Homeಮುಖಪುಟಕರೆಯದ ಮದುವೆಗೆ ಊಟಕ್ಕೆ ಹೋದ ಬಾಲಕನಿಗೆ ಗುಂಡಿಕ್ಕಿ ಹತ್ಯೆ ; ಸಿಐಎಸ್‌ಎಫ್‌ ಹೆಡ್‌ ಕಾನ್‌ಸ್ಟೆಬಲ್‌ ಅರೆಸ್ಟ್

ಕರೆಯದ ಮದುವೆಗೆ ಊಟಕ್ಕೆ ಹೋದ ಬಾಲಕನಿಗೆ ಗುಂಡಿಕ್ಕಿ ಹತ್ಯೆ ; ಸಿಐಎಸ್‌ಎಫ್‌ ಹೆಡ್‌ ಕಾನ್‌ಸ್ಟೆಬಲ್‌ ಅರೆಸ್ಟ್

- Advertisement -
- Advertisement -

ಕರೆಯದ ಮದುವೆಗೆ ಊಟಕ್ಕೆ ಹೋದ ಕೊಳಗೇರಿಯ ಬಾಲಕನಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಹೆಡ್‌ ಕಾನ್‌ಸ್ಟೆಬಲ್ ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ದೆಹಲಿಯ ಶಾಹದರಾದಲ್ಲಿ ಶನಿವಾರ (ನವೆಂಬರ್ 29) ಸಂಜೆ ನಡೆದಿದೆ.

ಶಾಹದರಾದ ಮಾನಸರೋವರ್ ಪಾರ್ಕ್‌ನ ಡಿಡಿಎ ಮಾರುಕಟ್ಟೆಯಲ್ಲಿರುವ ಸಮುದಾಯ ಕೇಂದ್ರದ ಬಳಿ ಹೆಡ್‌ ಕಾನ್‌ಸ್ಟೆಬಲ್ ಮದನ್ ಗೋಪಾಲ್ ತಿವಾರಿ ಎಂಬಾತ ಬಾಲಕನ ಮೇಲೆ ಗುಂಡು ಹಾರಿಸಿದ್ದಾನೆ. ಈತ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಯೋಜಿತನಾಗಿದ್ದ. ಮದುವೆಗೆ ಆಗಮಿಸಿದ್ದ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಸ್ತುತ ಮದನ್ ತಿವಾರಿಯನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.

ಮದುವೆ ಕಾರ್ಯಕ್ರಮದಲ್ಲಿ ವರನನ್ನು ಕುದುರೆ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಈ ವೇಳೆ ಬಾಲಕರ ಗುಂಪೊಂದು ಊಟ ಮಾಡುವ ಆಸೆಯಿಂದ ಮದುವೆಯತ್ತ ಹೋಗಿದೆ. ಇದನ್ನು ಗಮನಿಸಿದ ಹೆಡ್‌ ಕಾನ್‌ಸ್ಟೆಬಲ್ ಬಾಲಕರನ್ನು ಸ್ಥಳದಿಂದ ಹೋಗುವಂತೆ ಹೇಳಿದ್ದಾನೆ. ಈ ವೇಳೆ ಬಾಲಕರ ಗುಂಪು ಮತ್ತು ಮದನ್ ತಿವಾರಿ ನಡುವೆ ಮಾತಿನ ಚಕಮಕಿ ನಡೆದು, ಮದನ್ ತಿವಾರಿ ಬಾಲಕನಿಗೆ ಗುಂಡಿಕ್ಕಿದ್ದಾನೆ ಎಂದು ವರದಿಗಳು ವಿವರಿಸಿವೆ.

ಸಾವಿಗೀಡಾದ ಬಾಲಕ ನ್ಯೂ ಮಾಡ್ರನ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ಗುಂಡಿನ ದಾಳಿಗೆ ಒಳಗಾದ ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಶಾಹದಾರ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ತಿಳಿಸಿದ್ದಾರೆ.

