Homeಮುಖಪುಟದೇಶದ ಮೊದಲ ದೃಷ್ಟಿಹೀನ ವಿಕಲಚೇತನ ಆಯುಕ್ತ ಪ್ರಸನ್ನ ಕುಮಾರ್ ಪಿಂಚಾ ನಿಧನ

ದೇಶದ ಮೊದಲ ದೃಷ್ಟಿಹೀನ ವಿಕಲಚೇತನ ಆಯುಕ್ತ ಪ್ರಸನ್ನ ಕುಮಾರ್ ಪಿಂಚಾ ನಿಧನ

ಹುಟ್ಟಿನಿಂದಲೇ ಅಂಧರಾಗಿದ್ದ ಇವರು ದೇಶದ ಮೊದಲ ದೃಷ್ಟಿಹೀನ ವಿಕಲಚೇತನ ಆಯುಕ್ತರಾಗಿದ್ದಾರೆ.

- Advertisement -
- Advertisement -

ಭಾರತದ ಮೊದಲ ದೃಷ್ಟಿಹೀನ ವಿಶೇ‍ಷಚೇತನ ಆಯುಕ್ತ ಪ್ರಸನ್ನ ಕುಮಾರ್ ಪಿಂಚಾ (68) ಅವರು ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಹುಟ್ಟಿನಿಂದಲೇ ಅಂಧರಾಗಿದ್ದ ಪಿಂಚಾ ಪ್ರತಿಷ್ಠಿತ ವಿಕಲಚೇತನರ ಹಕ್ಕುಗಳ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅವರು ಡಿಸೆಂಬರ್ 2011 ರಿಂದ 2014 ರವರೆಗೆ ಮೂರು ವರ್ಷಗಳ ಅವಧಿಗೆ ವಿಕಲಾಂಗರಿಗಾಗಿ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಪಿಂಚಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನವದೆಹಲಿಯ ಸಾಕೆತ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಕೋಲ್ಕತ್ತಾದ ಅಂಧರ ಶಾಲೆಯಲ್ಲಿ ಓದಿದ ಪಿಂಚಾ, ಅಸ್ಸಾಂನಲ್ಲಿ ತನ್ನ ಬ್ಯಾಚುಲರ್ ಇನ್ ಲಾ ಮಾಡಿದ್ದಾರೆ. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾದ ಅವರು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಮೂರು ದಶಕಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡಿದ್ದಾರೆ. ಆಕ್ಷನ್ ಏಡ್ ಎಂಬ ಅಂತಾರಾಷ್ಟ್ರೀಯ ಎನ್‌ಜಿಒ ಜೊತೆ ಸೇರಿ ಅಸ್ಸಾಂನ ತಳ ಸಮುದಾಯಗಳೊಂದಿಗೆ ವ್ಯಾಪಕ ಕೆಲಸ ಮಾಡಿದ್ದರು.

1999 ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ಅತ್ಯುತ್ತಮ ಉದ್ಯೋಗಿಗಳ (ದೃಷ್ಟಿ ಅಂಗವಿಕಲರ) ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು.

ಅಸ್ಸಾಂನ ಜೋರ್ಹಾಟ್ನಲ್ಲಿರುವ ಸರ್ಕಾರಿ ಇನ್ಸ್ಟಿಟ್ಯೂಟ್ ಫಾರ್ ದಿ ಬ್ಲೈಂಡ್‌ ಇದರ ಸ್ಥಾಪಕ ಪ್ರಾಂಶುಪಾಲರಾಗಿದ್ದರು.

ಪಿಂಚಾ ಹಲವಾರು ಉನ್ನತ ಹಾಗೂ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆಕ್ಷನ್ ಏಡ್‌ನಲ್ಲಿ ಈಶಾನ್ಯ ಭಾರತದ ಪ್ರಾದೇಶಿಕ ಹಿರಿಯ ವ್ಯವಸ್ಥಾಪಕ ಹುದ್ದೆಯನ್ನು ಅಲಂಕರಿಸಿದ್ದರು. ಹಿರಿಯ ವ್ಯವಸ್ಥಾಪಕರಾಗಿ ಮತ್ತು ರಾಷ್ಟ್ರೀಯ ಥೀಮ್ ಲೀಡರ್ ಆಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅಸ್ಸಾಂ ಸರ್ಕಾರದ ಸಮಾಜ ಕಲ್ಯಾಣ ಜಂಟಿ ನಿರ್ದೇಶಕರ ಹುದ್ದೆಯಲ್ಲಿದ್ದರು.

ವಿಶೇ‍ಷಚೇತನರಿಗಾಗಿ ಮುಖ್ಯ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದೊಂದಿಗೆ (ಎನ್‌ಎಚ್‌ಆರ್‌ಸಿ) ವಿಶೇ‍ಷಚೇತನರಿಗಾಗಿ ವಿಶೇಷ ವರದಿಗಾರರಾಗಿದ್ದರು. ಆಟಿಸಂ, ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತ ಮತ್ತು ಬಹು ವಿಕಲಾಂಗತೆ ಹೊಂದಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ವಿಶೇ‍ಷಚೇತನ ವ್ಯಕ್ತಿಗಳ ಹಕ್ಕುಗಳಿಗೆ ಅನುಗುಣವಾಗಿ ಸಂವಿಧಾನದಲ್ಲಿ ಬದಲಾವಣೆಗಳ ಸರಣಿಯನ್ನು ಪಿಂಚಾ ಪ್ರತಿಪಾದಿಸಿದರು. “ಅಂಗವಿಕಲರು” ಎಂಬ ಪದವನ್ನು “ವಿಶೇ‍ಷಚೇತನ ವ್ಯಕ್ತಿಗಳು” ಎಂದು ಬದಲಾಯಿಸಬೇಕೆಂದು ಅವರು ಬಯಸಿದ್ದರು.


ಓದಿ:

ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...