Homeಮುಖಪುಟಕ್ಲಬ್‌ಹೌಸ್‌ ಸರ್ವರ್‌ ಡೌನ್‌: ಮಾತಿನ ಮಂಟಪ ಪ್ರಿಯರಿಗೆ ಚಡಪಡಿಕೆ

ಕ್ಲಬ್‌ಹೌಸ್‌ ಸರ್ವರ್‌ ಡೌನ್‌: ಮಾತಿನ ಮಂಟಪ ಪ್ರಿಯರಿಗೆ ಚಡಪಡಿಕೆ

- Advertisement -
- Advertisement -

‘ಮಾತಿನ ಮಂಟಪ’ ಎಂದೇ ಖ್ಯಾತವಾಗಿರುವ ‘ಕ್ಲಬ್‌ ಹೌಸ್‌’ ಸರ್ವರ್‌ ಡೌನ್ ಆಗಿದ್ದು, ಅನೇಕ ಬಳಕೆದಾರರು ವರದಿ ಮಾಡಿದ್ದಾರೆ. ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಜರ್ಮನಿ, ಇಂಡಿಯಾ, ಈಜಿಪ್ಟ್‌, ಅಮೆರಿಕದ ಹಲವು ನಗರಗಳಲ್ಲಿ ಸರ್ವರ್‌‌ ಡೌನ್‌ ಆಗಿದ್ದು, ಮಾತಿನ ಮಂಟಪದಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದವರಿಗೆ ಚಡಪಡಿಕೆ ಆರಂಭವಾಗಿದೆ.

ಈ ಕುರಿತು ‘ಕ್ಲಬ್‌ ಹೌಸ್‌’ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಸರ್ವರ್‌ ಡೌನ್‌ ಆಗಿರುವ ಕುರಿತು ಟ್ವೀಟ್ ಮಾಡಲಾಗಿದೆ. ‘ಸಮಸ್ಯೆಯನ್ನು ಬಗೆಹರಿಸಲಾಗುವುದು’ ಕ್ಲಬ್‌ಹೌಸ್‌ ಸಂಸ್ಥೆ ಹೇಳಿದೆ.

ಅಮೆಜಾನ್‌, ಟ್ವಿಟ್ಟರ್‌, ಫೇಸ್‌ಬುಕ್‌ ಮೊದಲಾದ ಟೆಕ್‌ ಸಂಸ್ಥೆಗಳನ್ನು ಕ್ಲಬ್‌ಹೌಸ್‌ ನಿದ್ದೆಗೆಡಿಸಿತ್ತು. ಮಾತಿನ ಮಾದರಿಯ ಅಪ್ಲಿಕೇಷನ್‌ಗಳು ಅಭಿವೃದ್ಧಿಪಡಿಸಲು ಇತರ ಸಂಸ್ಥೆಗಳು ಹೆಜ್ಜೆ ಇರಿಸಿದ್ದವು ಎನ್ನಲಾಗಿದೆ.

ಇತ್ತೀಚೆಗೆ ಫೇಸ್‌ಬುಕ್‌ ಸಂಸ್ಥೆಯ ಫೇಸ್‌ಬುಕ್‌, ಮೆಸೇಂಜರ್‌‌, ಇನ್‌ಸ್ಟಾಗ್ರಾಮ್‌ ಅಪ್ಲಿಕೇಷನ್‌ಗಳು ಸರ್ವರ್‌ ಡೌನ್‌ ಆಗಿ, ಬಳಕೆದಾರರು ಚಡಪಡಿಸಿದ್ದರು. ಸುಮಾರು ಆರು ಗಂಟೆಗಳ ಬಳಿಕ ಈ ಅಪ್ಲಿಕೇಷನ್‌ಗಳು ಮರಳಿ ಸೇವೆ ಆರಂಭಿಸಿದ್ದವು. ಈಗ ಕ್ಲಬ್‌ಹೌಸ್‌ ಡೌನ್‌ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಂಡ ಕ್ಲಬ್‌ಹೌಸ್‌, ಮಾತುಗಾರರಿಗೆ ಹೊಸ ಅನುಭವವನ್ನು ನೀಡಿದೆ. ಅಷ್ಟೇ ಪ್ರಮಾಣದಲ್ಲಿ ಕೇಳುಗ ವರ್ಗವನ್ನು ಸೃಷ್ಟಿ ಮಾಡಿದೆ. ನಿತ್ಯವು ಒಂದಲ್ಲ ಒಂದು ಕಾರ್ಯಕ್ರಮವನ್ನು ನಡೆಸುತ್ತಾ ಸಕ್ರಿಯವಾಗಿರುವ ಗ್ರೂಪ್‌ಗಳಿವೆ. ರಾಜಕಾರಣಿಗಳು ನೇರವಾಗಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಲೂ ಕ್ಲಬ್‌ಹೌಸ್‌ ವೇದಿಕೆಯಾಗಿ ಗಮನ ಸೆಳೆದಿದೆ. ಕ್ಲಬ್‌ಹೌಸ್‌ ಒಂದು ರೀತಿ ಅಡಿಕ್ಷನ್‌ ಎಂದವರೂ ಇದ್ದಾರೆ.

