ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದ ಹಾಸ್ಯನಟ ಮತ್ತು ರಾಜಕಾರಣಿ ಶ್ಯಾಮ್ ರಂಗೀಲಾ ತಾನು ನಾಮಪತ್ರದ ಅರ್ಜಿಯನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದೇನೆ, ಅಧಿಕಾರಿಗಳು ನಾಮಪತ್ರದ ಅರ್ಜಿಯನ್ನು ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಾಮಪತ್ರದ ಅರ್ಜಿ ವಿಚಾರದಲ್ಲಿ ಅಧಿಕಾರಿಗಳು ತೊಂದರೆ ನೀಡುತ್ತಿರುವುದರಿಂದ ನನಗೆ ತೊಂದರೆಯಾಗುತ್ತಿದೆ. ಈ ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ವಾರಣಾಸಿಯಲ್ಲಿ ನಾಮಪತ್ರದ ಕುರಿತು ಅರ್ಜಿಗಳನ್ನು ಪಡೆಯುವ ಪ್ರಕ್ರಿಯೆಯು ತುಂಬಾ ಜಟಿಲವಾಗಿದೆ, ಫಾರ್ಮ್ ಪಡೆಯುವುದು ತುಂಬಾ ಕಷ್ಟಕರವಾಗಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತ ನಂತರ, ಚುನಾವಣಾ ಕಚೇರಿಯು ನೀವು ಮೊದಲು 10 ಪ್ರಸ್ತಾವನೆದಾರರ ಸಹಿ ಸೇರಿದಂತೆ ಆಧಾರ್ ಕಾರ್ಡ್‌ಗಳ ನಕಲು ಮತ್ತು ಅವರ ಫೋನ್ ಸಂಖ್ಯೆಗಳನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ, ಆಗ ಮಾತ್ರ ನೀವು ಅರ್ಜಿಗಾಗಿ ಖಜಾನೆ ಚಲನ್ ಫಾರ್ಮ್‌ನ್ನು ಪಡೆಯುತ್ತೀರಿ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಶ್ಯಾಮ್ ರಂಗೀಲಾ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಈ ನಿಬಂಧನೆಯು ಚುನಾವಣಾ ಆಯೋಗದ ನಿಯಮಗಳಿಗೆ ಅನುಸಾರವಾಗಿಲ್ಲ. ಈ ಬಗ್ಗೆ ವಾರಣಾಸಿ ಜಿಲ್ಲಾಡಳಿತಕ್ಕೆ ಸರಿಯಾದ ನಿರ್ದೇಶನಗಳನ್ನು ನೀಡಬೇಕು, ಆ ಮೂಲಕ ಈ ದೇಶದ ಪ್ರಜಾತಂತ್ರದ ಕುರಿತು ನಮಗಿರುವ ವಿಶ್ವಾಸವನ್ನು ಬಲಪಡಿಸಬೇಕು ಎಂದು ಗೌರವಾನ್ವಿತ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ರಂಗೀಲಾ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ನಾಮಪತ್ರವನ್ನು ಪಡೆಯುವ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ ಮತ್ತು ಮೇ 13ರ ಸೋಮವಾರ ಮತ್ತೆ ನಾಮಪತ್ರದ ಅರ್ಜಿಯನ್ನು ಪಡೆಯಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.
ವಾರಣಾಸಿ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ನಾಲ್ಕು ದಿನಗಳಾಗಿವೆ. ರಂಗೀಲಾ ಅವರಿಗೆ ನಾಮಪತ್ರ ಸಲ್ಲಿಸಲು ಮೇ 14ರವರೆಗೆ ಕಾಲಾವಕಾಶವಿದೆ. ಪ್ರಧಾನಿ ಮೋದಿ ಹೊರತುಪಡಿಸಿ ಕಾಂಗ್ರೆಸ್-ಎಸ್‌ಪಿ ಮೈತ್ರಿಕೂಟದ ಇಂಡಿಯಾ ಮೈತ್ರಿಕೂಟದಿಂದ ಅಜಯ್ ರೈ ಮತ್ತು ಬಿಎಸ್‌ಪಿಯ ಅತಹರ್ ಜಮಾಲ್ ಲಾರಿ ಕೂಡ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ವಾರಣಾಸಿಯಲ್ಲಿ ಜೂ.1ರಂದು 7ನೇ ಮತ್ತು ಅಂತಿಮ ಹಂತದಲ್ಲಿ ಮತದಾನ ನಡೆಯಲಿದೆ.
वाराणसी में नामांकन फॉर्म प्राप्त करने की प्रक्रिया इतनी जटिल कर दी गई है कि फॉर्म लेना बहुत ज़्यादा मुश्किल हो गया है, घंटों लाइन में लगने के बाद चुनाव कार्यालय से कहा गया कि आप दस प्रस्तावकों के आधार कार्ड की कॉपी (हस्ताक्षर समेत) और उनके फ़ोन नंबर पहले दीजिए तभी फॉर्म के लिये…
— Shyam Rangeela (@ShyamRangeela) May 10, 2024
ಇದನ್ನು ಓದಿ: ಎನ್‌ಡಿಎ ಪ್ರಚಾರ ಸಭೆಗೆ 500ರೂ. ಹಣದ ಆಮಿಷ ನೀಡಿ ಕರೆದುಕೊಂಡು ಬಂದು ವಂಚನೆ: ಮಹಿಳೆಯರ ಆರೋಪ


