ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಪಿತೂರಿ ನಡೆದಿದ್ದ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಇಂದು ಹೇಳಿದ್ದು, ಲೈಂಗಿಕ ಕಿರುಕುಳದ ಆರೋಪದ ನಂತರ ಆರಂಭಿಸಲಾಗಿದ್ದ ತನಿಖೆಯನ್ನು ಮುಕ್ತಾಯಗೊಳಿಸಿದೆ.
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತ ಅವರ ಅಭಿಪ್ರಾಯಗಳು ಮತ್ತು ಸುಪ್ರೀಂ ಕೋರ್ಟ್ ನೋಂದಾವಣೆಯನ್ನು ಸುವ್ಯವಸ್ಥಿತಗೊಳಿಸುವ ಅವರ ಪ್ರಯತ್ನಗಳು ಸೇರಿದಂತೆ ನ್ಯಾಯಮೂರ್ತಿ ಗೊಗೊಯ್ ಅವರ ಕಠಿಣ ನಿರ್ಧಾರಗಳ ಕಾರಣದಿಂದ ಇಂತಹ ಪಿತೂರಿ ಸಂಭವಿಸಿರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮಾಜಿ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಅವರ ವರದಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ವಕೀಲ ಉತ್ಸವ್ ಬೈನ್ಸ್ ಅವರು 2019 ರಲ್ಲಿ ಹೊರಬಂದ ಲೈಂಗಿಕ ಕಿರುಕುಳ ಆರೋಪದ ಹಿಂದೆ ಪಿತೂರಿಯ ಸಾಧ್ಯತೆಯನ್ನು ಎತ್ತಿದ ನಂತರ ಮಾಜಿ ನ್ಯಾಯಮೂರ್ತಿ ಪಟ್ನಾಯಕ್ ಅವರಿಗೆ ಈ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಿತ್ತು.
“ಅಸಮಾಧಾನಗೊಂಡ ನ್ಯಾಯಾಲಯದ ಅಧಿಕಾರಿಗಳೊಂದಿಗೆ ಕೆಲಸ ಮಾಡುವ ಮಧ್ಯವರ್ತಿಗಳು ಮತ್ತು ಫಿಕ್ಸರ್‌ಗಳು ಗೊಗೊಯ್ ವಿರುದ್ಧ ಪಿತೂರಿ ಮಾಡಿದ್ದರೆ’ ಎಂಬುದರ ಕುರಿತು ಪಟ್ನಾಯಕ್ ತನಿಖೆ ಮಾಡಿ ಸಲ್ಲಿಸಿದ ವರದಿಯ ಆಧಾರದಲ್ಲಿ ಸುಪ್ರೀಂಕೋರ್ಟ್ ಇಂದಿನ ತೀರ್ಪು ನೀಡಿದೆ.
“ನ್ಯಾಯಮೂರ್ತಿ ಪಟ್ನಾಯಕ್ ವರದಿಯು ಮಾಜಿ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಪಿತೂರಿ ಅಸ್ತಿತ್ವದಲ್ಲಿತ್ತು ಎಂದು ಒಪ್ಪಿಕೊಂಡಿದೆ ಮತ್ತು ಅದನ್ನು ತಳ್ಳಿಹಾಕಲಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಈ ಸಮಿತಿಯು ಎಲೆಕ್ಟ್ರಾನಿಕ್ ದಾಖಲೆಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಕೋರ್ಟ್ ಹೇಳಿದೆ.
“ನೋಂದಾವಣೆ (ರಿಜಿಸ್ಟ್ರಿ)ಯಲ್ಲಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಕೆಲವು ಕಠಿಣ ಆಡಳಿತಾತ್ಮಕ ನಿರ್ಧಾರಗಳನ್ನು ಗೊಗೊಯ್ ತೆಗೆದುಕೊಂಡಿದ್ದರು’ ಎಂದು ಸುಪ್ರೀಂ ಹೇಳಿದೆ.
