ರಾಜ್ಯದ 24 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಹಲವು ದಿನಗಳಿಂದ ಮುಂದೂಡಲ್ಪಟ್ಟಿದ್ದ ನಿಗಮ ಮಂಡಳಿಗಳ ಹಂಚಿಕೆ ಇಂದು ನೆರವೇರಿದೆ. ಯಡಿಯೂರಪ್ಪ ನೇತೃತ್ದವ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿಯೇ ಈ ಕುರಿತು ಅಧಿಕೃತವಾಗಿ ಯಡಿಯೂರಪ್ಪನವರು ಆದೇಶಿಸಿದ್ದಾರೆ.
ಸಚಿವ ಸ್ಥಾನ ಸಿಗದೇ ನಿಗಮ ಮಂಡಳಿಗಳ ಸ್ಥಾನಕ್ಕಾಗಿ ಕಾಯುತ್ತಿದ್ದ ಬಹುತೇಕ ಶಾಸಕರು ನಿಗಮ ಮಂಡಳಿಗಳ ಸ್ಥಾನ ಪಡೆದು ತೃಪ್ತಿ ಪಟ್ಟಿದ್ದಾರೆ. ಅವರ ಪಟ್ಟಿ ಈ ಕೆಳಗಿನಂತಿದೆ.


ಕಾಂಗ್ರೆಸ್ ಜೆಡಿಎಸ್‌ನಿಂದ ಹಲವು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ ನಂತರ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಭಾರೀ ದೊಡ್ಡದಿತ್ತು. ಪಕ್ಷಾಂತರಿಗಳಿಗೆ ಆಯಾಕಟ್ಟಿನ ಸಚಿವ ಸ್ಥಾನಗಳ ದೊರಕಿದ್ದರಿಂದ ನಿರಾಸೆಗೊಂಡಿದ್ದವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ ಮಾಡಲಾಗಿದೆ.
ನಿಗಮ ಮಂಡಳಿಗಳಿಗೆ ಆಯ್ಕೆಯಾದ ಎಲ್ಲರೂ ಬಿಜೆಪಿ ಶಾಸಕರೆ ಆಗಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದುದ್ದಕ್ಕೆ ನಿರಾಶೆಗೊಂಡಿದ್ದವರಿಗೆ ನಿಗಮ ಮಂಡಳಿ ಸ್ಥಾನಗಳು ತೃಪ್ತಿ ನೀಡುತ್ತವೆಯೇ? ಇಲ್ಲ ಬಂಡಾಯ ಜೋರಾಗುತ್ತದೆಯೇ ಕಾದು ನೋಡಬೇಕಿದೆ.
ಇದನ್ನೂ ಓದಿ: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಯಡಿಯೂರಪ್ಪಗೆ ಸಮನ್ಸ್