ಪ್ರಸ್ತುತ ಆರೋಪಿ ಹೆಡ್‌ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ. ಗುಂಡು ಹಾರಿಸಲು ಬಳಸಲಾಗಿದೆ ಎಂದು ಶಂಕಿಸಲಾದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆತ ಗುಂಡು ಹಾರಿಸಲು ಬಳಸಿದ ಪಿಸ್ತೂಲು ವೈಯಕ್ತಿವೇ? ಸೇವಾ ಬಂದೂಕಾ? ಎಂಬ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ಪ್ರತಿಕೃಯಿಸಿರುವ ಮೃತ ಬಾಲಕನ ತಂದೆ, ನನ್ನ ಮಗ ಮದುವೆ ಕಾರ್ಯಕ್ರಮದತ್ತ ಹೋಗಿದ್ದ ಎಂದು ಗೊತ್ತಿರಲಿಲ್ಲ ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

“ನನ್ನ ಮಗ ಮತ್ತು ಇತರ ಮೂವರು ಮದುವೆ ಮೆರವಣಿಗೆ ನಡೆಯುತ್ತಿದ್ದ ಜಾಗಕ್ಕೆ ಹೋಗಿದ್ದರು ಎಂಬುವುದು ನನಗೆ ನಂತರ ತಿಳಿಸಿದರು. ಅವರು ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಹೋಗಿರಲಿಲ್ಲ. ಬಹುಶಃ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಲೋ, ಇಲ್ಲ ಸ್ವಲ್ಪ ಆಹಾರ ಸಿಕ್ಕಿದರೆ ತಿನ್ನಲೋ ಹೋಗಿರಬಹುದು. ಅಷ್ಟಕ್ಕೆ ಕೊಲ್ಲುವ ಅಗತ್ಯ ಏನಿತ್ತು?” ಬಾಲಕನ ತಂದೆ ಪ್ರಶ್ನಿಸಿರುವುದಾಗಿ ವರದಿ ತಿಳಿಸಿದೆ.

“ಇಬ್ಬರು ವ್ಯಕ್ತಿಗಳು ಅವನಿಗೆ (ಮಗನಿಗೆ) ಹೊಡೆಯಲು ಪ್ರಾರಂಭಿಸಿದಾಗ ಮತ್ತು ಕಳ್ಳತನದ ಆರೋಪ ಹೊರಿಸಿದಾಗ ಆತ ಕುದುರೆಯ ಬಳಿ ಇದ್ದ ಎಂದು ಅವನ ಸ್ನೇಹಿತರು ಹೇಳಿದ್ದಾರೆ” ಎಂದು ಬಾಲಕನ ತಂದೆ ವಿವರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಲ್‌ಐಸಿ ಕಚೇರಿ ಬೆಂಕಿ ಪ್ರಕರಣಕ್ಕೆ ತಿರುವು : ಅಕ್ರಮ ಮುಚ್ಚಿ ಹಾಕಲು ಸಹೋದ್ಯೋಗಿಯಿಂದ ವ್ಯವಸ್ಥಾಪಕಿಯ ಕೊಲೆ ಎಂದ ತನಿಖೆ

ಡಿಸೆಂಬರ್‌ನಲ್ಲಿ ಮಧುರೈನ ಜೀವ ವಿಮಾ ನಿಗಮ (ಎಲ್‌ಐಸಿ) ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಆರಂಭದಲ್ಲಿ ನಂಬಿದಂತೆ ಅದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ತಮಿಳುನಾಡು ಪೊಲೀಸರು ತೀರ್ಮಾನಿಸಿದ್ದಾರೆ....

