Homeಮುಖಪುಟಉಪವಾಸ ನಿರತ ಮುಸ್ಲಿಂ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಹಿಂದೂ ಮಹಿಳೆಗೆ ರಕ್ತದಾನ

ಉಪವಾಸ ನಿರತ ಮುಸ್ಲಿಂ ಎಂಜಿನಿಯರಿಂಗ್ ವಿದ್ಯಾರ್ಥಿಯಿಂದ ಹಿಂದೂ ಮಹಿಳೆಗೆ ರಕ್ತದಾನ

- Advertisement -
- Advertisement -

ಮಾನವೀಯತೆಯ ಅಸಾಧಾರಣ ಕಾರ್ಯವೊಂದರಲ್ಲಿ 27 ವರ್ಷದ ಮುಸ್ಲಿಂ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ತೀವ್ರ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಹಿಂದೂ ಮಹಿಳೆ ಸಂಗೀತಾ ಘೋಷ್‌ಗಾಗಿ ರಂಜಾನ್ ಉಪವಾಸ ಆಚರಿಸುವಾಗ ರಕ್ತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕಲ್ಯಾಣಿ ನಗರದ ಜವಾಹರಲಾಲ್ ನೆಹರು ಆಸ್ಪತ್ರೆಯಲ್ಲಿ ನಡೆದ ಈ ಘಟನೆಯು ಕೋಮು ವಿಭಜನೆಗಳು ಆಳವಾಗುತ್ತಿರುವ ಸಮಯದಲ್ಲಿ ಭರವಸೆಯ ಸಂಕೇತವಾಗಿದೆ.

ನಾಡಿಯಾ ಜಿಲ್ಲೆಯ ಮಜ್ದಿಯಾದ ಸಂಗೀತಾ ಘೋಷ್ 8 ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಾರ್ಚ್ 16ರಂದು ಅವರ ಆರೋಗ್ಯವು ಗಂಭೀರ ತಿರುವು ಪಡೆದುಕೊಂಡಿತು ಮತ್ತು ವೈದ್ಯರು ತುರ್ತಾಗಿ ರಕ್ತದಾನ ಮಾಡುವವರು ಬೇಕೆಂದು ಕೋರಿದರು. ಅವರ ಮಗ ಸಂಜು ಘೋಷ್ ಸಹಾಯಕ್ಕಾಗಿ ಸ್ಥಳೀಯ ಸ್ವಯಂಸೇವಕ ಗುಂಪು ತುರ್ತು ರಕ್ತ ಸೇವೆಯನ್ನು ಶೀಘ್ರವೇ ತಲುಪಿದರು. ನಿಯಮಿತ ದಾನಿ ನಸೀಮ್ ಮಲಿತಾ ಹಿಂಜರಿಕೆಯಿಲ್ಲದೆ ಕರೆಗೆ ಉತ್ತರಿಸಿದರು.

ಅವರ ಸ್ಥಿತಿಯ ಬಗ್ಗೆ ಕೇಳಿದಾಗ ನಾನು ಉಪವಾಸ ಮಾಡುತ್ತಿದ್ದೆ. ಆದರೆ ಒಂದು ಜೀವ ಉಳಿಸುವುದು ನನ್ನ ಮೊದಲ ಆದ್ಯತೆಯಾಗಿತ್ತು. ತಕ್ಷಣವೇ ನಾನು ಆಸ್ಪತ್ರೆಗೆ ಧಾವಿಸಿ ರಕ್ತದಾನ ಮಾಡಿದೆ ಎಂದು ನಸೀಮ್ ಹೇಳುತ್ತಾರೆ.

ನಸೀಮ್‌ಗೆ ಇದು ಒಂದು ದೊಡ್ಡ ಕಾರ್ಯವಾಗಿರಲಿಲ್ಲ. ವರ್ಷಗಳಲ್ಲಿ ಹಲವು ಭಾರೀ ಇತರರಿಗೆ ಸಹಾಯ ಮಾಡುವ ಅವರ ಕಾರ್ಯಗಳಲ್ಲಿ ಇದು ಒಂದು. “ನಾನು ಹಲವು ಬಾರಿ ರಕ್ತದಾನ ಮಾಡಿದ್ದೇನೆ. ಇದು ದೊಡ್ಡ ವಿಷಯವಲ್ಲ; ಇದು ನನ್ನ ಬಯಕೆ” ಎಂದು ನಸೀಮ್ ಹೇಳಿದ್ದಾರೆ.

