- Advertisement -
- Advertisement -
ಚಿತ್ತಾಪುರದಲ್ಲಿ ಆರೆಸ್ಸೆಸ್ ನ ನವೆಂಬರ್ 2 ರಂದು ನಡೆಸಲು ಉದ್ದೇಶಿಸಿದ್ದ ಸಮಾಜದ ಶಾಂತಿ ಕದಡುವ ಪಥಸಂಚಲನವನ್ನು ವಿರೋಧಿಸಿ ದಲಿತ ಸಂಘಟನೆಗಳು ತಮಗೂ ಅಂದೇ, ಅದೇ ಮಾರ್ಗದಲ್ಲಿ ಸಂವಿಧಾನ ಮೆರವಣಿಗೆ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದವು. ಜಿಲ್ಲಾಡಳಿತ ಅನುಮತಿಯನ್ನು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದವು. ನವೆಂಬರ್ 28ರಂದು ಶಾಂತಿ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಆದರೆ ಶಾಂತಿ ಸಭೆಯಲ್ಲಿ ಪ್ರಕರಣ ಇತ್ಯರ್ಥವಾಗದ ಕಾರಣ ಮತ್ತೊಮ್ಮೆ ವಿಚಾರಣೆ ನಡೆಸಿದ ಹೈಕೋರ್ಟ್ ಬೆಂಗಳೂರಿನಲ್ಲಿ ನವೆಂಬರ್ 5ರಂದು ಮತ್ತೊಂದು ಸುತ್ತಿನ ಶಾಂತಿ ಸಭೆಯನ್ನು ಅಡ್ವೋಕೇಟ್ ಜನರಲ್ ರವರ ನೇತೃತ್ವದಲ್ಲಿ ನಡೆಸಲು ಸೂಚಿಸಿದೆ.
ಆರೆಸ್ಸೆಸ್ ಗೆ ಹಿನ್ನಡೆ.
ನವೆಂಬರ್ 2ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸೇ ತೀರುತ್ತೇವೆ ಎಂದು ಹೇಳಿಕೊಂಡಿದ್ದ ಆರೆಸ್ಸೆಸ್ ಮತ್ತದರ ನಾಯಕರಿಗೆ ಈಗ ಹಿನ್ನಡೆಯಾಗಿದೆ. ಶಾಂತಿ ಸಭೆ ಬಳಿಕ ನವೆಂಬರ್ 7ಕ್ಕೆ ಹೈಕೋರ್ಟ್ ವಿಚಾರಣೆ ನಡೆಸಲಿದೆ.


