Homeಮುಖಪುಟಸುಲಿಗೆ ಆರೋಪ: ರವಿ ಡಿ.ಚನ್ನಣ್ಣವರ್‌ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳ ಮೇಲೆ ದೂರು

ಸುಲಿಗೆ ಆರೋಪ: ರವಿ ಡಿ.ಚನ್ನಣ್ಣವರ್‌ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳ ಮೇಲೆ ದೂರು

ರವಿ ಡಿ.ಚನ್ನಣ್ಣವರ್‌ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ಹಣ ಬೇಡಿಕೆ ಇಟ್ಟಿದ್ದರು ಎಂದು ದೂರು ನೀಡಲಾಗಿದೆ. ಈ ಕುರಿತು ‘ದಿ ಫೈಲ್‌.ಇನ್’ ವಿಸ್ತೃತವಾಗಿ ವರದಿ ಮಾಡಿದೆ.

- Advertisement -

ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳ ಮೇಲೆ ಸುಲಿಗೆ ಆರೋಪ ಬಂದಿದ್ದು, ದೂರು ಕೂಡ ದಾಖಲಾಗಿರುವ ಸಂಗತಿ ಬಯಲಾಗಿದೆ.

ಈ ಕುರಿತು ‘ದಿ ಫೈಲ್‌.ಇನ್‌‌’ ವಿಸ್ತೃತವಾಗಿ ವರದಿ ಮಾಡಿದೆ. “ಕ್ರಷರ್‌ ಉದ್ಯಮಿ ಸೇರಿ ಹಲವರಿಂದ 3.96 ಕೋಟಿ ರೂ. ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾದರಿಸಿ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸ್‌ ವರಿಷ್ಠಾಧಿಕಾರಿಗಳು ಆರೋಪಿಗಳಿಂದಲೇ 50 ಲಕ್ಷ ರೂ. ವಸೂಲಿ ಮಾಡಿ ದೂರುದಾರ ಮಂಜುನಾಥ್‌ ಎಂಬವರಿಗೆ ಅನ್ಯಾಯ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿದ್ದಾರೆ” ಎಂಬುದು ವರದಿಯಲ್ಲಿ ತಿಳಿದುಬಂದಿದೆ.

“ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸುವುದು, ದೂರುದಾರರ ಪ್ರತಿಸ್ಪರ್ಧಿ ವಿರೋಧಿಗಳ ಜತೆ ಶಾಮೀಲಾಗುವುದು, ಭ್ರಷ್ಟಾಚಾರ ಮತ್ತು ಲಂಚಕ್ಕೆ ಬೇಡಿಕೆ ಇಡುವುದು, ಅಕ್ರಮವಾಗಿ ಬಂಧನದಲ್ಲಿರಿಸುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರವು ವಾರ್ಷಿಕ ವರದಿ ಸಿದ್ಧಪಡಿಸಿದೆ. ಈ ಬೆನ್ನಲ್ಲೇ ರವಿ ಡಿ.ಚನ್ನಣ್ಣನವರ್‌ ಸೇರಿ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಮುಖ್ಯಕಾರ್ಯದರ್ಶಿಗೆ ನೀಡಿರುವ ದೂರು ಮುನ್ನಲೆಗೆ ಬಂದಿದೆ” ಎಂದು ದಿ ಫೈಲ್ ವರದಿ ಹೇಳಿದೆ.

2021ರ ಸೆಪ್ಟೆಂಬರ್‌ 28ರಂದು ಸಲ್ಲಿಕೆಯಾದ ದೂರಿನನ್ವಯ ಕ್ರಮ ಜರುಗಿಸಲು ಒಳಾಡಳಿತ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್‌  ಸೂಚಿಸಿದ್ದರು. ಹಣ ವರ್ಗಾವಣೆ ಸಂಬಂಧಿಸಿಂತೆ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಅವರು ನಡೆಸಿರುವ ಸಂಭಾಷಣೆಯ ಆಡಿಯೊ ಕೂಡ ಇದೆ ಎಂದು ದೂರುದಾರರು ತಿಳಿಸಿದ್ದಾರೆ. ದೂರು ಸಲ್ಲಿಕೆಯಾಗಿ ಮೂರು ತಿಂಗಳಾದರೂ ಕ್ರಮ ಜರುಗಿಸಿಲ್ಲ ಎನ್ನಲಾಗಿದೆ.

