Homeಮುಖಪುಟಫೀಚರ್‌ ಫೋಟೊಗ್ರಫಿಗಾಗಿ ಪ್ರತಿಷ್ಠಿತ ‘ಪುಲಿಟ್ಜರ್‌‌-2022’ ಪ್ರಶಸ್ತಿ ಗೆದ್ದ ಭಾರತೀಯ ಪತ್ರಕರ್ತರ ಪರಿಚಯ ಮತ್ತು ಫೊಟೊಗಳು ಹೀಗಿವೆ

ಫೀಚರ್‌ ಫೋಟೊಗ್ರಫಿಗಾಗಿ ಪ್ರತಿಷ್ಠಿತ ‘ಪುಲಿಟ್ಜರ್‌‌-2022’ ಪ್ರಶಸ್ತಿ ಗೆದ್ದ ಭಾರತೀಯ ಪತ್ರಕರ್ತರ ಪರಿಚಯ ಮತ್ತು ಫೊಟೊಗಳು ಹೀಗಿವೆ

- Advertisement -
- Advertisement -

2022 ರ ಸಾಲಿನ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಯನ್ನು ಭಾರತದ ನಾಲ್ವರು ಫೋಟೊ ಜರ್ನಲಿಸ್ಟ್‌ಗಳಿಗೆ ನೀಡಲಾಗಿದೆ. ಇದರಲ್ಲಿ ಅಫ್ಘಾನ್ ಸಂಘರ್ಷದ ಸಂದರ್ಭ ತಾಲಿಬಾನಿಗಳಿಂದ ಹತ್ಯೆಗೀಡಾಗಿದ್ದ ದಿವಂತ ಡ್ಯಾನಿಶ್ ಸಿದ್ದಿಕಿ ಕೂಡಾ ಸೇರಿದ್ದಾರೆ.

ಅವರೊಂದಿಗೆ ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ ಮತ್ತು ಅಮಿತ್ ದವೆ ಅವರಿಗೂ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.  ಭಾರತದಲ್ಲಿ ಕೊರೊನಾ ಕಾಲದಲ್ಲಿನ ಫೋಟೋಗಳಿಗಾಗಿ ಪುಲಿಟ್ಜರ್ ಪ್ರಶಸ್ತಿಯನ್ನು ನೀಡಲಾಗಿದೆ. ಪುಲಿಟ್ಜರ್ ಪ್ರಶಸ್ತಿ ಗೆದ್ದ ಚಿತ್ರಗಳು ಕೆಳಗಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಡ್ಯಾನಿಶ್ ಸಿದ್ದೀಖಿ

ಮೇ 19, 1983 ರಂದು ಜನಿಸಿದ ಡ್ಯಾನಿಶ್ ಸಿದ್ದಿಕಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್‌‌ ಆಗಿದ್ದಾರೆ. ಡ್ಯಾನಿಶ್ ಅವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಂತರ ಅವರು ಅಲ್ಲಿ ‘ಸಮೂಹ ಸಂವಹನ’ ವಿಷಯದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡಿದ್ದಾರೆ. ಅವರು ರಾಯಿಟರ್ಸ್ ಸೇರುವ ಮೊದಲು ಹಿಂದೂಸ್ತಾನ್ ಟೈಮ್ಸ್, ಟಿವಿ ಟುಡೆ ನೆಟ್‌ವರ್ಕ್‌ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟನ್ನು ದಾಖಲಿಸಿದ್ದ ಫೀಚರ್ ಫೋಟೋಗ್ರಫಿಗಾಗಿ 2018 ರ ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದರು.

ಡ್ಯಾನಿಶ್ ಸಿದ್ದೀಖಿ

2021 ರಲ್ಲಿ, ಪಾಕಿಸ್ತಾನದ ಗಡಿಯ ಸಮೀಪವಿರುವ ಸ್ಪಿನ್ ಬೋಲ್ಡಾಕ್‌ನಲ್ಲಿ ಅಫ್ಘಾನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಪಡೆಗಳ ನಡುವಿನ ಘರ್ಷಣೆಯನ್ನು ವರದಿ ಮಾಡುವಾಗ ಅವರು ಕೊಲ್ಲಲ್ಪಟ್ಟರು. ಸಿದ್ದಿಕಿ ಅವರು ಜರ್ಮನ್ ಪ್ರಜೆಯಾದ ತಮ್ಮ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.

