ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅವರು ‘ಫೀಚರ್ ಫೋಟೋಗ್ರಫಿ-2022’ ವಿಭಾಗದಲ್ಲಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತದಲ್ಲಿ ಕೊರೊನಾ ಬಿಕ್ಕಟ್ಟಿನ ಕುರಿತ ಚಿತ್ರಕ್ಕಾಗಿ ದಿವಂಗತ ಫೋಟೊ ಜರ್ನಲಿಸ್ಟ್ ಡ್ಯಾನಿಶ್ ಸಿದ್ದಿಕಿ, ಅದ್ನಾನ್ ಅಬಿದಿ ಮತ್ತು ಅಮಿತ್ ದೇವ್ ಸೇರಿದ ರಾಯಿಟರ್ಸ್ ತಂಡದೊಂದಿಗೆ ಮಟ್ಟೂನ ಅವರು ಕೂಡಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವ ಸಂದರ್ಭ ನಡೆದ ಸಂಘರ್ಷದಲ್ಲಿ ಡ್ಯಾನಿಶ್ ಸಿದ್ದಿಕಿಯನ್ನು ಕೊಲ್ಲಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಅದ್ನಾನ್ ಅಬಿದಿ, ಸನ್ನಾ ಇರ್ಷಾದ್ ಮಟ್ಟೂ, ಅಮಿತ್ ದೇವ್ ಮತ್ತು ಅವರ ರಾಯಿಟರ್ಸ್ ಕುಟುಂಬದ ದಿವಂಗತ ಡ್ಯಾನಿಶ್ ಸಿದ್ದೀಕಿ ಅವರಿಗೆ ಅಭಿನಂದನೆಗಳು. #Pulitzer” ಎಂದು ಪುಲಿಟ್ಜರ್ ಟ್ವಿಟ್ಟರ್ನಲ್ಲಿ ಘೋಷಿಸಿದೆ.
Congratulations to @adnanabidi, @mattoosanna, @AmitDav46549614, the family and friends of the late @dansiddiqui and @Reuters. #Pulitzer pic.twitter.com/NGI0NiBsQT
— The Pulitzer Prizes (@PulitzerPrizes) May 9, 2022
ಸನ್ನಾ ಇರ್ಷಾದ್ ಮಟ್ಟೂ ಕಾಶ್ಮೀರ ಮೂಲದ ಫೋಟೋ ಜರ್ನಲಿಸ್ಟ್ ಮತ್ತು ಸಾಕ್ಷ್ಯಚಿತ್ರ ಛಾಯಾಗ್ರಾಹಕಿಯಾಗಿದ್ದಾರೆ. ಅವರ ಚಿತ್ರಗಳು ಕಾಶ್ಮೀರದ ಭಯಂಕರ ಮಿಲಿಟರಿ ಪರಿಸರದ ಸ್ಪಷ್ಟ ಸಂಕೇತಗಳ ನಡುವಿನ ಉದ್ವೇಗವನ್ನು ಚಿತ್ರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಪ್ರಪಂಚದಾದ್ಯಂತದ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಅವರ ಕೆಲಸವನ್ನು ಪ್ರಕಟಿಸಲಾಗಿದೆ. ಅಲ್ಲದೆ ವಿವಿಧ ಪ್ರದರ್ಶನಗಳು ಮತ್ತು ಉತ್ಸವಗಳಲ್ಲೂ ಅವರ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಪ್ರಸ್ತುತ ಅವರು ಮಲ್ಟಿಮೀಡಿಯಾ ಪತ್ರಕರ್ತರಾಗಿ ರಾಯಿಟರ್ಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ.
2020 ರಲ್ಲಿ ಕೂಡಾ ಮೂವರು ಕಾಶ್ಮೀರಿ ಫೋಟೋ ಜರ್ನಲಿಸ್ಟ್‌ಗಳಾದ ದಾರ್ ಯಾಸಿನ್, ಮುಖ್ತಾರ್ ಖಾನ್ ಮತ್ತು ಚನ್ನಿ ಆನಂದ್ ಅವರು ಪ್ರತಿಷ್ಠಿತ ಪುಲಿಟೈಜರ್ ಪ್ರಶಸ್ತಿಯನ್ನು ಗೆದ್ದಿದ್ದರು.
ಇದನ್ನೂ ಓದಿ: ಮರಣೋತ್ತರ ಪುಲಿಟ್ಝರ್ ಪ್ರಶಸ್ತಿಗೆ ದಾನಿಶ್ ಸಿದ್ದಿಕಿ ಭಾಜನ
ಸನ್ನಾ ಇರ್ಷಾದ್ ಮಟ್ಟೂ ಅವರ ಚಿತ್ರಗಳು ಹಲವಾರು ಅಂತರರಾಷ್ಟ್ರೀಯ ಪ್ರಕಟಣೆಗಳಲ್ಲಿ ಕಾಣಿಸಿಕೊಂಡಿದೆ. ಪುಲಿಟ್ಜರ್ ಪ್ರಶಸ್ತಿ ಗೆದ್ದ ಅವರ ಚಿತ್ರ ಕೆಳಗಿವೆ.

ಪುಲಿಟ್ಜರ್ ಪ್ರಶಸ್ತಿಯು ಪತ್ರಿಕೆ, ನಿಯತಕಾಲಿಕೆ, ಆನ್‌ಲೈನ್ ಪತ್ರಿಕೋದ್ಯಮ, ಸಾಹಿತ್ಯ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸಂಗೀತ ಸಂಯೋಜನೆಯಲ್ಲಿನ ಸಾಧನೆಗಳಿಗಾಗಿ ನೀಡುವ ಪ್ರಶಸ್ತಿಯಾಗಿದೆ. ಇದನ್ನು 1917 ರಲ್ಲಿ ಜೋಸೆಫ್ ಪುಲಿಟ್ಜರ್ ಅವರ ಹೆಸರಿನಲ್ಲಿ ಸ್ಥಾಪಿಸಲಾಯಿತು.