“ನನಗೀಗ ಯಾವುದೇ ದಾರಿ ಕಾಣಿಸುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನಗೆ ಹೆಣ್ಣು ಮಗಳಿದ್ದಾಳೆ. ನಾನು ನನ್ನ ಜವಾಬ್ದಾರಿಯಿಂದ ಪಲಾಯನ ಮಾಡಲು ಮನಸ್ಸು ಒಪ್ಪುತ್ತಿಲ್ಲ. ನಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಧ್ವನಿ ಮುದ್ರಣ, ವಾಟ್ಸಾಪ್‌ ಸಂದೇಶಗಳು ನನ್ನ ಬಳಿ ಇವೆ. ತನಿಖೆಯ ಸಂದರ್ಭದಲ್ಲಿ ಇವೆಲ್ಲವನ್ನು ಮುಂದಿಡುತ್ತೇನೆ. ವಿಶೇಷ ತನಿಖಾ ತಂಡ ಅಥವಾ ಸಿಬಿಐ ಪ್ರಕರಣವನ್ನು ತನಿಖೆ ಮಾಡಬೇಕು” ಎಂದು ದೂರಿನಲ್ಲಿ ಮಂಜುನಾಥ್‌ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಹಣ ಬೇಡಿಕೆಯನ್ನು ಪೊಲೀಸ್ ಅಧಿಕಾರಿಗಳು ಇರಿಸಿದ್ದರು. ದುಡ್ಡು ವಸೂಲಿಯಾದ ಬಳಿಕ ಎಫ್‌ಆರ್‌ಐ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ನನ್ನ ಮನೆ ಬ್ಯಾಂಕ್‌ನಿಂದ ಹರಾಜಿಗೆ ಬಂದಿದ್ದರೂ ಪೊಲೀಸ್ ಅಧಿಕಾರಿಗಳಿಗೆ ಹಣ ನೀಡಿದ್ದೇನೆ. ರವಿ ಡಿ.ಚೆನ್ನಣ್ಣನವರ್‌ಗೆ 25 ಲಕ್ಷ ರೂ., ಡಿವೈಎಸ್‌ಪಿಗೆ 15 ಲಕ್ಷ ರೂ., ಡಿವೈಎಸ್‌ಪಿ ಕಚೇರಿಯ ಮತ್ತೊಬ್ಬ ಅಧಿಕಾರಿಗೆ 10 ಲಕ್ಷ ರೂ. ನೀಡಲಾಗಿದೆ ಎಂದು ಆರೋಪಿ ಅಶೋಕ್‌ ಎಂಬಾತ ಕಂದಪ್ಪ ಮತ್ತು ಸಂಪತ್‌ ಎಂಬವರ ಮುಂದೆ ಬಾಯ್ಬಿಟ್ಟಿದ್ದಾರೆ’ ಎಂದು ದೂರುದಾರ ಮಂಜುನಾಥ್ ಅವರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗುವ ಮುನ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 5 ಲಕ್ಷ ರೂ. ಬೇಡಿಕೆ ಇರಿಸಿದ್ದರು. ಹೀಗಾಗಿ ನಾಲ್ಕು ಲಕ್ಷ ರೂ.ಗಳನ್ನು ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಎಂಬವರ ಸೂಚನೆ ಮೇರೆಗೆ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಶುಭಾ/ಅನಿತಾ ಎಂಬವರಿಗೆ ತಲುಪಿಸಲಾಗಿದೆ. ಹೀಗೆ ವಿವಿಧ ಅಧಿಕಾರಿಗಳಿಗೆ ಮುಂದೆಯೂ ನೀಡಲಾದ ಹಣದ ವಿವರಗಳನ್ನು ದೂರುದಾರರು ಹಂಚಿಕೊಂಡಿದ್ದಾರೆ.