ಘೋಷ್ ಕುಟುಂಬವು ನಸೀಮ್ ಅವರ ನಿಸ್ವಾರ್ಥತೆಯಿಂದ ಭಾವುಕವಾಯಿತು. “ನಾವು ಹತಾಶರಾಗಿದ್ದೆವು. ರಕ್ತ ಬ್ಯಾಂಕಿನಲ್ಲಿ ಯಾವುದೇ ದಾಸ್ತಾನು ಇರಲಿಲ್ಲ” ಎಂದು ಸಂಜು ಹೇಳಿದರು. “ನಸೀಮ್ ಹಿಂಜರಿಯಲಿಲ್ಲ. ಅವರು ತಕ್ಷಣ ತಮ್ಮ ಸ್ನೇಹಿತರೊಂದಿಗೆ ಬಂದರು. ನನಗೆ ಯಾವುದೇ ಜೀವಗಳನ್ನು ಉಳಿಸುವುದೇ ಒಬ್ಬ ವ್ಯಕ್ತಿಗೆ ಶ್ರೇಷ್ಠ ಧರ್ಮ” ಎಂದು ಸಂಜು ಅಭಿಪ್ರಾಯಿಸಿದ್ದಾರೆ.

ಈ ಕಥೆ ತ್ವರಿತವಾಗಿ ಆನ್‌ಲೈನ್‌ನಲ್ಲಿ ಹರಡಿತು. ರಾಜಕಾರಣಿಗಳು ಮತ್ತು ನಾಗರಿಕರಿಂದ ಪ್ರಶಂಸೆ ಗಳಿಸಿತು. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಸರ್ನಾಟೆ ಟ್ವೀಟ್ ಮಾಡಿದ್ದಾರೆ, “ಈ ಧಾರ್ಮಿಕ ದ್ವೇಷದ ವಾತಾವರಣದಲ್ಲಿ ನಸೀಮ್ ಪ್ರೀತಿಯ ಶಕ್ತಿಯನ್ನು ತೋರಿಸಿದ್ದಾರೆ. ಇದು ನಾನು ನಂಬುವ ಭಾರತ.” ಎಂಬ ಸುಪ್ರಿಯಾ ಅವರ ಪ್ರತಿಕ್ರಿಯೆಯಿಂದ ವಿನಮ್ರರಾದ ನಸೀಮ್ ಫೇಸ್‌ಬುಕ್‌ನಲ್ಲಿ ಬೆಂಬಲದ ಸಂದೇಶಗಳನ್ನು ಹಂಚಿಕೊಂಡರು, “ಇತರರಿಗೆ ಸಹಾಯ ಮಾಡುವುದು ದೇವರಿಗೆ ಮಾಡುವ ಶ್ರೇಷ್ಠ ಸೇವೆ” ಎಂದು ಬರೆದುಕೊಂಡರು.

ಕಲ್ಯಾಣಿಯಲ್ಲಿ ಈಗ ಕಲಿಯುತ್ತಿರುವ ಮುರ್ಷಿದಾಬಾದ್ ನಿವಾಸಿ ನಸೀಮ್, ತಮ್ಮ ಇಂತಹ ಕೆಲಸವು ಇತರರಿಗೆ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತಿದ್ದಾರೆ. “ಜೀವಗಳು ಅಪಾಯದಲ್ಲಿರುವಾಗ ನಾವು ಅಡೆತಡೆಗಳನ್ನು ಮುರಿಯಬೇಕು” ಎಂದು ಅವರು ಹೇಳಿದ್ದಾರೆ.

ಬಾವಿ ಮೇಲೆ ಸಂಭಾಲ್ ಮಸೀದಿ ಸಮಿತಿಯ ಹಕ್ಕನ್ನು ತಿರಸ್ಕರಿಸಿದ ಸರಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...

‘ಎಸ್‌ಐಆರ್ ಪ್ರಜಾಪ್ರಭುತ್ವಕ್ಕೆ ವಂಚನೆ’: 2025ಕ್ಕೆ ಹೋಲಿಸಿದರೆ ದೆಹಲಿಯ 58.60 ಲಕ್ಷ ಮತದಾರರ ಹೆಸರುಗಳು ಮಾಯ: ನಾಗರೀಕ ಸಂಘಟನೆಗಳ ಆಕ್ರೋಶ

ನವದೆಹಲಿ: ದೆಹಲಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತದಾರರ ಪಟ್ಟಿಯ ಶುದ್ಧೀಕರಣದ ಸಾಮಾನ್ಯ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ನಾಗರಿಕರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ...