Homeಕರ್ನಾಟಕ‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

- Advertisement -
- Advertisement -

“ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿರುವುದಕ್ಕೂ ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ, ಇವೆರೆಡೂ ಒಂದೇ” ಎಂದು ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಹೇಳಿದ್ದನ್ನು ವಿರೋಧಿಸುವ ಭರದಲ್ಲಿ ಪತ್ರಕರ್ತ, ‘ಪಬ್ಲಿಕ್‌ ಟಿ.ವಿ.’ ಸಂಪಾದಕ ಎಚ್‌.ಆರ್‌.ರಂಗನಾಥ್‌ ಆಡಿರುವ ಮಾತುಗಳು ವಿವಾದ ಸೃಷ್ಟಿಸಿವೆ. ಸಾಯಿ ಪಲ್ಲವಿಯವರನ್ನು ಟೀಕಿಸುವ ಭರದಲ್ಲಿ ಮತ್ತೊಬ್ಬರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತೆ ಮಾತನಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

“ಈ ಯಮ್ಮ ತುಂಬಾ ಫೇಮಸ್ಸಾ? ಬಾಯಿ ಮುಚ್ಕೊಂಡು ಫಿಲ್ಮ್‌ ಮಾಡೋಕೆ ಹೇಳಿ. ಕಾಮನ್‌ ಸೆನ್ಸ್‌ ಇದೆಯ ಆ ಯಮ್ಮನಿಗೆ” ಹೀಗೆ ರಂಗನಾಥ್‌ ಅವರು ನಾಲಗೆ ಹರಿಬಿಟ್ಟಿದ್ದು ಸಾಯಿಪಲ್ಲವಿಯವರ ಅಭಿಮಾನಿಗಳನ್ನು ಕೆರಳಿಸಿದೆ. ಹಲವು ಜನಪರ ಮನಸ್ಸುಗಳು ರಂಗನಾಥ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

 

“ಈ ರಂಗನಾಥನಿಗೆ ಯಾರಾದ್ರೂ ಹೇಳ್ರಪ್ಪಾ. ಸಾಯಿಪಲ್ಲವಿ ಎಂಬ ನಟಿ ಸಿನಿಮಾ ಕಲಾವಿದೆಯಾಗಿದ್ದುಕೊಂಡು ಸಾರ್ವಜನಿಕ ಬದುಕು ಮತ್ತು ಪ್ರಸಕ್ತ ರಾಜಕಾರಣ ಕುರಿತಂತೆ ಪ್ರಬುದ್ಧತೆ ಹೊಂದಿದ್ದಾಳೆ. ಜೊತೆಗೆ ಆಕೆಯ ಮಾತುಗಳು ಖಚಿತ ನಿಲುವಿನಿಂದ ಕೂಡಿವೆ. ನಿನ್ನ ಹಾಗೆ ಹುಚ್ಚುತನದಿಂದ ಕೂಡಿಲ್ಲ. ಆಕೆ ತನ್ನ ವೃತ್ತಿಯ ಜೊತೆಗೆ ಕಾಪಾಡಿಕೊಂಡು ಬಂದಿರುವ ಘನತೆಯನ್ನು ನೀನು ಪತ್ರಿಕೋದ್ಯಮದ ಜೊತೆ ಕಾಪಾಡಿಕೊಂಡು ಬಂದಿದ್ದಿಯಾ ಎಂದು ಆತ್ಮ ವಿಮರ್ಶೆ ಮಾಡಿಕೊ ತಮ್ಮಾ” ಎಂದು ಹಿರಿಯ ಲೇಖಕರಾದ ಜಗದೀಶ್ ಕೊಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

“ಕ್ರೈಂ ರಿಪೋರ್ಟರ್ ಹೆಚ್. ಆರ್. ರಂಗನಾಥರವರೇ, ನೀವು ಪತ್ರಿಕೋದ್ಯಮಕ್ಕೆ ನ್ಯಾಯ ಒದಗಿಸಿದ್ದೀರಾ? ಸಾಯಿ ಪಲ್ಲವಿ ತನ್ನ ಅಭಿಪ್ರಾಯವನ್ನು ಹೇಳುವ ಹಕ್ಕನ್ನು ಹೊಂದಿಲ್ಲವೇ? ನೋಟಿನಲ್ಲಿ ಚಿಪ್ಪಿದೆ ಅಂತ ಒಂದು ಗಂಟೆ ಕಾರ್ಯಕ್ರಮ ಮಾಡಿದಾಗಲೇ ನೀವು ಪತ್ರಿಕೋದ್ಯಮದಿಂದ ನಿರ್ಗಮಿಸಬೇಕಿತ್ತು. ಆದರೂ ತಾನು ಮಾಡಿದ್ದೇ ಸರಿ ಅಂತ ಡಿಕ್ಟೇಟರ್‌‌ನಂತೆ ನಡೆದುಕೊಳ್ಳುತ್ತಿದ್ದೀರಿ” ಎಂದು ರಾಜು ಮೌರ್ಯ ದಾವಣಗೆರೆ ಅಭಿಪ್ರಾಯಪಟ್ಟಿದ್ದಾರೆ.

“ಆವೊಮ್ಮುಂಗೆ ನೆಟ್ಟಗೆ ಸಿನಿಮಾ ಮಾಡ್ಕಂಡ್ ಇರಕ್ಕೇಳಿ, ಈಡಿಯಾಟಿಕ್ ಸ್ಟೇಟ್ ಮೆಂಟ್ ಅದು. ಈಡಿಯಾಟಿಕ್ ಕಂಪೇರಿಷನ್, ಕಾಶ್ಮೀರಿ ಪಂಡಿತರು ಯಾವನ್ನೋ ಸಾಯ್ಸಕ್ಕೆ ಬಂದೂಕು ತಗೊಂಡು ಹೋಗಿರಲಿಲ್ಲ… ಬ್ಲಾ ಬ್ಲಾ ಬ್ಲಾ.. ಇದು ಪಬ್ಲಿಕ್ ಟಿವಿ ರಂಗನಾಥ್ ಆಡಿದ ಈಡಿಯಾಟಿಕ್ ಮಾತುಗಳು. ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದ ಗುಂಪಿನಿಂದ ಸಾಯಿಸಲ್ಪಟ್ಟ ಬಡ ಮುಸ್ಲಿಮನೂ ಯಾರಿಗೂ ಬಂದೂಕು ತಗೊಂಡು ಹೋಗಿ ಸಾಯಿಸಿರಲಿಲ್ಲ ಎಂಬ ಕಾಮನ್ ಸೆನ್ಸ್ ಇಲ್ಲವೇ ಈ ವ್ಯಕ್ತಿಗೆ? ಪತ್ರಕರ್ತ ಅನಿಸಿಕೊಂಡಿದ್ದಕ್ಕಾದರೂ ಒಂಚೂರು ವಿವೇಕದಿಂದ ಮಾತನಾಡಬಾರದೇ? ಅಸಹ್ಯ. ಇಷ್ಟೆಲ್ಲ ಆತ್ಮವಂಚನೆ ಮಾಡಿಕೊಂಡು ಬದುಕ್ತೀರಲ್ಲ, ತಿಂದಿದ್ದು ಮೈಗೆ ಹಿಡಿಯುತ್ತಾ ನಿಜವಾಗ್ಲೂ?” ಎಂದು ಬರಹಗಾರ ಎಸ್‌.ಸಿ.ದಿನೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

“ಅಂತರ್ಜಾಲದಲ್ಲಿ ಬಹುಶಃ ಗರಿಷ್ಠ ಸಂಚಾರ ಮಾಡಿದ ವೀಡಿಯೋಗಳಲ್ಲಿ ಈ ಐತಿಹಾಸಿಕ ವೀಡಿಯೋ ಕೂಡಾ ಒಂದು. ಪತ್ರಕರ್ತ/ಸಂಪಾದಕ ಎಂದು ಕರೆಸಿಕೊಳ್ಳುವ ವ್ಯಕ್ತಿಯೊಬ್ಬನ ಬುದ್ಧಿಮತ್ತೆಯ ಮತ್ತು ಜರ್ನಲಿಸಂನ ಮೂಲ ತತ್ವಕ್ಕೆ ಬದ್ಧತೆಯ ಅಭೂತಪೂರ್ವ ನಿದರ್ಶನ” ಎಂಬ ಸಾಲುಗಳೊಂದಿಗೆ ಚಿಂತಕ ಶ್ರೀನಿವಾಸ ಕಾರ್ಕಳ ಅವರು ಹಳೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