2022 ರ ಪುಲಿಟ್ಜರ್‌ ಪ್ರಶಸ್ತಿ ಗೆದ್ದ ಅವರ ಚಿತ್ರಗಳು ಕೆಳಗಿನಂತಿವೆ

ಇದನ್ನೂ ಓದಿ: ತಾಲಿಬಾನಿಗಳಿಂದ ಹತರಾದ ದಾನಿಶ್ ಸಿದ್ದೀಕಿಗೆ ಮರಣೋತ್ತರವಾಗಿ ’ವರ್ಷದ ಪತ್ರಕರ್ತ’ ಪ್ರಶಸ್ತಿ

ಸನ್ನಾ ಇರ್ಷಾದ್ ಮಟ್ಟೂ

ಸನ್ನಾ ಇರ್ಷಾದ್ ಮಟ್ಟೂ ಕಾಶ್ಮೀರ ಮೂಲದ ಫೋಟೋ ಜರ್ನಲಿಸ್ಟ್ ಮತ್ತು ಸಾಕ್ಷ್ಯಚಿತ್ರ ಛಾಯಾಗ್ರಾಹಕಿಯಾಗಿದ್ದಾರೆ. ಅವರ ಚಿತ್ರಗಳು ಕಾಶ್ಮೀರದ ಭಯಂಕರ ಮಿಲಿಟರಿ ಪರಿಸರದ ಸ್ಪಷ್ಟ ಸಂಕೇತಗಳ ನಡುವಿನ ಉದ್ವೇಗವನ್ನು ಚಿತ್ರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

ಸನ್ನಾ ಇರ್ಷಾದ್ ಮಟ್ಟೂ

ಪ್ರಪಂಚದಾದ್ಯಂತದ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಅವರ ಕೆಲಸವನ್ನು ಪ್ರಕಟಿಸಲಾಗಿದೆ. ಅಲ್ಲದೆ ವಿವಿಧ ಪ್ರದರ್ಶನಗಳು ಮತ್ತು ಉತ್ಸವಗಳಲ್ಲೂ ಅವರ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಪ್ರಸ್ತುತ ಅವರು ಮಲ್ಟಿಮೀಡಿಯಾ ಪತ್ರಕರ್ತರಾಗಿ ರಾಯಿಟರ್ಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ.

2022 ರ ಪುಲಿಟ್ಜರ್‌ ಪ್ರಶಸ್ತಿ ಗೆದ್ದ ಅವರ ಚಿತ್ರ ಕೆಳಗಿದೆ

ಜೂನ್‌ 10, 2021 ರಂದು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಲಿಡ್ಡರ್‌ವಾಟ್‌ನಲ್ಲಿ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಶೀಲ್ಡ್ ಎಂಬ ಕೊರೊನಾವೈರಸ್ ಕಾಯಿಲೆಯ ಲಸಿಕೆಯನ್ನು ಕುರಿ ಕಾಯುವ ವ್ಯಕ್ತಿಗೆ ನೀಡುತ್ತಿದ್ದಾರೆ. (ಚಿತ್ರ: ಸನ್ನಾ ಇರ್ಷಾದ್ ಮಟ್ಟೂ)

ಇದನ್ನೂ ಓದಿ: ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ 

ಅದ್ನಾನ್ ಅಬಿದಿ 

ಅದ್ನಾನ್ ಅಬಿದಿ ಪುಲಿಟ್ಜರ್ ಪ್ರಶಸ್ತಿ-ವಿಜೇತ ಫೋಟೋ ಜರ್ನಲಿಸ್ಟ್ ಆಗಿದ್ದಾರೆ. ಅವರ ವೃತ್ತಿಜೀವನವು 1997 ರಲ್ಲಿ ಡಾರ್ಕ್ ರೂಂ ಸಹಾಯಕರಾಗಿ ಪ್ರಾರಂಭವಾಯಿತು. ಅದ್ನಾನ್ 2005 ರಲ್ಲಿ ರಾಯಿಟರ್ಸ್‌ ಸೇರುವ ಮೊದಲು ಪ್ಯಾನ್-ಏಷ್ಯಾ ನ್ಯೂಸ್ ಏಜೆನ್ಸಿ (ಪಾನಾ), ಇಂಡೋ ಫೋಟೋ ನ್ಯೂಸ್ ಮತ್ತು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ್ದಾರೆ.

