ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಮಂಗಳವಾರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ನಿರ್ಲಕ್ಷ್ಯದ ಕ್ರಮಕ್ಕಾಗಿ ಹೈಕೋರ್ಟ್ ಮತ್ತು ಉತ್ತರ ಪ್ರದೇಶ ಸರ್ಕಾರ ಎರಡನ್ನೂ ತರಾಟೆಗೆ ತೆಗೆದುಕೊಂಡಿದೆ. ಮಕ್ಕಳ ಕಳ್ಳಸಾಗಣೆ ಪ್ರಕರಣ
ಮಕ್ಕಳ ಕಳ್ಳಸಾಗಣೆ ಮತ್ತು ಅದರಿಂದ ಉಂಟಾಗುವ ಅಪರಾಧಗಳನ್ನು ತಡೆಗಟ್ಟಲು ಎಲ್ಲಾ ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ನೀಡಿದ್ದು, ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ವಿಫತೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಉತ್ತರ ಪ್ರದೇಶದ ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಿಗೆ ಅಲಹಾಬಾದ್ ಹೈಕೋರ್ಟ್ ನೀಡಿದ ನಿರೀಕ್ಷಣಾ ಜಾಮೀನಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಮಗುವಿನ ತಾಯಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನು ನೀಡಿದೆ.
ಕದ್ದ ಮಗುವನ್ನು – ಆರೋಪಿಯು – ಗಂಡು ಮಗುವನ್ನು ಹೊಂದಲು ಬಯಸುವ ದಂಪತಿಗಳಿಗೆ ನೀಡಿದ ಪ್ರಕರಣ ಇದಾಗಿದೆ.
“ನಾವು ಎಲ್ಲರಿಗೂ, ವಿಶೇಷವಾಗಿ ದೇಶಾದ್ಯಂತದ ಪೋಷಕರಿಗೆ ಒಂದು ಸಂದೇಶವನ್ನು ನೀಡಲು ಬಯಸುತ್ತೇವೆ. ಅವರು ತಮ್ಮ ಮಕ್ಕಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಹೆತ್ತವರ ಕಡೆಯಿಂದ ಅಗುವ ಅಲ್ಪ ನಿರ್ಲಕ್ಷ್ಯವೂ ಅತ್ಯಂತ ದುಬಾರಿಯಾಗಬಹುದು.
ಯಾವುದೇ ಪೋಷಕರು ತಮ್ಮ ಮಗು ಸತ್ತಾಗ ಎದುರಿಸಬಹುದಾದ ನೋವು ಮತ್ತು ಸಂಕಟವು ಕಳ್ಳಸಾಗಣೆಯಲ್ಲಿ ತೊಡಗಿರುವ ಅಂತಹ ಗ್ಯಾಂಗ್‌ಗಳಿಗೆ ಕೈಗೆ ಅವರ ಮಕ್ಕಳನ್ನು ಸಿಕ್ಕಾಗ ಅವರು ಅನುಭವಿಸಬಹುದಾದ ನೋವು ಮತ್ತು ಸಂಕಟಕ್ಕಿಂತ ಭಿನ್ನವಾಗಿರುತ್ತದೆ” ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಒಂದು ಮಗು ಸತ್ತಾಗ, ಪೋಷಕರು ಕಾಲಕ್ರಮೇಣ ಸರ್ವಶಕ್ತನ ಇಚ್ಛೆಗೆ ಬಿಟ್ಟಿದ್ದು ಬಿಡಬಹುದು, ಆದರೆ ಮಗು ಕಳೆದುಹೋದಾಗ ಮತ್ತು ಪತ್ತೆಯಾಗದಿದ್ದಾಗ, ಅವರು ತಮ್ಮ ಜೀವನದುದ್ದಕ್ಕೂ ನೋವು ಮತ್ತು ಸಂಕಟವನ್ನು ಅನುಭವಿಸಬೇಕಾಗುತ್ತದೆ. ಅದು ಸಾವಿಗಿಂತ ಕೆಟ್ಟದಾಗಿದೆ. ಆದ್ದರಿಂದ, ಎಲ್ಲರೂ ಬಹಳ ಎಚ್ಚರಿಕೆಯಿಂದ ಮತ್ತು ಜಾಗರೂಕರಾಗಿರಲು ನಾವು ವಿನಮ್ರವಾಗಿ ಒತ್ತಾಯಿಸುತ್ತೇವೆ ಎಂದು ಸುಪ್ರಿಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಮಂಗಳವಾರ ತನ್ನ ಆದೇಶದಲ್ಲಿ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಲು ಕೆಳ ನ್ಯಾಯಾಲಯಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಎಲ್ಲಾ ರಾಜ್ಯ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.
