ಗೋರಖಪುರ: 11 ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಾಯಿಯನ್ನು ಹತ್ಯೆ ಮಾಡಿ, ಶವದೊಂದಿಗೆ ಆರು ದಿನಗಳ ಕಾಲ ಇದ್ದ ಘಟನೆ ಉತ್ತರ ಪ್ರದೇಶದ ಗೋರಖಪುರದಲ್ಲಿ ನಡೆದಿದೆ.
ಇದಕ್ಕೂ ಮುನ್ನ ತನ್ನ ತಾಯಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತನ್ನ ತಂದೆ ಮತ್ತು ಪೊಲೀಸರನ್ನು ದಾರಿ ತಪ್ಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ತಾಯಿ ಆರತಿ ವರ್ಮಾ ಶಾಲೆಗೆ ಹೋಗಲು ಮಗನನ್ನು ಎಬ್ಬಿಸಿದಾಗ, ಅವನು ಕೋಪಗೊಂಡು ಅವಳನ್ನು ತಳ್ಳಿದನು ಮತ್ತು ಇದರಿಂದಾಗಿ ಆರತಿ ಅವರಿಗೆ ಗಂಭೀರ ಗಾಯಗಳಾಗಿದ್ದವು. ಇಷ್ಟಾಗಿಯೂ ಮಗ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ; ಬದಲಿಗೆ, ಆತನು ಶಾಲೆಗೆ ತೆರಳಿದನು. ಬಳಿಕ ಅತಿಯಾದ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕ ಶಾಲೆಯಿಂದ ಹಿಂದಿರುಗಿದಾಗ, ತನ್ನ ತಾಯಿಯ ಮೃತದೇಹವನ್ನು ಕಂಡು ಬೇಸರಗೊಂಡನು ಮತ್ತು ಆರು ದಿನಗಳ ಕಾಲ ಅದರ ಪಕ್ಕದಲ್ಲಿ ಮಲಗಿದ್ದನು. ಚೆನ್ನೈನ ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ಸಹಾಯಕ ವಿಜ್ಞಾನಿಯಾಗಿರುವ ಆತನ ತಂದೆ ರಾಮ್ ಮಿಲನ್ ಅವರು ಆರು ದಿನಗಳಿಂದ ಪತ್ನಿಯನ್ನು ಸಂಪರ್ಕಿಸಲು ಸಾಧ್ಯವಾಗದೆ ಮನೆಗೆ ಮರಳಿದ ನಂತರ ಸಾವು ಬೆಳಕಿಗೆ ಬಂದಿದೆ. ಬಾಗಿಲು ತೆರೆದು ಹೋದಾಗ ಒಳಗಿನಿಂದ ದುರ್ವಾಸನೆ ಬರುತ್ತಿತ್ತು. ಅಲ್ಲಿ ಅವರ ಹೆಂಡತಿಯ ಮೃತದೇಹ ನೆಲದ ಮೇಲೆ ಬಿದ್ದಿರುವುದನ್ನು ಕಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ಮಗ ತನ್ನ ತಂದೆ ಮತ್ತು ಪೊಲೀಸರನ್ನು ದಾರಿ ತಪ್ಪಿಸಿ, ಅವಳು ತಾನೇ ಬಿದ್ದು ಸತ್ತಿದ್ದಾಳೆ ಎಂದು ಹೇಳಿಕೊಂಡಿದ್ದನು. ಆದಾಗ್ಯೂ, ಶವಪರೀಕ್ಷೆಯ ನಂತರ ಪೊಲೀಸರು ಬಾಲಕನನ್ನು ಮರು ವಿಚಾರಣೆಗೆ ಒಳಪಡಿಸಿದರು ಮತ್ತು ಅವನು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಎಳೆದೊಯ್ಯಲಾಗಿದೆ ಎಂಬುದಕ್ಕೆ ಪುರಾವೆಗಳು ಪೊಲೀಸರಿಗೆ ದೊರೆತಿದ್ದು, ಯಾವುದೇ ಹೊರಗಿನವರು ಮನೆಗೆ ಪ್ರವೇಶಿಸಿಲ್ಲ ಎಂದು ಸಿಸಿಟಿವಿ ದೃಶ್ಯಾವಳಿಗಳು ಖಚಿತಪಡಿಸಿವೆ. ಹದಿಹರೆಯದ ವಿದ್ಯಾರ್ಥಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ….ದೆಹಲಿ | ಮಹಿಳೆಯರಿಗೆ ಮಾಸಿಕ ₹1000 ನೀಡುವ ಯೋಜನೆಗೆ ಕೇಜ್ರಿವಾಲ್ ಚಾಲನೆ


