ಮತದಾರರ ನೋಂದಣಿಗೆ ಪೌರತ್ವ ದಾಖಲೆ ಕಡ್ಡಾಯಗೊಳಿಸುವುದು ಮತ್ತು ಚುನಾವಣೆಯ ದಿನಾಂತ್ಯದೊಳಗೆ ಎಲ್ಲಾ ಮತಪತ್ರಗಳನ್ನು ಸ್ವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಅಮೆರಿಕದ ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಿರುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಮಾ.25) ಸಹಿ ಹಾಕಿದ್ದಾರೆ. ಹೊಸ ಬದಲಾವಣೆಗಳು ಕಾನೂನು ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ.
ಮೂಲಭೂತ ಮತ್ತು ಅಗತ್ಯ ಚುನಾವಣಾ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ಟ್ರಂಪ್ ಆದೇಶವು ಪ್ರತಿಪಾದಿಸಿದೆ. ಮತದಾರರ ಪಟ್ಟಿಗಳನ್ನು ಹಂಚಿಕೊಳ್ಳಲು ಮತ್ತು ಚುನಾವಣೆಗೆ ಸಂಬಂಧಿಸಿದ ಅಪರಾಧಗಳನ್ನು ವಿಚಾರಣೆಗೆ ಒಳಪಡಿಸಲು ಫೆಡರಲ್ ಏಜೆನ್ಸಿಗಳೊಂದಿಗೆ ಸಹಕರಿಸುವಂತೆ ರಾಜ್ಯಗಳನ್ನು ಒತ್ತಾಯಿಸಿದೆ. ಚುನಾವಣಾ ನಿಯಮಗಳನ್ನು ಪಾಲಿಸಲು ವಿಫಲವಾದ ರಾಜ್ಯಗಳು ಫೆಡರಲ್ ನಿಧಿಯಲ್ಲಿ ಕಡಿತವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಭಾರತದ ಚುನಾವಣಾ ವ್ಯವಸ್ಥೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಟ್ರಂಪ್, “ಆಧುನಿಕ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಬಳಸುವ ಮೂಲಭೂತ ಮತ್ತು ಅಗತ್ಯ ಚುನಾವಣಾ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಅಮೆರಿಕ ವಿಫಲವಾಗಿದೆ. ಉದಾಹರಣೆಗೆ, ಭಾರತ ಮತ್ತು ಬ್ರೆಜಿಲ್ ಮತದಾರರ ಗುರುತನ್ನು ಬಯೋಮೆಟ್ರಿಕ್ ಡೇಟಾಬೇಸ್‌ಗೆ ಜೋಡಿಸುತ್ತಿವೆ. ಆದರೆ, ಅಮೆರಿಕ ಪೌರತ್ವಕ್ಕಾಗಿ ಸ್ವಯಂ-ದೃಢೀಕರಣವನ್ನು ಹೆಚ್ಚಾಗಿ ಅವಲಂಬಿಸಿದೆ” ಎಂದು ಹೇಳಿದ್ದಾರೆ.
ಟ್ರಂಪ್ ಆದೇಶವು, ಫೆಡರಲ್ ಚುನಾವಣೆಗಳಲ್ಲಿ ಮತ ಚಲಾಯಿಸುವ ಅರ್ಹತೆ ಪಡೆಯಲು ಪಾಸ್‌ಪೋರ್ಟ್‌ನಂತಹ ಪೌರತ್ವದ ದಾಖಲೆಯನ್ನು ಕಡ್ಡಾಯಗೊಳಿಸಲು ಫೆಡರಲ್ ಮತದಾರರ ನೋಂದಣಿ ನಮೂನೆಗೆ ತಿದ್ದುಪಡಿ ತರಲಿದೆ.
“ಎಲ್ಲಕ್ಕಿಂತ ಹೆಚ್ಚಾಗಿ, ಚುನಾವಣೆಗಳು ಪ್ರಾಮಾಣಿಕವಾಗಿರಬೇಕು ಮತ್ತು ಸಾರ್ವಜನಿಕರ ನಂಬಿಕೆಗೆ ಅರ್ಹವಾಗಿರಬೇಕು. ಅದಕ್ಕೆ ಮತದಾರರು ತಮ್ಮ ಮತಗಳನ್ನು ವಂಚನೆ ಅಥವಾ ತಪ್ಪಿನಿಂದ ರಕ್ಷಿಸಿಕೊಳ್ಳಲು ಪರಿಣಾಮಕಾರಿಯಾಗಿ ಪರಿಶೀಲಿಸಲು ಅನುವು ಮಾಡಿಕೊಡುವ ಮತದಾರರು ಪರಿಶೀಲಿಸಬಹುದಾದ ಕಾಗದದ ದಾಖಲೆಯನ್ನು ಉತ್ಪಾದಿಸುವ ಮತದಾನ ವಿಧಾನಗಳು ಬೇಕಾಗುತ್ತವೆ. ಚುನಾವಣಾ ಸಮಗ್ರತೆಯ ಮಾನದಂಡಗಳನ್ನು ಅದಕ್ಕೆ ಅನುಗುಣವಾಗಿ ಮಾರ್ಪಡಿಸಬೇಕು. ಫೆಡರಲ್ ಕಾನೂನನ್ನು ಜಾರಿಗೊಳಿಸುವುದು ಮತ್ತು ನಮ್ಮ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಕ್ಷಿಸುವುದು ನನ್ನ ಆಡಳಿತದ ನೀತಿಯಾಗಿದೆ” ಎಂದು ಟ್ರಂಪ್ ಆದೇಶದಲ್ಲಿ ಹೇಳಲಾಗಿದೆ.
‘ನಮ್ಮ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ, ಚೀನಾ ಹಸ್ತಕ್ಷೇಪ ಮಾಡುವ ಸಾಧ್ಯತೆ ಇದೆ’: ಮತ್ತೆ ಆರೋಪಿಸಿದ ಕೆನಡಾ


