್ತಾರ್‌ನ ಆದಿವಾಸಿಗಳು ಈ ಸಂಘಟನೆಯನ್ನು ರೂಪಿಸಲು ಮಾಡುವಂತೆ ಮಾಡಿದವರು ಯಾರು? ಸರ್ಕಾರ ಆದಿವಾಸಿಗಳ ಬೇಡಿಕೆಗಳನ್ನು ಆಲಿಸಿದ್ದರೆ, ಗಣಿಗಾರಿಕೆ ನಿಲ್ಲಿಸಿದ್ದರೆ, ಕ್ಯಾಂಪ್‌ಗಳನ್ನು ನಿರ್ಮಿಸುವುದನ್ನು ನಿಲ್ಲಿಸಿ ಸಿಲ್ಗರ್‌ನಲ್ಲಿ ನಾಲ್ವರನ್ನು ಕೊಲ್ಲದೆ ಇದ್ದರೆ, ಮೂಲವಾಸಿ ಬಚಾವೊ ಮಂಚ್‌ನ ಅಗತ್ಯವೆ ಇರಲಿಲ್ಲ” ಎಂದು ಸಂಘಟನೆಯ ಕಾರ್ಯಕರ್ತೆ ಸೋನಿ ಸೋರಿ ಹೇಳಿದ್ದಾರೆ.
2021ರ ಮೇ ತಿಂಗಳಲ್ಲಿ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಯಲ್ಲಿರುವ ಸಿಲ್ಗರ್ ಗ್ರಾಮದ ಬಳಿ ಪೋಲಿಸ್ ಗುಂಡಿನ ದಾಳಿಯಲ್ಲಿ ನಾಲ್ವರು ಕೊಲ್ಲಲ್ಪಟ್ಟಿದ್ದರು. ಈ ಪ್ರದೇಶದಲ್ಲಿ ಭದ್ರತಾ ಶಿಬಿರವನ್ನು ಸ್ಥಾಪಿಸುವುದನ್ನು ಆದಿವಾಸಿಗಳ ಗುಂಪು ಪ್ರತಿಭಟಿಸಿದ ನಂತರ ಈ ಗುಂಡಿನ ದಾಳಿ ನಡೆದಿತ್ತು.
ಕಾರ್ಪೊರೇಟೀಕರಣ ಮತ್ತು ಮಿಲಿಟರೀಕರಣದ ವಿರುದ್ಧದ ವೇದಿಕೆಯು ಮೂಲವಾಸಿ ಬಚಾವೋ ಮಂಚ್‌ನ ಕಾರ್ಯಕರ್ತರಾದ ಸುನೀತಾ ಪೊಟ್ಟಂ ಮತ್ತು ಸುರ್ಜು ಟೇಕಂ ಸೇರಿದಂತೆ ಹಲವಾರು ಸದಸ್ಯರನ್ನು ಕಟ್ಟುಕಥೆ ಕಟ್ಟಿ ಬಂಧಿಸಲಾಗಿದೆ ಎಂದು ಆರೋಪಿಸಿದೆ.
ಜೂನ್‌ನಲ್ಲಿ, ಮಾವೋವಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ಸುನೀತಾ ಪೊಟ್ಟಮ್ ಅವರನ್ನು ಪೊಲೀಸರು ಬಂಧಿಸಿದ್ದರು. ಕೊಲೆ, ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯಿದೆಯಡಿ ಅಪರಾಧಗಳ 12 ಪ್ರಕರಣಗಳಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಏಪ್ರಿಲ್‌ನಲ್ಲಿ ಪೊಲೀಸರು ಸುರ್ಜು ಟೇಕಮ್‌ನನ್ನು ಕೂಡಾ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಬಂಧಿಸಿದ್ದರು.
ಸಿಲ್ಗರ್ ಹತ್ಯೆಯ ನಂತರ ಮೂಲವಾಸಿ ಬಚಾವೋ ಮಂಚ್ ಸಿಲ್ಗರ್‌ನಲ್ಲಿ ಧರಣಿ ಪ್ರತಿಭಟನೆ ನಡೆಸುತ್ತಿದೆ ಮತ್ತು ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಅರೆಸೈನಿಕ ಶಿಬಿರಗಳ ವಿರುದ್ಧ 30 ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ಆಯೋಜಿಸಿತ್ತು.
“ತಮ್ಮ ಹಳ್ಳಿಗಳಲ್ಲಿ ಪ್ರತಿಭಟನೆಗೆ ಕುಳಿತಿರುವ ಜನರ ನಡೆಯನ್ನು ಕಾನೂನುಬಾಹಿರವೆಂದು ಹೇಗೆ ಘೋಷಿಸಲು ಸಾಧ್ಯ” ಎಂದು ಸಮಾಜಶಾಸ್ತ್ರಜ್ಞೆ ಮತ್ತು ಹೋರಾಟಗಾರ್ತಿ ನಂದಿನಿ ಸುಂದರ್ ಸೋಮವಾರ ಪ್ರಶ್ನಿಸಿದ್ದಾರೆ. ಸಂಘಟನೆಯು ಅಭಿವೃದ್ಧಿಯನ್ನು ತಡೆಯುತ್ತಿದೆ ಎಂಬ ಸರ್ಕಾರದ ಆರೋಪ ಸುಳ್ಳಾಗಿದ್ದು, ಸಂಘಟನೆಯು ಭದ್ರತಾ ಶಿಬಿರಗಳ ಬದಲಿಗೆ ಶಾಲೆಗಳು ಮತ್ತು ಆರೋಗ್ಯ ಸೇವೆಗಳಿಗೆ ಒತ್ತಾಯಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ‘ಜಿರಿಬಾಮ್ ಎನ್‌ಕೌಂಟರ್‌ನಲ್ಲಿ ಹತರಾದವರು ಹುತಾತ್ಮರು’ ಎಂದು ಪ್ರತಿಪಾದಿಸಿದ ಕುಕಿ ಬಿಜೆಪಿ ಶಾಸಕ
ಮಣಿಪುರ ಹಿಂಸಾಚಾರ: ‘ಜಿರಿಬಾಮ್ ಎನ್‌ಕೌಂಟರ್‌ನಲ್ಲಿ ಹತರಾದವರು ಹುತಾತ್ಮರು’ ಎಂದು ಪ್ರತಿಪಾದಿಸಿದ ಕುಕಿ ಬಿಜೆಪಿ ಶಾಸಕ


