Homeಮುಖಪುಟಕೋಳಿ ಕಳ್ಳತನದ ತನಿಖೆ ಮಾಡುವ ಸಿಬಿಐ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಬಿಜೆಪಿ ಕಾರಣಕ್ಕೆ ಸುಮ್ಮನಿರುತ್ತವೆ: ಹೇಮಂತ್...

ಕೋಳಿ ಕಳ್ಳತನದ ತನಿಖೆ ಮಾಡುವ ಸಿಬಿಐ, ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಬಿಜೆಪಿ ಕಾರಣಕ್ಕೆ ಸುಮ್ಮನಿರುತ್ತವೆ: ಹೇಮಂತ್ ಸೊರೆನ್

- Advertisement -
- Advertisement -

ಕೇಂದ್ರಿಯ ತನಿಖಾ ಸಂಸ್ಥೆಗಳು ‘ಕೋಳಿ ಕಳ್ಳತನ’ದಂತಹ ಘಟನೆಗಳ ತನಿಖೆ ಮಾಡುತ್ತದೆ ಆದರೆ, ಉತ್ತರ ಪ್ರದೇಶದ ಪರೀಕ್ಷಾ ಪತ್ರಿಕೆ ಸೋರಿಕೆಯಂತಹ ಪ್ರಕರಣಗಳನ್ನು ಬಿಜೆಪಿ ಆಜ್ಞೆಯ ಮೇರೆಗೆ ಅದನ್ನು ಮುಟ್ಟುವುದಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಳಿ ಕಳ್ಳತನದ

ತನ್ನ ಆಳ್ವಿಕೆಯ ರಾಜ್ಯಗಳಲ್ಲಿ ಪೇಪರ್ ಸೋರಿಕೆಯ ಹಿಂದೆ ಬಿಜೆಪಿಯ ಕೈವಾಡವಿದೆ ಮತ್ತು ಅಲ್ಲಿಂದ ಗಳಿಸಿದ ಹಣವನ್ನು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಲಾಗುತ್ತಿದೆ ಎಂದು ಸೋರೆನ್ ಆರೋಪಿಸಿದ್ದಾರೆ. ಜೊತೆಗೆ ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಖರ್ಚು ಮಾಡುತ್ತಿರುವ ಹಣ ಈ ಮೂಲದ್ದೆ ಆಗಿದೆ ಎಂದು ಅವರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಮಾಡುತ್ತಿರುವ ಆಡಂಬರದ ಪ್ರದರ್ಶನಕ್ಕೆ ಪೇಪರ್ ಸೋರಿಕೆಯ ಹಣವೇ ಕಾರಣ. ಇತ್ತೀಚಿನ ದಿನಗಳಲ್ಲಿ ಕೋಳಿ ಕಳ್ಳತನ ಪ್ರಕರಣಗಳ ತನಿಖೆಯನ್ನು ಪ್ರಾರಂಭಿಸಿರುವ ಇಡಿ, ಸಿಬಿಐ, ಎನ್‌ಐಎ ಪೇಪರ್ ಸೋರಿಕೆಯನ್ನು ತನಿಖೆ ಮಾಡುವುದಿಲ್ಲ. ಏಕೆಂದರೆ ಅದರ ಹಿಂದೆ ಬಿಜೆಪಿಯಿದೆ. ಪತ್ರಿಕೆಗಳನ್ನು ಸೋರಿಕೆ ಮಾಡಿ ಬರುವ ಹಣದಿಂದ, ಚುನಾವಣೆಯ ನಂತರ ಶಾಸಕರು ಮತ್ತು ಸಂಸದರನ್ನು ಬಿಜೆಪಿ ಖರೀದಿಸುತ್ತದೆ” ಎಂದು ಸೋರೆನ್ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ. ಕೋಳಿ ಕಳ್ಳತನದ

“ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಪರೀಕ್ಷಾ ಪತ್ರಿಕೆಗಳು ಸೋರಿಕೆಯಾಗಿದೆ. ಮಧ್ಯಪ್ರದೇಶದ ವ್ಯಾಪಂ ಹಗರಣವು ಹಲವಾರು ಜೀವಗಳನ್ನು ಬಲಿ ಪಡೆದಿದೆ. ಜಾರ್ಖಂಡ್‌ನಲ್ಲಿ ನಾವು ಒಂದು ಪತ್ರಿಕೆ ಸೋರಿಕೆಯ ನಂತರ ಕಠಿಣ ಕಾನೂನು ಮಾಡಿದ್ದೇವೆ. ಆದರೆ ಬಿಜೆಪಿ ಇದನ್ನು ಕರಾಳ ಕಾನೂನು ಎಂದು ಬಣ್ಣಿಸಿ ರಾಜಭವನಕ್ಕೆ ಹೋಗಿದೆ” ಎಂದು ಅವರು ಆರೋಪಿಸಿದ್ದಾರೆ.