ಇದನ್ನೂ ಓದಿರಿ: ಕ್ಲಬ್‌ಹೌಸ್‌ನಲ್ಲಿ ಕುವೆಂಪು ಮತ್ತು ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಅವಹೇಳನ

ಏನಿದು ಕ್ಲಬ್‌ಹೌಸ್?

ಇದೊಂದು ಆಡಿಯೋ ಆಧರಿತ ಸೋಷಿಯಲ್ ಮೀಡಿಯಾ ಆಪ್. ಇಲ್ಲಿ ವಿಡಿಯೋಗಳಿಲ್ಲ. ಸಾಲು ಸಾಲು ಬರಹಗಳಿಲ್ಲ. ಇಲ್ಲಿರುವುದು ಬರೀ ಮಾತು. ಇದೊಂದು ರೀತಿಯ ಪಾಡ್‌ಕಾಸ್ಟ್‌ನ ಲೈವ್ ಆವೃತ್ತಿ ಎನ್ನಬಹುದು. ಸಮಾನ ಆಸಕ್ತಿಯ ವಿಷಯಗಳ ಬಗ್ಗೆ ಒಂದೆಡೆ ಸೇರಿ ಹೇಗೆ ಹರಟೆ ಹೊಡೆಯುತ್ತೇವೊ, ಅದೇ ಅನೌಪಚಾರಿಕತೆಯೊಂದಿಗೆ ಹರಟೆ ಹೊಡೆಯುವುದಕ್ಕೆ ಕ್ಲಬ್‌ಹೌಸ್ ವೇದಿಕೆ ಕಲ್ಪಿಸಿದೆ. ಹೀಗಾಗಿ ಕೋಟ್ಯಂತರ ಜನರನ್ನು ಆಕರ್ಷಿಸಿದೆ.

ಭಾರತೀಯ ಹಿನ್ನೆಲೆಯ ಅಮೆರಿಕನ್ ರೋಹನ್ ಸೇತ್ ಮತ್ತು ಪಾಲ್ ಡೇವಿಸನ್ ಅಭಿವೃದ್ಧಿಪಡಿಸಿದ ಕ್ಲಬ್‌ಹೌಸ್ ಕೋವಿಡ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿಢೀರನೆ ಪ್ರಚಾರ ಪಡೆದುಕೊಂಡು ವಿಶ್ವದಾದ್ಯಂತ 1 ಕೋಟಿ ಬಳಕೆದಾರರನ್ನು ಗಳಿಸಿಕೊಂಡಿತ್ತು.

ಬಳಕೆದಾರರು ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡು ಆಸಕ್ತಿಯ ವಿಷಯ ಕುರಿತು ಚರ್ಚಿಸಬಹುದು, ಸಂವಾದ ನಡೆಸಬಹುದು. ಅನಿರ್ಬಂಧಿತವಾದ ಖಾಸಗಿ ಹರಟೆಗೂ ಅವಕಾಶವಿದೆ. ಮುಕ್ತವಾಗಿ ಆಸಕ್ತರೆಲ್ಲರನ್ನೂ ಒಳಗೊಳ್ಳುವುದಕ್ಕೂ ಅವಕಾಶವನ್ನು ಕ್ಲಬ್‌ಹೌಸ್ ನೀಡಿದೆ.