ಅದ್ನಾನ್ ಅಬಿದಿ
ಅದ್ನಾನ್ ಅಬಿದಿ

ಅದ್ನಾನ್ ಛಾಯಾಗ್ರಹಣಕ್ಕಾಗಿ ಈಗಾಗಲೆ ಎರಡು ಪುಲಿಟ್ಜೆರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮೊದಲಿಗೆ 2018 ರಲ್ಲಿ ರೋಹಿಂಗ್ಯಾ ನಿರಾಶ್ರಿತರ ನಿರ್ಗಮನ ಮತ್ತು ಎರಡನೆ ಬಾರಿಗೆ 2020 ರಲ್ಲಿ ಹಾಂಗ್ ಕಾಂಗ್ ಪ್ರತಿಭಟನೆಗಳ ಚಿತ್ರಕ್ಕಾಗಿ ಅವರು ಪುಲಿಟ್ಜರ್‌ ಪ್ರಶಸ್ತಿ ಗೆದ್ದಿದ್ದಾರೆ. ಪ್ರಸ್ತುತ ನವದೆಹಲಿಯಲ್ಲಿ ನೆಲೆಸಿರುವ ಅವರು ಅಲ್ಲಿಂದಲೆ ರಾಯಿಟರ್ಸ್‌ಗಾಗಿ ಹಿರಿಯ ಛಾಯಾಗ್ರಾಹಕರಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾರ್ಯಯೋಜನೆಗಳ ಕೆಲಸಗಳನ್ನು ಮಾಡುತ್ತಿದ್ದಾರೆ.

2022 ರ ಪುಲಿಟ್ಜರ್‌ ಪ್ರಶಸ್ತಿ ಗೆದ್ದ ಅವರ ಚಿತ್ರಗಳು ಕೆಳಗಿನಂತಿವೆ

ಅಮಿತ್ ದವೆ

ಅಮಿತ್ ದವೆ ಅವರು ಮೂರು ದಶಕಗಳ ಅನುಭವ ಹೊಂದಿರುವ ಭಾರತೀಯ ಫೋಟೋ ಜರ್ನಲಿಸ್ಟ್. ಅವರ ವೃತ್ತಿಜೀವನವು ರಾಜ್ಯವೊಂದರ ನಿಯತಕಾಲಿಕೆಯೊಂದಿಗೆ ಛಾಯಾಗ್ರಾಹಕರಾಗಿ ಪ್ರಾರಂಭವಾಯಿತು. ನಂತರ ಅವರು ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ. ಅದರ ನಂತರ ಅವರು ದೇಶದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸೇರಿದ್ದಾರೆ. 2002 ರಲ್ಲಿ ಅಮಿತ್ ಅವರು ರಾಯಿಟರ್ಸ್ ಸೇರಿಕೊಂಡರು.

ಅಮಿತ್ ದೇವ್
ಅಮಿತ್ ದೇವ್

ಗಲಭೆಗಳು, ಗುಜರಾತ್‌ನಲ್ಲಿ ಭೂಕಂಪದ ನಂತರದ ಪರಿಣಾಮಗಳು, ಬರಗಾಲಗಳು ಮತ್ತು ದಕ್ಷಿಣ ಭಾರತದಲ್ಲಿ ಹಿಂದೂ ಮಹಾಸಾಗರದ ಸುನಾಮಿಯನ್ನು ಅವರು ವರದಿ ಮಾಡಿದ್ದಾರೆ. ಅವರು ಪ್ರಸ್ತುತ ಗುಜರಾತ್‌ನ ಪ್ರಮುಖ ನಗರವಾದ ಅಹಮದಾಬಾದ್‌ನಲ್ಲಿ ನೆಲೆಸಿದ್ದಾರೆ. ಅಲ್ಲಿಂದ ಅವರು ರಾಯಿಟರ್ಸ್‌ಗಾಗಿ ಸ್ಥಳೀಯ ಮತ್ತು ರಾಷ್ಟ್ರೀಯ ಸುದ್ದಿ ಕಾರ್ಯಯೋಜನೆಗಳಿಗೆ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮರಣೋತ್ತರ ಪುಲಿಟ್ಝರ್‌ ಪ್ರಶಸ್ತಿಗೆ ದಾನಿಶ್‌ ಸಿದ್ದಿಕಿ ಭಾಜನ

2022 ರ ಪುಲಿಟ್ಜರ್‌ ಪ್ರಶಸ್ತಿ ಗೆದ್ದ ಅವರ ಚಿತ್ರ ಕೆಳಗಿದೆ

ಏಪ್ರಿಲ್ 8, 2021 ರಂದು ಅಹಮದಾಬಾದ್‌ನ ಹೊರವಲಯದಲ್ಲಿರುವ ಕವಿತಾ ಗ್ರಾಮದ ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕರಿಗೆ ಕೊರೊನಾ ವೈರಸ್ ರೋಗ ಲಸಿಕೆ ಚಾಲನೆಯ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ತಮ್ಮ ಗುಡಿಸಲಿನೊಳಗಿನ ಮಹಿಳೆಯ ತಾಪಮಾನವನ್ನು ಪರಿಶೀಲಿಸುತ್ತಿರುವುದು. (ಅಮಿತ್ ದವೆ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...