“ಸುಳ್ಳು” ಪ್ರಕರಣಗಳಲ್ಲಿ ಇಡಿ ಮತ್ತು ಸಿಬಿಐ ನನಗೆ “ಕಿರುಕುಳ” ನೀಡದಿದ್ದರೆ, ಸರ್ಕಾರದಲ್ಲಿ ಹಲವಾರು ಹೊಸ ಹುದ್ದೆಗಳನ್ನು ಸೃಷ್ಟಿಸಿ ದೊಡ್ಡ ಪ್ರಮಾಣದ ನೇಮಕಾತಿಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೆ ಎಂದು ಸೋರೆನ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ₹53 ಕೋಟಿಗೆ 63 ಕ್ಷೇತ್ರಗಳ ಇವಿಎಂ ಹ್ಯಾಕ್ : ‘ಮಹಾ’ ಚುನಾವಣೆಗೆ ಮುನ್ನ ರಹಸ್ಯ ಬಯಲು

₹53 ಕೋಟಿಗೆ 63 ಕ್ಷೇತ್ರಗಳ ಇವಿಎಂ ಹ್ಯಾಕ್ : ‘ಮಹಾ’ ಚುನಾವಣೆಗೆ ಮುನ್ನ ರಹಸ್ಯ ಬಯಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ಹಿಂದೂ ಸಮಾಜಕ್ಕಂಟಿದ ‘ಕಳಂಕ’: ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ

"ಜಾತಿ ಆಧಾರಿತ ತಾರತಮ್ಯವು ಹಿಂದೂ ಸಮಾಜಕ್ಕಂಟಿದ ಕಳಂಕ, ಕೇವಲ ಕಾನೂನುಗಳಿಂದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ, ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆಯಾಗುವ ಅಗತ್ಯವಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌)...

ಎಸ್‌ಐಆರ್‌ನ ಮೂರು ಹಂತಗಳಲ್ಲಿ 13.98 ಕೋಟಿ ಮತದಾರರು ಹೊರಕ್ಕೆ; 5.43 ಕೋಟಿ ಮತದಾರರಿಗೆ ಅಳಿಸುವಿಕೆಯ ಭೀತಿ: ಕಾಂಗ್ರೆಸ್ 

ನವದೆಹಲಿ: ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ದೇಶದ ಕೋಟ್ಯಂತರ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. SIRನ...

ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ : ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.21) ಆದೇಶಿಸಿದೆ. ಈ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮೂರು ತಿಂಗಳೊಳಗೆ ಅನುಪಾಲನಾ ವರದಿಯನ್ನು (compliance report)...

1,400 ಮುಸ್ಲಿಂ ಕುಟುಂಬಗಳ ಬದುಕು ಕಸಿದುಕೊಂಡ ಭೂಮಿಯಲ್ಲಿ ಅದಾನಿ ವಿದ್ಯುತ್ ಯೋಜನೆಗೆ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಅಡಿಪಾಯ

ಗುವಾಹಟಿ: ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಸುಮಾರು 1,400 ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸಿ, ಅವರ ಮನೆಗಳನ್ನು ನೆಲಸಮಗೊಳಿಸಿದ ಪ್ರದೇಶದಲ್ಲೇ ಅದಾನಿ ಪವರ್ ಲಿಮಿಟೆಡ್‌ನ 3,200 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಯೋಜನೆಗೆ...

ಮಧುಗಿರಿ: ಗಣೇಶೋತ್ಸವದಲ್ಲಿ ಕುಣಿದಿದ್ದಕ್ಕೆ 17 ವರ್ಷದ ದಲಿತ ಬಾಲಕನ ಕೊಲೆ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ ದಲಿತ ಸಮುದಾಯದ17 ವರ್ಷದ ಬಾಲಕ ಸಿಂಹಾದ್ರಿಯನ್ನು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಘಟನೆಯ...

DELHI SIR : ಕರಡು ಪಟ್ಟಿಯಲ್ಲಿ 2024ರಲ್ಲಿ ನಿಧನರಾದ ಅರ್ಥಶಾಸ್ತ್ರಜ್ಞ ಬಿಬೇಕ್ ದೆಬ್ರಾಯ್ ಹೆಸರು!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅವಾಂತರಗಳು ದಿನಕ್ಕೊಂದು ಬೆಳಕಿಗೆ ಬರುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, 2024ರಲ್ಲಿ ನಿಧನರಾದ ಪದ್ಮ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಬಿಬೆಕ್ ದೆಬ್ರಾಯ್ ಅವರ...

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...