ತಮಿಳುನಾಡಿನ ಸ್ವಾಯತ್ತತೆಗಾಗಿ ಸಮಿತಿ ರಚಿಸಿದ ಸಿಎಂ ಸ್ಟಾಲಿನ್

ರಾಜ್ಯಪಾಲರೊಂದಿಗಿನ ಸಂಘರ್ಷದ ನಡುವೆ ರಾಜ್ಯದ ಸ್ವಾಯತ್ತತೆ ಕಾಪಾಡಲು ಕ್ರಮ ಕೈಗೊಳ್ಳುವ ಸಲುವಾಗಿ ಶಿಫಾರಸ್ಸುಗಳನ್ನು ಮಾಡಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ ಎಂದು ವರದಿಯಾಗಿದೆ. ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ರಾಜ್ಯ ಸರ್ಕಾರಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಕೇಂದ್ರ ಸರ್ಕಾರದೊಂದಿಗಿನ ಸಂಬಂಧಗಳನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡಲಿದೆ. ರಾಜ್ಯ ಸರ್ಕಾರಗಳಿಗೆ ಬಿಡಲಾಗಿದ್ದ, ಈಗ ರಾಜ್ಯ ಮತ್ತು ಕೇಂದ್ರವು … Continue reading ತಮಿಳುನಾಡಿನ ಸ್ವಾಯತ್ತತೆಗಾಗಿ ಸಮಿತಿ ರಚಿಸಿದ ಸಿಎಂ ಸ್ಟಾಲಿನ್