ಕೇಂದ್ರಿಯ ತನಿಖಾ ಸಂಸ್ಥೆಗಳು ‘ಕೋಳಿ ಕಳ್ಳತನ’ದಂತಹ ಘಟನೆಗಳ ತನಿಖೆ ಮಾಡುತ್ತದೆ ಆದರೆ, ಉತ್ತರ ಪ್ರದೇಶದ ಪರೀಕ್ಷಾ ಪತ್ರಿಕೆ ಸೋರಿಕೆಯಂತಹ ಪ್ರಕರಣಗಳನ್ನು ಬಿಜೆಪಿ ಆಜ್ಞೆಯ ಮೇರೆಗೆ ಅದನ್ನು ಮುಟ್ಟುವುದಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಳಿ ಕಳ್ಳತನದ
ತನ್ನ ಆಳ್ವಿಕೆಯ ರಾಜ್ಯಗಳಲ್ಲಿ ಪೇಪರ್ ಸೋರಿಕೆಯ ಹಿಂದೆ ಬಿಜೆಪಿಯ ಕೈವಾಡವಿದೆ ಮತ್ತು ಅಲ್ಲಿಂದ ಗಳಿಸಿದ ಹಣವನ್ನು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂದು ಸೋರೆನ್ ಆರೋಪಿಸಿದ್ದಾರೆ. ಜೊತೆಗೆ ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಖರ್ಚು ಮಾಡುತ್ತಿರುವ ಹಣ ಈ ಮೂಲದ್ದೆ ಆಗಿದೆ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಮಾಡುತ್ತಿರುವ ಆಡಂಬರದ ಪ್ರದರ್ಶನಕ್ಕೆ ಪೇಪರ್ ಸೋರಿಕೆಯ ಹಣವೇ ಕಾರಣ. ಇತ್ತೀಚಿನ ದಿನಗಳಲ್ಲಿ ಕೋಳಿ ಕಳ್ಳತನ ಪ್ರಕರಣಗಳ ತನಿಖೆಯನ್ನು ಪ್ರಾರಂಭಿಸಿರುವ ಇಡಿ, ಸಿಬಿಐ, ಎನ್‌ಐಎ ಪೇಪರ್ ಸೋರಿಕೆಯನ್ನು ತನಿಖೆ ಮಾಡುವುದಿಲ್ಲ. ಏಕೆಂದರೆ ಅದರ ಹಿಂದೆ ಬಿಜೆಪಿಯಿದೆ. ಪತ್ರಿಕೆಗಳನ್ನು ಸೋರಿಕೆ ಮಾಡಿ ಬರುವ ಹಣದಿಂದ, ಚುನಾವಣೆಯ ನಂತರ ಶಾಸಕರು ಮತ್ತು ಸಂಸದರನ್ನು ಬಿಜೆಪಿ ಖರೀದಿಸುತ್ತದೆ” ಎಂದು ಸೋರೆನ್ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ. ಕೋಳಿ ಕಳ್ಳತನದ
मेरे युवा साथियों,
2017 में उत्तर प्रदेश में सत्ता में आने के बाद भाजपा सरकार एक परीक्षा पूरी नहीं करा पायी – एक परीक्षा – क्यों ?
‼️ बात बात पर बुलडोज़र चला देने वाली सरकार – आख़िर एक लीक करने वाले को गिरफ़्तार क्यों नहीं कर पायी ? आख़िर क्यों किसी को 8 साल में सजा नहीं हुई।… pic.twitter.com/uKWWtKwg4f
— Hemant Soren (@HemantSorenJMM) November 15, 2024
“ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಪರೀಕ್ಷಾ ಪತ್ರಿಕೆಗಳು ಸೋರಿಕೆಯಾಗಿದೆ. ಮಧ್ಯಪ್ರದೇಶದ ವ್ಯಾಪಂ ಹಗರಣವು ಹಲವಾರು ಜೀವಗಳನ್ನು ಬಲಿ ಪಡೆದಿದೆ. ಜಾರ್ಖಂಡ್‌ನಲ್ಲಿ ನಾವು ಒಂದು ಪತ್ರಿಕೆ ಸೋರಿಕೆಯ ನಂತರ ಕಠಿಣ ಕಾನೂನು ಮಾಡಿದ್ದೇವೆ. ಆದರೆ ಬಿಜೆಪಿ ಇದನ್ನು ಕರಾಳ ಕಾನೂನು ಎಂದು ಬಣ್ಣಿಸಿ ರಾಜಭವನಕ್ಕೆ ಹೋಗಿದೆ” ಎಂದು ಅವರು ಆರೋಪಿಸಿದ್ದಾರೆ.
“ಸುಳ್ಳು” ಪ್ರಕರಣಗಳಲ್ಲಿ ಇಡಿ ಮತ್ತು ಸಿಬಿಐ ನನಗೆ “ಕಿರುಕುಳ” ನೀಡದಿದ್ದರೆ, ಸರ್ಕಾರದಲ್ಲಿ ಹಲವಾರು ಹೊಸ ಹುದ್ದೆಗಳನ್ನು ಸೃಷ್ಟಿಸಿ ದೊಡ್ಡ ಪ್ರಮಾಣದ ನೇಮಕಾತಿಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೆ ಎಂದು ಸೋರೆನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ₹53 ಕೋಟಿಗೆ 63 ಕ್ಷೇತ್ರಗಳ ಇವಿಎಂ ಹ್ಯಾಕ್ : ‘ಮಹಾ’ ಚುನಾವಣೆಗೆ ಮುನ್ನ ರಹಸ್ಯ ಬಯಲು
₹53 ಕೋಟಿಗೆ 63 ಕ್ಷೇತ್ರಗಳ ಇವಿಎಂ ಹ್ಯಾಕ್ : ‘ಮಹಾ’ ಚುನಾವಣೆಗೆ ಮುನ್ನ ರಹಸ್ಯ ಬಯಲು


