Homeಮುಖಪುಟ’ನೀವು ಯಾರನ್ನು ಬೆಂಬಲಿಸುತ್ತೀರಿ’: ಪತ್ರಕರ್ತರ ಮೇಲೆ ಕೋಪಗೊಂಡು ಪ್ರಶ್ನಿಸಿದ ಮುಖ್ಯಮಂತ್ರಿ

’ನೀವು ಯಾರನ್ನು ಬೆಂಬಲಿಸುತ್ತೀರಿ’: ಪತ್ರಕರ್ತರ ಮೇಲೆ ಕೋಪಗೊಂಡು ಪ್ರಶ್ನಿಸಿದ ಮುಖ್ಯಮಂತ್ರಿ

- Advertisement -
- Advertisement -

ಇಂಡಿಗೊ ಏರ್‌ಲೈನ್ ವ್ಯವಸ್ಥಾಪಕ ರೂಪೇಶ್ ಕುಮಾರ್‌ ಸಿಂಗ್ ಹತ್ಯೆಗೆ ಸಂಬಂಧಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ತಬ್ಬಿಬ್ಬಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌, ”ನೀವು ತಪ್ಪಾದ ಮತ್ತು ಸೂಕ್ತವಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ಅಷ್ಟಕ್ಕೂ ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ” ಎಂದು ಕೋಪಗೊಂಡು ಪತ್ರಕರ್ತರಿಗೆ ವಾಪಾಸು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಕರ್ತರೊಂದಿಗೆ, “ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿದ್ದಾರೆ. ಹತ್ಯೆಯ ಬಗ್ಗೆ ನಿಮಗೆ ಯಾವುದೇ ಸುಳಿವು ಇದ್ದರೆ, ದಯವಿಟ್ಟು ಪೊಲೀಸರೊಂದಿಗೆ ಹಂಚಿಕೊಳ್ಳಿ” ಎಂದು ಅವರು ಪತ್ರಕರ್ತರಿಗೆ ಹೇಳಿದ್ದಾರೆ.

ಇದನ್ನೂ ಓದಿ: RJD ಗೆ ಸೇರುವ JDU ಶಾಸಕರ ಸಂಖ್ಯೆ ಶೀಘ್ರವೇ 28 ಕ್ಕೇರಲಿದೆ: ನಿತೀಶ್‌ಗೆ ಮತ್ತೊಂದು ಶಾಕ್!

“ನೀವು ತುಂಬಾ ಒಳ್ಳೆಯವರು. ನಾನು ನಿಮ್ಮನ್ನು ನೇರವಾಗಿ ಕೇಳುತ್ತಿದ್ದೇನೆ, ನೀವು ಯಾರನ್ನು ಬೆಂಬಲಿಸುತ್ತಿದ್ದೀರಿ?. 15 ವರ್ಷಗಳ ಕಾಲ ಆಳಿದ, ಗಂಡ-ಹೆಂಡತಿ ಜೋಡಿಯ ಆಡಳಿತದಲ್ಲಿ ತುಂಬಾ ಅಪರಾಧಗಳು ನಡೆದಿವೆ. ನೀವು ಅದನ್ನು ಯಾಕೆ ಹೈಲೈಟ್ ಮಾಡಬಾರದು?” ಎಂದು 1990 ರ ದಶಕದಲ್ಲಿ ಬಿಹಾರದ ಮುಖ್ಯಮಂತ್ರಿಗಳಾಗಿದ್ದ ಲಾಲು ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಇಬ್ಬರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

ಮಂಗಳವಾರ ಸಂಜೆ,  ಇಂಡಿಗೊ ಏರ್‌ಲೈನ್ ವ್ಯವಸ್ಥಾಪಕ ರೂಪೇಶ್ ಸಿಂಗ್ ಅವರನ್ನು, ಬೈಕ್‌ನಲ್ಲಿ ಬಂದ ಆಗಂತುಕರಿಬ್ಬರು ಅವರ ಮನೆಯ ಗೇಟ್‌ ಹೊರಗಡೆ ಗುಂಡಿಕ್ಕಿ ಕೊಂದಿದ್ದರು. ಈ ಘಟನೆಯು ಮುಖ್ಯಮಂತ್ರಿಯ ಮನೆಯಿಂದ ಕೇವಲ 2 ಕಿ.ಮೀ ದೂರದಲ್ಲಿ ನಡೆದಿದೆ.

ಮುಖ್ಯಮಂತ್ರಿಯ ವರ್ತನೆಯನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌, “ದುರದೃಷ್ಟಕರ ಬ್ರೇಕಿಂಗ್ ನ್ಯೂಸ್. ಮುಖ್ಯಮಂತ್ರಿ ನಿತೀಶ್ ಕುಮಾರ್ ಅಪರಾಧಿಗಳ ಮುಂದೆ ಶರಣರಾದರು. ಅವರ ಹೇಳಿಕೆಗಳು ಅಪರಾಧವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬಂತಾಗಿದೆ. ಹರಪ್ಪನ್ ಕಾಲದಲ್ಲಿಯೂ ಅಪರಾಧಗಳು ನಡೆದಿವೆ, ಅದಕ್ಕೂ ಹೋಲಿಕೆ ಮಾಡಿ” ಎಂದು ವ್ಯಂಗ್ಯವಾಡಿದ್ದಾರೆ.

“ನೀವು ಅಪರಾಧವನ್ನು ನಿಲ್ಲಿಸುವುದನ್ನು ಬಿಟ್ಟು ಪತ್ರಕರ್ತರನ್ನು ಪ್ರಶ್ನಿಸುತ್ತಿದ್ದೀರಿ. ಅಪರಾಧಿಗಳು ಯಾರು ಮತ್ತು ಅವರು ಯಾಕೆ ಅಪರಾಧಗಳನ್ನು ಮಾಡುತ್ತಾರೆಂದು ನಿಮಗೆ ತಿಳಿದಿದೆಯೇ?” ಎಂದು ತೇಜಸ್ವಿ ಕೇಳಿದ್ದಾರೆ.

ಇದನ್ನೂ ಓದಿ: ‘ರೈತರಿಗಾಗಿ ಗಲ್ಲಿಗೇರಲು ಸಿದ್ಧ- ತಾಕತ್ತಿದ್ದರೆ ಬಂಧಿಸಿ’: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...