Homeಕರ್ನಾಟಕ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

- Advertisement -
- Advertisement -

ವೈಯಕ್ತಿಕ ದ್ವೇಷದಿಂದ ಸಂಚೊಂದು ರೂಪಿಸಿ ಅದರಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಪ್ರಕರಣಕ್ಕೆ, ಕೋಮು ಆಯಾಮ ನೀಡಿ ವರದಿ ಮಾಡಿದ ಪಬ್ಲಿಕ್‌ ಟಿವಿ ವರದಿಗಾರನಿಗೆ ಡಿಸಿಪಿ ಭೀಮಾ ಶಂಕರ್ ಗುಳೇದ್ ಅವರು ಪತ್ರಿಕಾಗೋಷ್ಠಿಯಲ್ಲೇ ಕ್ಲಾಸ್ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.

ಹಣಕಾಸಿನ ವಿಚಾರವಾಗಿ ಪರಸ್ಪರ ದ್ವೇಷದಿಂದ ಸಂಚಿನಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಸೋಮವಾರದಂದು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದರು. ಆದರೆ ಕನ್ನಡ ಸುದ್ದಿ ಚಾನೆಲ್‌ಗಳಾದ ದಿಗ್ವಿಜಯ ನ್ಯೂಸ್ ಮತ್ತು ಪಬ್ಲಿಕ್ ಟಿವಿ ಘಟನೆಗೆ ‘ಕೋಮು ಆಯಾಮ’ವನ್ನು ಸೇರಿಸಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಹಲವಾರು ವರದಿ ಮಾಡುವ ಮೂಲಕ ‘ಕೋಮು ಗಲಭೆ’ಗೆ ಕುಮ್ಮಕ್ಕು ನೀಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೀಗಾಗಿ ಸಂಜೆ ವೇಳೆ ಪತ್ರಿಕಾಗೋಷ್ಠಿ ನಡೆಸಿದ ಡಿಸಿಪಿ ಭೀಮಾ ಶಂಕರ್ ಗುಳೇದ್, “ಪ್ರಕರಣವು ವೈಯಕ್ತಿಕ ದ್ವೇಷದ್ದಾಗಿದ್ದು, ಯಾವುದೆ ಕೋಮು ಆಯಾಮದಿಂದ ನಡೆದಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್ ಟಿವಿ

ಈ ವೇಳೆ ಪಬ್ಲಿಕ್ ಟಿವಿ ವರದಿಗಾರ ಮುರಳಿ ಎಂಬವರು ಘಟನೆಗೆ, ಕೋಮು ಆಯಾಮ ಇದೆಯೆ ಎಂಬಂತ ಪ್ರಶ್ನೆಗಳನ್ನು ಪದೇ ಪದೇ ಕೇಳಿದಾಗ ಆಕ್ರೋಶ ಭರಿತರಾದ ಡಿಸಿಪಿ, “ಘಟನೆಗೆ ಯಾವುದೆ ಕೋಮು ಆಯಾಮ ಇಲ್ಲ ಎಂಬ ಬಗ್ಗೆ ನಾನು ಬೆಳಿಗ್ಗೆಯೆ ನಿಮಗೆ ಸ್ಪಷ್ಟವಾಗಿ ಹೇಳಿದ್ದೇನೆ. ಆದರೂ ನೀವು ಆ ತರ ಬರೆಯುತ್ತೀರಲ್ಲ. ನಾನು ನಿಮಗೆ ತುಂಬಾ ತುಂಬಾ ನಿರ್ದಿಷ್ಠವಾಗಿ ಘಟನೆಗೆ ಕೋಮು ಆಯಾಮ ಇಲ್ಲ ಹೇಳಿದ್ದೇನೆ” ಎಂದು ಹೇಳಿದ್ದಾರೆ.

“ಈ ಘಟನೆಗೂ ಹಿಂದೂಗಳ ಭಜನೆಗೂ ಯಾವುದೆ ಸಂಬಂಧವಿಲ್ಲ ಎಂದು ಹೇಳಿದ್ದೇನೆ. ಬಾಯಿಗೆ ಬಂದಿದ್ದು ಬರೀತಿರಾ ನೀವು. ಏನು ಬರೆದಿದ್ದೀರಾ ನೀವು? ನೋಡಿ” ಎಂದು ಕಿಡಿ ಕಾರಿದ್ದಾರೆ.

ಹೆಣ್ಣೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ, ಫಯಾಝ್‌ ಎಂಬುವರು 35 ಲಕ್ಷಕ್ಕೆ ಮನೆಯೊಂದನ್ನು ಮಾರಿದ್ದರು. ಈ ಮನೆಯನ್ನು ಅಝೀಮ್‌ ಎಂಬ ವ್ಯಕ್ತಿ ಮಾರಾಟ ಮಾಡಿಸಿದ್ದ. ಇದರ ನಂತರ ಮನೆಗೆ 40 ಲಕ್ಷ ನೀಡಬೇಕು ಎಂದು ಫಯಾಝ್‌‌ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಇಬ್ಬರ ನಡುವೆ ದ್ವೇಷ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಫಯಾಝ್, ಮುನಾವರ್‌ ಮತ್ತು ಅಸ್ಗರ್‌ ಎಂಬವರು ಸೇರಿ, ಅಝೀಮ್‌ ಮತ್ತು ಆತನ ಸಂಗಡಿಗರ ವಿರುದ್ದ ದ್ವೇಷದಿಂದ ಸಂಚೊಂದನ್ನು ರೂಪಿಸಿದ್ದರು. ಇದೀಗ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಗಲಭೆಗೆ ಪ್ರಚೋದನೆ: ಪಬ್ಲಿಕ್ ಟಿವಿ ರಂಗನಾಥ್‌ ವಿರುದ್ಧ ಜಾಮೀನು ರಹಿತ ಕೇಸ್‌ ದಾಖಲಿಸುವಂತೆ ಕೋರ್ಟ್‌ ಸೂಚನೆ

ಆರೋಪಿಗಳ ಬಂಧನ ನಡೆಯುತ್ತಿದ್ದಂತೆ ಪಬ್ಲಿಕ್ ಟಿವಿ ಮತ್ತು ದಿಗ್ವಿಜಯ ಟಿವಿ ತನ್ನ ಒಂದು ವಿಡಿಯೊ ಸುದ್ದಿಯಲ್ಲಿ, “ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಸಂಚು. ಹನುಮಾನ್ ಚಾಲಿಸಾಗೆ ಪ್ರತಿಯಾಗಿ ಪೆಟ್ರೋಲ್ ಬಾಂಬ್. ಹಿಂದೂ ದೇವಸ್ಥಾನಗಳ ಮೇಲೆ ಪೆಟ್ರೋಲ್ ಬಾಂಬ್ ಹುನ್ನಾರ. ಹತ್ತು ಬಿಯರ್‌ ಬಾಟಲಿಗಳಲ್ಲಿ ಪೆಟ್ರೋಲ್ ದಾಳಿಗೆ ಪ್ಲಾನ್ ಮಾಡಿದ್ದಾರೆ” ಎಂದು ಕಪೋಲಕಲ್ಪಿತ ಸುಳ್ಳು ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...