“ಈ ಡಿಕ್ಟೇಟರಿಸಂ ಪತ್ರಕರ್ತರಿಗೆ, ‘ಕಾಮನ್‌ಸೆನ್ಸ್’ ಪಾಠ ಮಾಡೋರು ಯಾರೂ ಇಲ್ವಾ. ಒಬ್ಬ ನಟಿ ಮಾನವೀಯತೆಯ ಬಗ್ಗೆ ಮಾತನಾಡಲೇಬಾರದಾ? ಆ ನಟಿ ಮಾನವೀಯತೆಯ ಬಗ್ಗೆ ಮಾತನಾಡಿದರೆ ಇವರಿಗ್ಯಾಕೆ ಉರಿ? ಇವ್ರೂ ಸುದ್ದಿ ಏನಿದೆಯೋ ಅದನ್ನು ಹೇಳೋದಷ್ಟೇ ಇವರ ಕೆಲಸ ಅಲ್ವಾ, ಯಾರು ಏನು ಮಾತನಾಡಬೇಕು, ಏನು ಕೆಲಸ ಮಾಡಬೇಕು ಅಂತ ಆಜ್ಞೆ ಮಾಡೋ ಹಕ್ಕು ಇವರಿಗೆ ಯಾರು ಕೊಟ್ಟಿದ್ದು? ಈಡಿಯಾಟಿಕಲೀ ಟಾಕಿಂಗ್ ನಾನ್‌ಸೆನ್ಸ್ ಇನ್ ದ ನೇಮ್ ಆಫ್ ಜರ್ನಲಿಸಂ” ಎಂದು ನಿರ್ದೇಶಕ ಮಂಸೋರೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ಸುವರ್ಣ ನ್ಯೂಸ್‌ನಿಂದಲೂ ಆದೇಶ

ಪಬ್ಲಿಕ್ ಟಿ.ವಿ.ಯಷ್ಟೇ ಅಲ್ಲದೇ ಸುವರ್ಣ ಟಿ.ವಿ. ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವ ರೀತಿ ಪೋಸ್ಟ್ ಮಾಡಿದೆ. “ಕೆಲವೊಮ್ಮೆ ಈ ನಟ, ನಟಿಯರು ಮೌನವಾಗಿದ್ದರೆ ಒಳ್ಳೆಯದು. ಆದರೆ ನಾಲಗೆ ಹರಿಯಬಿಟ್ಟು ಟ್ರೋಲ್‌ ಆಗುತ್ತಾರೆ” ಎಂದು ಫೇಸ್‌ಬುಕ್‌ ಪೋಸ್ಟ್‌ ಹಾಕಿರುವ ಸುವರ್ಣ ನ್ಯೂಸ್‌ ಚಾನೆಲ್‌ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

“ಯಾರು ಬಾಯಿ ಬಿಡಬೇಕು, ಯಾರು ಬಾಯಿ ಮುಚ್ಚಿಕೊಳ್ಳಬೇಕು” ಎಂದು ಸುವರ್ಣ ನ್ಯೂಸ್ ಆದೇಶ ಹೊರಡಿಸುತ್ತದೆ” ಎಂದು ವಿನಯ್‌ ಕಸ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ದೇಶದ ಪ್ರತಿಯೊಬ್ಬರಿಗೂ ತನ್ನ ಭಾವನೆಗಳನ್ನ ವ್ಯಕ್ತಪಡಿಸೋಕೆ ದೇಶದ ಸಂವಿಧಾನ ಅಭಿವ್ಯಕ್ತ ಸ್ವಾತಂತ್ರ ದ ಹಕ್ಕು ಪ್ರದಾನಿಸಿದೆ, ಅವರ ಸ್ವಾತಂತ್ರ್ಯಕ್ಕೆ ಅಡ್ಡಪಡಿಸಲು ಇವನಾರು?

  2. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಬೇಕೋ ಅಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ…!!!

  3. What is the problem for you she expressed her view and given in democracy. What you tell in the news we6listen and no body argue for you what a logic sir

  4. Like how Sai pallavi has given her views, Mr.Ranganath has given his views on that if you look at that angle.Comibg to comparison what she made is unacceptable if you r a real hindu.

  5. Sai pallavi has talked about great India. She was right. This ranganath is a bastard. He and his takes money from politics party. Telling wrong statement. He is useless person. He talks likes supreme court judge. He doesn’t know anything. He talks only support ing BJP. He can his name BJP tv

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...