ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಕುಟುಂಬದೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ತಮಿಳುನಾಡಿನ ಕ್ರಿಶ್ಚಿಯನ್ ಮಿಷನರಿಗಳ ಗುಂಪಿನ ಮೇಲೆ ಹಿಂದೂತ್ವವಾದಿ ಗುಂಪೊಂದು ದಾಳಿ ನಡೆಸಿದೆ. ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಅವರ ಮೇಲೆ ಬಲವಂತದ ಮತಾಂತರದ ಆರೋಪ ಹೊರಿಸಲಾಗಿದೆ.
ಅಕ್ಟೋಬರ್ 23 ರಂದು, ಪ್ರಾರ್ಥನೆಯ ಮಧ್ಯದಲ್ಲಿ ಈ ಘಟನೆ ಸಂಭವಿಸಿದೆ. ಎಂಟು ಜನರ ಗುಂಪು ಪ್ರಾರ್ಥನೆಯನ್ನು ಅಡ್ಡಿಪಡಿಸಿ ಅವರ ಮೇಲೆ ದಾಳಿ ನಡೆಸಿದೆ. ಪೊಲೀಸರು ಅವರನ್ನು ತಕ್ಷಣ ಹೊರಹೋಗುವಂತೆ ಹೇಳಿದ್ದು, ಗ್ರಾಮದಿಂದ ಸುರಕ್ಷಿತವಾಗಿ ಹೊರಬರಲು ರಕ್ಷಣೆ ನೀಡುವಂತೆ ಗುಂಪು ಮನವಿ ಮಾಡಿದೆ.
ಗುಂಪು ಪೊಲೀಸ್ ವಾಹನದ ಹಿಂದೆ 500 ಮೀಟರ್‌ಗಳವರೆಗೆ ಹಿಂಬಾಲಿಸಿತು, ಆಗ ಗುಂಪು ಅವರ ಮೇಲೆ ದಾಳಿ ನಡೆಸಿದೆ. ಕಬ್ಬಿಣದ ರಾಡ್‌ಗಳು ಮತ್ತು ಕೋಲುಗಳೊಂದಿಗೆ ಶಸ್ತ್ರಸಜ್ಜಿತರಾಗಿ ಬಂದ ಗುಂಒಉ ರಸ್ತೆಯನ್ನು ತಡೆದಿದ್ದಾರೆ.
“ನಮ್ಮನ್ನು ಹೊಡೆಯಲು ಮಿನಿಬಸ್ ಬಾಗಿಲುಗಳನ್ನು ಬಲವಂತವಾಗಿ ತೆರೆದರು, ವಿಂಡ್‌ಶೀಲ್ಡ್ ಮತ್ತು ಕಿಟಕಿಗಳನ್ನು ಒಡೆದು ಕೆಟ್ಟದಾಗಿ ನಿಂದಿಸಿದರು. ಗುಂಪು ಸ್ಥಳೀಯ ಹಿಂದೂಗಳನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸುತ್ತಿದೆ ಎಂದು ಗುಂಪು ಆರೋಪಿಸಿತು” ಎಂದು ದಾಳಿಗೊಳಗಾದವರು ಹೇಳಿದ್ದಾರೆ.
ದಾಳಿಕೋರರಿಗಿಂತ ಮೊದಲು ಬಂದ ಎಂಟು ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು ಮಾತ್ರ ಗಲಾಟೆಯಲ್ಲಿ ಮಧ್ಯಪ್ರವೇಶಿಸಿದರು. ಇತರರು ಏನೂ ಮಾಡಲಿಲ್ಲ ಎಂದು ಮಿಷನರಿ ಸದಸ್ಯರು ನೆನಪಿಸಿಕೊಂಡರು. ಪೊಲೀಸರು ಗುಂಪಿನೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
ಓರ್ವ ಮಹಿಳೆ ಸೇರಿದಂತೆ ತಂಡದ ಸುಮಾರು ನಾಲ್ವರು ಸದಸ್ಯರು ಗಾಯಗೊಂಡರು. ದಾಳಿಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸ್ ಇಲಾಖೆಯ ಮುಖ್ಯಸ್ಥೆ ಮೋಹಿತಾ ಶರ್ಮಾ, ಬಲಿಪಶುಗಳು ತಮ್ಮ ವಸತಿ ಸೌಕರ್ಯವನ್ನು ತಲುಪಲು ಸಹಾಯ ಮಾಡಿದರು.