ಜನಪ್ರಿಯವಾಗಿದ್ದೇಕೆ?

ಸೋಷಿಯಲ್ ಮೀಡಿಯಾ ಅಂದರೆ ಅಲ್ಲಿ ಸೆಲ್ಫಿಗಳು, ಫೋಟೊಗಳು, ವಿಡಿಯೋಗಳು, ಉದ್ದುದ್ದ ಬರಹಗಳು.. ಅವುಗಳಿಗೆ ಬರುವ ಲೈಕ್, ಕಮೆಂಟ್‌ಗಳು, ಶೇರ್‌ಗಳು…

ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಈ ಹಲವು ಸೋಷಿಯಲ್ ಮೀಡಿಯಾ ಚಟುವಟಿಕೆಗಳಿಂದ ರೋಸಿದ ಕಾರಣಕ್ಕೊ ಏನೋ, ಕೇವಲ ಧ್ವನಿಯನ್ನಷ್ಟೇ ಆಧರಿಸಿದ ಕ್ಲಬ್‌ಹೌಸ್ ಜನಪ್ರಿಯವಾಗುತ್ತಿದೆ.

ಎಷ್ಟರಮಟ್ಟಿಗೆ ಎಂದರೆ ಇಲ್ಲಿ ತರುಣ-ತರುಣಿಯರಿದ್ದಾರೆ, ಮಹಿಳೆಯರಿದ್ದಾರೆ, ಉದ್ಯಮಿಗಳು, ಪತ್ರಕರ್ತರು, ಹೊಸ ಹಾಗೂ ಹಳೆಯ ತಲೆಮಾರಿನ ರಾಜಕಾರಣಿಗಳೂ ತೊಡಗಿಸಿಕೊಂಡಿದ್ದಾರೆ. ತರಹೇವಾರಿ ವಿಷಯಗಳ ಕುರಿತು ಸೀಮಿತ ಅವಧಿಯ ಚರ್ಚೆಗಳು ನಡೆಯುತ್ತವೆ. ಅಲ್ಲಿಗೆ ಒಂದು ಸಭೆ ಮುಗಿದುಹೋಗುತ್ತದೆ.

ಯಾರು ಬೇಕಾದರೂ ಇಂತಹ ಚರ್ಚೆಗಳನ್ನು ನಡೆಸಬಹುದು, ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ವಿವಿಧ ಹಿನ್ನೆಲೆಯ ಅನುಭವವುಳ್ಳವರೊಂದಿಗೆ ನೇರ ಸಂವಾದ ಚರ್ಚೆಗಳು ಸಾಧ್ಯವಾಗುವುದರಿಂದ
ವಸ್ತು-ವಿಷಯಗಳ ವಿವಿಧ ಆಯಾಮಗಳ ದೃಷ್ಟಿಕೋನವನ್ನು ಪಡೆಯುವುದಕ್ಕೂ ಕ್ಲಬ್‌ಹೌಸ್ ಅವಕಾಶ ಕೊಡುತ್ತದೆ ಎಂಬುದು ಬಳಕೆದಾರರ ಅಭಿಪ್ರಾಯ.

ಕೆಲವೇ ತಿಂಗಳ ಹಿಂದೆ ಭಾರತದಲ್ಲಿ ಚಾಲ್ತಿಗೆ ಬಂದ ಕ್ಲಬ್‌ಹೌಸ್‌ ಸ್ಮಾರ್ಟ್‌‌ಫೋನ್‌ ಬಳಕೆಗೂ ಲಭ್ಯವಾಗಿ ಅಪಾರ ಜನಮೆಚ್ಚುಗೆ ಗಳಿಸಿದೆ. ತಾಂತ್ರಿಕ ದೋಷದಿಂದಾಗಿ ಅಡಚಣೆಯಾಗಿರುವುದು ಕ್ಲಬ್‌ಹೌಸ್‌ ಪ್ರಿಯರಿಗೆ ಬೇಸರ ತಂದಿದೆ.


ಇದನ್ನೂ ಓದಿರಿ: 2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹೆಚ್ಚಾಗಿದ್ದವು: ಫೇಸ್‌ಬುಕ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...