ಎನ್‌ಆರ್‌ಸಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಮೂರ್ತಿ ಗೊಗೊಯ್ ಗಂಭೀರ ದೃಷ್ಟಿಕೋನವನ್ನು ತೆಗೆದುಕೊಂಡಿದ್ದಾರೆ ಮತ್ತು “ಕೆಲವರು ಈ ನಿರ್ಧಾರದಿಂದ ಅಸಮಾಧಾನ ಹೊಂದಿದ್ದಾರೆಂದು ನಂಬಲು ಬಲವಾದ ಕಾರಣಗಳಿವೆ” ಎಂದು ಗುಪ್ತಚರ ಬ್ಯೂರೋ ನಿರ್ದೇಶಕರು ವರದಿಯಲ್ಲಿ ಹೇಳಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವನ್ನು ಮುಕ್ತಾಯಗೊಳಿಸಿದ ನ್ಯಾಯಾಲಯವು ಹೀಗೆ ಹೇಳಿದೆ: “ಇದರಿಂದ ಯಾವುದೇ ನಿಜವಾದ ಉದ್ದೇಶವನ್ನು ಪೂರೈಸಲಾಗುವುದಿಲ್ಲ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ. ವಾದಗಳನ್ನು ಇಲ್ಲಿಗೆ ನಿಲ್ಲಿಸಲಾಗಿದೆ ಮತ್ತು ಸು-ಮೊಟೊ ಅನ್ನು ವಿಲೇವಾರಿ ಮಾಡಲಾಗಿದೆ. ವರದಿಯನ್ನು ಮೊಹರು ಮಾಡಿ ಕವರ್‌ನಲ್ಲಿ ಇಡಲಾಗಿದೆ.”
ಮುಖ್ಯ ನ್ಯಾಯಾಧೀಶರ ವಿರುದ್ಧದ ಆರೋಪಗಳನ್ನು ವಿಚಾರಿಸಲು ಸಮಿತಿಯನ್ನು ರಚಿಸಲಾಗಿರಲಿಲ್ಲ. ಆದರೆ ನ್ಯಾಯಾಧೀಶರನ್ನು ಸಿಕ್ಕಿಸುವ ದೊಡ್ಡ ಪಿತೂರಿಯ ಬಗ್ಗೆ ಮಾತ್ರ ತನಿಖೆ ನಡೆಸಲು ಸೂಚಿಸಲಾಗಿತ್ತು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ದಾಖಲೆಗಳಿಗೆ ಸೀಮಿತ ಲಭ್ಯತೆ ಮತ್ತು ಸಾಕ್ಷ್ಯಗಳು ಮತ್ತು ವಸ್ತುಗಳ ಆಧಾರದ ಮೇಲೆ, ಆರೋಪಗಳಿಗೆ ದೃಢೀಕರಣ ಕಂಡುಹಿಡಿಯಲು ಸಹ ಸಾಧ್ಯವಾಗಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ಆದಾಗ್ಯೂ, ಸುಪ್ರೀಂ ಕೋರ್ಟಿನ 2019 ರ ಆದೇಶವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಂಗದ ಕುರಿತ ಮುಖ್ಯ ನ್ಯಾಯಾಧೀಶರ ತೀರ್ಪುಗಳು ಅವರ ವಿರುದ್ಧದ ಪಿತೂರಿಯನ್ನು ನಿಜವಾಗಿಯೂ ಪ್ರಚೋದಿಸಿದೆಯೇ ಎಂದು ನಿರೂಪಿಸಲು ಸಾಧ್ಯವಾಗಿಲ್ಲ ಎಂದು ವರದಿ ಹೇಳುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ
ಏಪ್ರಿಲ್ 19, 2019 ರಂದು ಕಿರಿಯ ನ್ಯಾಯಾಲಯದ ಮಾಜಿ ಅಧಿಕಾರಿಣಿಯೊಬ್ಬರು ಭಾರತದ (ಅಂದಿನ) ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಅವರು ತಮ್ಮ ಅಪಾದನೆಗಳನ್ನು ದೃಢಿಕರಿಸುವ ದಾಖಲೆಗಳನ್ನು ಸಲ್ಲಿಸಿ, ಏ. 22 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ; ಟೀಕೆಗೆ ಭಯಪಡಬಾರದು, ಇದು ಪಾಕಿಸ್ತಾನ, ಭಾರತವಲ್ಲ!: ಪಾಕ್ ನ್ಯಾಯಾಧೀಶನ ಹೇಳಿಕೆ