ದಾಳಿಕೋರರ ವಿರುದ್ಧ ಔಪಚಾರಿಕ ದೂರು ದಾಖಲಿಸುವಂತೆ ಅವರು ಸ್ಥಳೀಯ ಆತಿಥೇಯ ಕುಟುಂಬವನ್ನು ಒತ್ತಾಯಿಸಿದರು.
ಮರುದಿನ, ಪೊಲೀಸ್ ಇಲಾಖೆ ಕರ್ತವ್ಯ ಲೋಪಕ್ಕಾಗಿ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಿದರು. ರವೀಂದ್ರ ಸಿಂಗ್ ಥೇಲಾ ಮತ್ತು ರೋಹಿತ್ ಶರ್ಮಾ ಎಂದು ಗುರುತಿಸಲಾದ ಇಬ್ಬರು ಪ್ರಮುಖ ದಾಳಿಕೋರರನ್ನು ಬಂಧಿಸಿದರು. ಇಬ್ಬರನ್ನೂ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಥೇಲಾ ಅವರನ್ನು ಗೋರಕ್ಷಕ ಕೃತ್ಯಗಳನ್ನು ನಿರ್ವಹಿಸುವ ಸ್ಥಳೀಯ ಬಿಜೆಪಿ ನಾಯಕ ಎಂದು ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳನ್ನು ವರದಿ ಮಾಡುವ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ಸೇರಿದಂತೆ ಅವರ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇವೆ.
ಆದರೆ, ಗುಂಪಿನ ಸದಸ್ಯರನ್ನು ಬಿಡುಗಡೆ ಮಾಡಿದ ನಂತರ, ಅವರು ಮಿಷನರಿ ಗುಂಪಿನ ವಿರುದ್ಧ ಆಹಾರ ಮತ್ತು ಹಣದ ಮೂಲಕ ನಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವಂತೆ ಆಮಿಷವೊಡ್ಡಿದ ಆರೋಪದ ಮೇಲೆ ದೂರು ದಾಖಲಿಸಿದರು.
ತಂಡವನ್ನು ಒಂದು ದಿನದ ಕಾಲ ಕಸ್ಟಡಿಯಲ್ಲಿ ಇರಿಸಲಾಯಿತು, ನಂತರ ನ್ಯಾಯಾಧೀಶರು ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಮರುದಿನ ಅವರನ್ನು ಖುಲಾಸೆಗೊಳಿಸಲಾಯಿತು.
ಮಿಷನರಿ ಕಳೆದ ಹತ್ತು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಬರುತ್ತಿದ್ದಾರೆ. ಸ್ಥಳೀಯ ಕುಟುಂಬವೊಂದು ಅವರನ್ನು ಪ್ರಾರ್ಥನೆ ಮತ್ತು ಊಟಕ್ಕೆ ಆಹ್ವಾನಿಸಿದಾಗ ಮಾತ್ರ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಇದಲ್ಲದೆ, ಕಳೆದ ವರ್ಷಗಳಲ್ಲಿ ಅವರು ಹಳ್ಳಿಯ ಎರಡು ಕ್ರಿಶ್ಚಿಯನ್ ಕುಟುಂಬಗಳ ಆಹ್ವಾನದ ಮೇರೆಗೆ ಪ್ರತಿ ತಿಂಗಳು ಈ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಾರೆ.
ಬಿಹಾರ ಚುನಾವಣೆಯಲ್ಲಿ ವಿಶ್ವಬ್ಯಾಂಕ್‌ನ 14,000 ಕೋಟಿ ರೂಪಾಯಿಗಳ ನಿಧಿ ಬಳಕೆ: ಪ್ರಶಾಂತ್ ಕಿಶೋರ್ ಪಕ್ಷದ ಆರೋಪ


