Homeಕರ್ನಾಟಕಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಸುಳ್ಳು ಪೋಸ್ಟ್: ಎಫ್‌ಐಆರ್ ದಾಖಲು

ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಸುಳ್ಳು ಪೋಸ್ಟ್: ಎಫ್‌ಐಆರ್ ದಾಖಲು

- Advertisement -
- Advertisement -

ಸೇನಾಧಿಕಾರಿ ಸೋಫಿಯಾ ಖುರೇಷಿ ಅವರ ಅತ್ತೆ ಮಾವನ ಮನೆಯ ಮೇಲೆ “ದಾಳಿ” ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿ ಹರಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಗುರುವಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರೇಷನ್ ಸಿಂಧೂರದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸತತವಾಗಿ ಭಾಗವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿಯ ಸೊಸೆಯಾಗಿದ್ದು ಅವರ ಪತಿ ಕೂಡಾ ಸೇನೆಯಲ್ಲಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ

ಪೊಲೀಸ್ ಅಧಿಕಾರಿಯ ದೂರಿನ ಮೇರೆಗೆ, ಎಕ್ಸ್‌ ಬಳಕೆದಾರ ಅನಿಸ್ ಉದ್ದೀನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 353(2) (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು ಮತ್ತು 192 (A) (ಗಲಭೆಯನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪ್ರಚೋದನೆ ನೀಡುವುದು) ಅಡಿಯಲ್ಲಿ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಆಪಾದಿತ ನಕಲಿ ಪೋಸ್ಟ್ ಅನ್ನು ಮರುಟ್ವೀಟ್ ಮಾಡಿದ್ದಕ್ಕಾಗಿ ಇತರ ಇಬ್ಬರು ಎಕ್ಸ್‌ ಬಳಕೆದಾರರಾದ ಖುಬಾನಿ ಮತ್ತು ಡ್ರುಮಿ ಎಂಬವರ ಹೆಸರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಖಾತೆದಾರರ ಗುರುತನ್ನು ಇನ್ನಷ್ಟೆ ಪರಿಶೀಲಿಸಬೇಕಾಗಿದೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಲೇದ್ ಬುಧವಾರ ಮಾತನಾಡಿ, “ಅಂತಹ ಯಾವುದೇ ಘಟನೆ ನಡೆದಿಲ್ಲ” ಎಂದು ದೃಢಪಡಿಸಿದ್ದು, ಈ ಪೋಸ್ಟ್ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ಇದೀಗ ಆಪಾದಿತ ಪೋಸ್ಟ್‌ ಅನ್ನು ಅಳಿಸಲಾಗಿದ್ದು, ಅದಾಗ್ಯೂ, ಈ ಪೋಸ್ಟ್ ಭಾರತದ ಹೊರಗಿನಿಂದ ಬಂದಿದೆ ಎಂದು ನಂಬಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರಕರಣ ಪ್ರಮುಖ ಆರೋಪಿ ಉದ್ದೀನ್ ಕೆನಡಾದ ಬ್ರಿಟಿಷ್ ಕೊಲಂಬಿಯಾ ನಿವಾಸಿ ಎಂದು ಸೂಚಿಸಿದೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಹೇಳಿದೆ.

ಈ ಮೊದಲು ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ ಅವರು, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.

“ಅವರು ಬೆಳಗಾವಿಯ ಸೊಸೆ, ಅವರ ಪತಿ ಬೆಳಗಾವಿಯವರು. ಈಗಾಗಲೇ ಅಲ್ಲಿನ ಎಸ್‌ಪಿ ಹೇಳಿಕೆ ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿ ಕೇಂದ್ರ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಲು ನಾವು ಕೇಳಿದ್ದೇವೆ. ಅವರು ಅದನ್ನು ಮಾಡುತ್ತಾರೆ… ಇದು ರಾಜ್ಯ ಮತ್ತು ದೇಶಕ್ಕೆ ಮಾಡಿದ ಅವಮಾನ. ಇದು ಸಮರ್ಥನೀಯವಲ್ಲ” ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ, ಸ್ಥಳೀಯ ಪೊಲೀಸ್ ತಂಡವು ಗೋಕಾಕ್ ತಾಲ್ಲೂಕಿನಲ್ಲಿರುವ ಕರ್ನಲ್ ಖುರೇಷಿ ಅವರ ಅತ್ತೆಯ ಮನೆಗೆ ಭೇಟಿ ನೀಡಿತ್ತು ಮತ್ತು ಅವರ ಮನೆಯ ಹೊರಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕರ್ನಲ್ ಖುರೇಷಿ ಸಶಸ್ತ್ರ ಪಡೆಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಅವರು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜೊತೆಗೆ ಆಪರೇಷನ್ ಸಿಂಧೂರ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಕಾಂಚ ಗಚಿಬೌಲಿ ಅರಣ್ಯ ನಾಶ ಪ್ರಕರಣ | ‘ಮತ್ತೆ ಅರಣ್ಯ ಬೆಳೆಸಿ, ಇಲ್ಲ ಜೈಲಿಗೆ ಹೋಗಲು ಸಿದ್ದರಾಗಿ’; ತೆಲಂಗಾಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಕಾಂಚ ಗಚಿಬೌಲಿ ಅರಣ್ಯ ನಾಶ ಪ್ರಕರಣ | ‘ಮತ್ತೆ ಅರಣ್ಯ ಬೆಳೆಸಿ, ಇಲ್ಲ ಜೈಲಿಗೆ ಹೋಗಲು ಸಿದ್ದರಾಗಿ’; ತೆಲಂಗಾಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -