ಭಾನುವಾರ ಬೆಳಿಗ್ಗೆ ತೈಲ ಮಾರುಕಟ್ಟೆ ಕಂಪನಿಗಳು (OMC) ತಕ್ಷಣವೇ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಸುಮಾರು ₹102 ರಷ್ಟು ಹೆಚ್ಚಿಸಿವೆ. ಇದರೊಂದಿಗೆ ಬೆಂಗಳೂರಿನಲ್ಲಿ 19 ಕೆ.ಜಿ. ಸಿಲಿಂಡರ್ ಬೆಲೆ ರೂ.2,328.5 ರಿಂದ ರೂ.2,430.5 ಕ್ಕೆ ಏರಿಕೆಯಾಗಿದೆ. 47.5 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 6,073.5 ರೂ. ತಲುಪಿದೆ.
ನಿನ್ನೆಯ ಬೆಲೆ ಹೆಚ್ಚಳದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗದೆ ಹಾಗೆ ಉಳಿದ ಹಿನ್ನೆಲೆಯಲ್ಲಿ ಜನರು ತುಸು ನಿಟ್ಟುಸಿರು ಬಿಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾನುವಾರದ ಬೆಲೆ ಹೆಚ್ಚಳದೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2355.50 ರೂಗೆ ತಲುಪಿದ್ದು, ಈ ಹಿಂದೆ ಅದರ ದರ ಪ್ರತಿ ಸಿಲಿಂಡರ್‌ಗೆ 2253 ರೂ. ಇತ್ತು.
ಇದನ್ನೂ ಓದಿ: ವಾಣಿಜ್ಯ LPG ಸಿಲಿಂಡರ್ ಬೆಲೆ ಏಕಾಏಕಿ 250 ರೂ. ಏರಿಕೆ
ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ದರವನ್ನು ಪ್ರತಿ ಸಿಲಿಂಡರ್‌ಗೆ 2205 ರೂ. ನಿಂದ 2,307 ರೂ. ಗೆ ಹೆಚ್ಚಿಸಲಾಗಿದೆ. ಕೋಲ್ಕತ್ತಾದಲ್ಲಿ 2,351 ರೂ. ನಿಂದ 2,455 ರೂ.ಗೆ ಹೆಚ್ಚಿಸಲಾಗಿದೆ. ಚೆನ್ನೈನಲ್ಲಿ 2,406 ರೂ. ನಿಂದ 2,508 ರೂ.ಗೆ ಹೆಚ್ಚಿಸಲಾಗಿದೆ.
ಏತನ್ಮಧ್ಯೆ, ದೆಹಲಿಯಲ್ಲಿ ಈಗ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 655 ರೂ.ಗೆ ತಲುಪಿದೆ.
ಉಕ್ರೇನ್ ಬಿಕ್ಕಟ್ಟು ಮತ್ತು ಪೂರೈಕೆ ಆತಂಕದ ನಡುವೆ ಜಾಗತಿಕ ಇಂಧನ ಬೆಲೆಗಳ ಹೆಚ್ಚಳದ ಹಿನ್ನೆಲೆಯಲ್ಲಿ ಬೆಲೆಗಳಲ್ಲಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರ: ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಮಾಜಿ ಸಂಸದ ನಿಲೇಶ್ ರಾಣೆ ವಿರುದ್ಧ FIR
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಮಾರ್ಚ್ 22 ರಂದು ಸಬ್ಸಿಡಿ ಹೊಂದಿರುವ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ 50 ರೂ. ಏರಿಕೆ ಮಾಡಲಾಗಿತ್ತು. ಜೊತೆಗೆ ಎಪ್ರಿಲ್ 1 ರಂದು 19 ಕೆಜಿ ಯ ವಾಣಿಜ್ಯ LPG ಸಿಲಿಂಡರ್ ಬೆಲೆ ಏಕಾಏಕಿ 250 ರೂ. ಏರಿಕೆ ಮಾಡಲಾಗಿತ್ತು.