ಯಾವುದೇ ನವಜಾತ ಶಿಶುವನ್ನು ಯಾವುದೇ ಆಸ್ಪತ್ರೆಯಿಂದ ಕಳ್ಳಸಾಗಣೆ ಮಾಡಿದರೆ, ಕಾನೂನಿನ ಪ್ರಕಾರ ಇತರ ಕ್ರಮಗಳ ಜೊತೆಗೆ, ಆಸ್ಪತ್ರೆಯ ವಿರುದ್ಧದ ತಕ್ಷಣದ ಕ್ರಮವೆಂದರೆ ಅದರ ಕಾರ್ಯಾಚರಣೆಯ ಪರವಾನಗಿಯನ್ನು ಅಮಾನತುಗೊಳಿಸಬೇಕು ಎಂದು ನ್ಯಾಯಾಲಯವು ಹೇಳಿದೆ.
ಯಾವುದೇ ಮಹಿಳೆ ಆಸ್ಪತ್ರೆಯಲ್ಲಿ ತನ್ನ ಮಗುವನ್ನು ಹೆರಿಗೆ ಮಾಡಲು ಬಂದಾಗ, ನವಜಾತ ಶಿಶುವನ್ನು ಎಲ್ಲಾ ರೀತಿಯಲ್ಲೂ ರಕ್ಷಿಸುವುದು ಆಸ್ಪತ್ರೆ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಎಂದು ಕೋರ್ಟ್ ಹೇಳಿದೆ.
ಮಂಗಳವಾರ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಈ ಪ್ರಕರಣವನ್ನು ನಿಭಾಯಿಸಿದ ರೀತಿಗೆ ತರಾಟೆಗೆ ತೆಗೆದುಕೊಂಡಿದೆ.
“ಜಾಮೀನು ಅರ್ಜಿಗಳನ್ನು ಹೈಕೋರ್ಟ್ ನಿರ್ದಯವಾಗಿ ನಿರ್ವಹಿಸಿದ್ದು, ಇದರಿಂದಾಗಿ ಅನೇಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಆರೋಪಿಗಳು ಸಮಾಜಕ್ಕೆ ಗಂಭೀರ ಬೆದರಿಕೆ ಒಡ್ಡಿದ್ದಾರೆ” ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಉತ್ತರ ಪ್ರದೇಶದ ಸರ್ಕಾರದ ಗಂಭೀರತೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, “ಈ ಪ್ರಕರಣವನ್ನು ಉತ್ತರ ಪ್ರದೇಶ ರಾಜ್ಯವು ಹೇಗೆ ನಿರ್ವಹಿಸಿದೆ ಮತ್ತು ಏಕೆ ಮೇಲ್ಮನವಿ ಸಲ್ಲಿಸಲಾಗಿಲ್ಲ ಎಂದು ಕೇಳಿದ್ದು, ಸರ್ಕಾರದ ನಡೆಯ ಬಗ್ಗೆ ನಾವು ಸಂಪೂರ್ಣವಾಗಿ ನಿರಾಶೆಗೊಂಡಿದ್ದೇವೆ ಎಂದು ಹೇಳಿದೆ.
ಪ್ರಕರಣದ ಕೆಲವು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದ್ದಕ್ಕಾಗಿ ಅಲಹಾಬಾದ್ ಹೈಕೋರ್ಟ್ ಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಮಕ್ಕಳ ಕಳ್ಳಸಾಗಣೆ ಪ್ರಕರಣ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ‘ಆರ್ಥಿಕವಾಗಿ ಸ್ಥಿರವಾಗಿಲ್ಲದವರನ್ನು ಉನ್ನತೀಕರಿಸುವುದೇ ನಮ್ಮ ಗುರಿ..’; ಮೋದಿ ಟೀಕೆಗೆ ಡಿಕೆಶಿ ತಿರುಗೇಟು
‘ಆರ್ಥಿಕವಾಗಿ ಸ್ಥಿರವಾಗಿಲ್ಲದವರನ್ನು ಉನ್ನತೀಕರಿಸುವುದೇ ನಮ್ಮ ಗುರಿ..’; ಮೋದಿ ಟೀಕೆಗೆ ಡಿಕೆಶಿ ತಿರುಗೇಟು