‘ಅಕ್ರಮ ಗಣಿಗಾರಿಕೆ ಸರಿಪಡಿಸಲಾಗದ ಹಾನಿಗೆ ಕಾರಣವಾಗಬಹುದು’: ಅರಾವಳಿ ಸಮಗ್ರ ಪರೀಕ್ಷೆಗೆ ತಜ್ಞರ ಸಮಿತಿ ರಚಿಸಲು ಸುಪ್ರೀಂ ಸೂಚನೆ

ನವದೆಹಲಿ: ಅಕ್ರಮ ಗಣಿಗಾರಿಕೆಯಿಂದ ಸರಿಪಡಿಸಲಾಗದ ಹಾನಿ ಉಂಟಾಗಬಹುದು ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಅರಾವಳಿಯಲ್ಲಿ ಗಣಿಗಾರಿಕೆ ಮತ್ತು ಸಂಬಂಧಿತ ಸಮಸ್ಯೆಗಳ ಸಮಗ್ರ ಪರೀಕ್ಷೆಯನ್ನು ಕೈಗೊಳ್ಳಲು ಡೊಮೇನ್ ತಜ್ಞರನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸುವುದಾಗಿ...

ಮೋದಿ ಕಾರ್ಯಕ್ರಮದಲ್ಲಿ ಸಮೋಸ ವಿತರಣೆಗೆ 2 ಕೋಟಿ ರೂ. ಖರ್ಚು : ಬಿಜೆಪಿ ವಿರುದ್ಧ ಕೇಜ್ರಿವಾಲ್ ಆರೋಪ

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಗುಜರಾತ್‌ನ ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ಕಾರ್ಯಕ್ರಮಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್...

ಸಂಭಾಲ್ ಹಿಂಸಾಚಾರ ಸಂಬಂಧ ಪೊಲೀಸರ ಮೇಲೆ ಎಫ್‌ಐಆರ್‌ಗೆ ಆದೇಶಿಸಿದ್ದ ನ್ಯಾಯಾಧೀಶ ವರ್ಗಾವಣೆ

ಸಂಭಾಲ್ ಹಿಂಸಾಚಾರ ಸಂಬಂಧ ಪೊಲೀಸರ ಮೇಲೆ ಎಫ್‌ಐಆರ್‌ ದಾಖಲಿಸಲು ಆದೇಶಿಸಿದ್ದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ವಿಭಾಂಶು ಸುಧೀರ್ ಸೇರಿದಂತೆ 14 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಅಲಹಾಬಾದ್ ಹೈಕೋರ್ಟ್ ಆಡಳಿತಾತ್ಮಕ ಆದೇಶ ಹೊರಡಿಸಿದೆ....

‘ಅಮೆರಿಕಾ ಅಧ್ಯಕ್ಷನ ಹತ್ಯೆಯ ಸಂಚು ರೂಪಿಸಿದರೆ ಇರಾನ್ ‘ಭೂಮಿಯಿಂದ ನಾಶವಾಗುತ್ತದೆ’: ಡೊನಾಲ್ಡ್ ಟ್ರಂಪ್ 

ವಾಷಿಂಗ್ಟನ್: ಟೆಹ್ರಾನ್ ಅಮೆರಿಕದ ನಾಯಕನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರೆ, ಇರಾನ್ ಅನ್ನು "ಈ ಭೂಮಿಯಿಂದಲೇ ಅಳಿಸಿಹಾಕಲಾಗುವುದು’ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ. ಬೆದರಿಕೆಗಳ ಬಿಸಿ ವಿನಿಮಯದಲ್ಲಿ,...

ಆಲ್ಗಾರಿದಂ ಪಕ್ಷಪಾತ, ಎಐನಲ್ಲೂ ಜಾತಿವಾದ-ತಾರತಮ್ಯ : ಹೊಸ ಚರ್ಚೆ ಹುಟ್ಟು ಹಾಕಿದ ಡಾ. ವಿಜೇಂದರ್ ಹೇಳಿಕೆ

ಆಲ್ಗಾರಿದಂ ಪಕ್ಷಪಾತ (Algorithm bias) ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಚರ್ಚೆ ನಡೆಯುತ್ತಿದೆ. ಪ್ರಮುಖ ಸಾಮಾಜಿಕ ನ್ಯಾಯ ಹೋರಾಟಗಾರ ಮತ್ತು ವಿದ್ವಾಂಸ ಡಾ. ವಿಜೇಂದರ್ ಸಿಂಗ್ ಚೌಹಾಣ್ ಅವರು, ಚಾಟ್‌ಜಿಪಿಟಿ (ChatGPT)ಯಂತಹ ಎಐ...

‘ಸನಾತನ ಧರ್ಮ ವಿವಾದ’: ಉದಯನಿಧಿ ಹೇಳಿಕೆ ‘ದ್ವೇಷ ಭಾಷಣ’ಕ್ಕೆ ಸಮ ಎಂದು ಬಿಜೆಪಿ ನಾಯಕನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಮಧುರೈ: ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ‘ಸನಾತನ ಧರ್ಮ ನಿರ್ಮೂಲನೆ’ ಕುರಿತ ಹೇಳಿಕೆಗಳನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಾಗಿ ಬಿಜೆಪಿ ಐಟಿ ವಿಭಾಗದ ನಾಯಕ ಅಮಿತ್ ಮಾಳವೀಯ ಅವರ ವಿರುದ್ಧ ದಾಖಲಾಗಿದ್ದ...

ಶಿಕ್ಷೆ ಮುಗಿದ 3 ವರ್ಷಗಳ ನಂತರ ಪಾಕಿಸ್ತಾನ ಜೈಲಿನಲ್ಲಿ ಗುಜರಾತ್ ಮೀನುಗಾರ ಸಾವು

2022 ರಲ್ಲಿ ಅಜಾಗರೂಕತೆಯಿಂದ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ ನಂತರ ಪಾಕಿಸ್ತಾನ ಏಜೆನ್ಸಿಗಳಿಂದ ಬಂಧಿಸಲ್ಪಟ್ಟ ಗುಜರಾತ್‌ನ ಮೀನುಗಾರನೊಬ್ಬ ಜನವರಿ 16 ರಂದು ಕರಾಚಿ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮೂರು ವರ್ಷಗಳ ಹಿಂದೆ ಆತನ ಶಿಕ್ಷೆಯನ್ನು...

ಸ್ಥಳದಲ್ಲೇ ದಂಡ ಪಾವತಿಸುವಂತೆ ಸಂಚಾರ ಪೊಲೀಸರು ಒತ್ತಾಯಿಸುವಂತಿಲ್ಲ: ತೆಲಂಗಾಣ ಹೈಕೋರ್ಟ್

ಸಂಚಾರ ನಿಯಮ ಉಲ್ಲಂಘಿಸುವವರ ಬ್ಯಾಂಕ್ ಖಾತೆಗಳಿಂದ ಸ್ವಯಂಚಾಲಿತವಾಗಿ ದಂಡ ಕಡಿತಗೊಳಿಸಬೇಕೆಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೂಚಿಸಿದ ಕೆಲವು ದಿನಗಳ ನಂತರ ಮಹತ್ವದ ತೀರ್ಪು ನೀಡಿರುವ ತೆಲಂಗಾಣ ಹೈಕೋರ್ಟ್, ಪೊಲೀಸರು ನಾಗರಿಕರನ್ನು ರಸ್ತೆಯಲ್ಲಿ ನಿಲ್ಲಿಸಿ...

ಎಸ್‌ಸಿ/ಎಸ್‌ಟಿ ಶಾಲೆಗಳ ನವೀಕರಣಕ್ಕೆ ಹಣ ಮಂಜೂರು ಮಾಡದಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್ 

ಮಧುರೈ: ತಮಿಳುನಾಡಿನ ಸುಮಾರು 170 ಎಸ್‌ಸಿ/ಎಸ್‌ಟಿ ಶಾಲೆ ಮತ್ತು ಹಾಸ್ಟೆಲ್ ಕಟ್ಟಡಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯಗಳಿಗೆ ತಮಿಳುನಾಡು ಆದಿ ದ್ರಾವಿಡರ್ ವಸತಿ ಅಭಿವೃದ್ಧಿ ನಿಗಮ (ಟಿಎಎಚ್‌ಡಿಸಿಒ) 50 ಕೋಟಿ ರೂ.ಗಳನ್ನು ಖರ್ಚು...