ನಂತರದಲ್ಲಿ 12 ಆರೋಪಿಗಳ ಪೈಕಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇಷ್ಟೆಲ್ಲ ಆದ ಮೇಲೆ ಆರೋಪಿ ಅಶೋಕ್‌ ಎಂಬವರೊಂದಿಗೆ ರವಿ ಡಿ.ಚೆನ್ನಣ್ಣ ಹಾಗೂ ಡಿವೈಎಸ್‌ಪಿ ಮಹದೇವಪ್ಪ ಶಾಮೀಲಾಗಿ ತನಿಖೆಯಿಂದ ಆರೋಪಿ ಕೈತಪ್ಪಿಸಿಕೊಳ್ಳಲು ನೆರವಾಗಿದ್ದಾರೆ ಎಂದು ಮಂಜುನಾಥ್‌ ಅವರು ದೂರಿದ್ದಾರೆ. ವಂಚನೆ ಪ್ರಕರಣದ ವಿವರಗಳನ್ನು ದಿ ಫೈಲ್‌ ಮಾಡಿದೆ.


ಇದನ್ನೂ ಓದಿರಿ: ಜನರ ಹಿತದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆ ತಾತ್ಕಾಲಿಕ ಸ್ಥಗಿತ: ಸಿದ್ದರಾಮಯ್ಯ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

 1. ಮೇಕೆದಾಟು ಯೋಜನೆ ವಿರುದ್ಧ ಎಲ್ಲರೂ ದ್ವನಿ ಎತ್ತಬೇಕು ಏಕೆಂದರೆ , ಅದರಿಂದ ಪರಿಸರ ನಾಶವಾಗುತ್ತೆ ಅನೇಕ ಪಕ್ಷಿಗಳು ಗುಂಪುಗೂಡುತ್ತವೆ ,ಅಲ್ಲಿ ಬಹುತೇಕವಾಗಿ ಹೆಚ್ಚು ಅನೆಗಳಿವೆ , ಎಲ್ಲಾ ಪ್ರಾಣಿ ಪಕ್ಷಿಗಳಿಗೆ ,ತೊಂದರೆ ಆಗುತ್ತದೆ ,
  ಕಾಡು ಹುಳಿಸಿ ನಾಡು ಬೆಳಸಿ
  ಜೈ ಕರ್ನಾಟಕ ಮಾತೆ…..

 2. ರವಿ ಡಿ. ಚನ್ನಣ್ಣನವರ್ ಬೆಂಗಳೂರು ಜಿಲ್ಲೆಯ ಎಸ್.ಪಿ. ಆಗಿದ್ದಾಗ ಅನೇಕ ರೌಡಿ ಶೀಟರ್ಗಳಿಂದ ಹಣ ಪಡೆದು, ಅವರನ್ನು ರೌಡಿ ಶೀಟಿನಿಂದ ತೆಗೆದಿದ್ದಾರೆ ಎಂಬ ಆರೋಪವೂ ಇದೆ.

 3. ನಾವೋ ಯಾರನ್ನು ಸೂಪರ್ ಪೊಲೀಸ್ ಅಧಿಕಾರಿಗಳು ಅಂತ ಹೇಳುತ್ತೇವೆ ಅವರೇ ನಿಜವಾದ ದರೋಡೆ ಕೊರಾರು .ಇದು ಕಟು ಸತ್ಯ.

 4. ನಿಜಾವಾಗಿ ಪೋಲಿಸ್ ರಲ್ಲಿ ಯಾರನ್ನು ಕೂಡ ನಂಬಬೇಡಿ ನೋಡುವುದಕ್ಕೇ ಮಾತ್ರಾ ಸಿಂಗಂ ತಾರ ಕಣಿಸುತ್ತಾರೆ
  ನನ್ನ ಪ್ರಾಕರ ನಮ್ಮ ರಾಜ್ಯದಲ್ಲಿ ಪೋಲಿಸ್ ರ ಅವಶ್ಯಕತೆ ಇಲ್ಲ ಮೇಡಮ್ ಯಾಕೆ ಅಂದ್ರೆ
  ಅವ್ರು ನಮ್ಮ ರಕ್ಷಣೆ ಮಾಡುತ್ತಿಲ್ಲ
  ನಮ್ಮನ್ನು ವಂಚನೆ ಮಾಡುತ್ತಾರೆ
  ಇವರಿಗೆ ಸಂಬಳ ಕೋಡುವುದಿಲ್ಲ ಅನ್ನೂವ
  ರೀತಿಯಲ್ಲಿ ನಾವು ಬೈಕ್ ನಲ್ಲಿ ಹೊಗುವಗ
  ನಮ್ಮ ಅತ್ತಿರಾ ಕೇವಲ 50₹ ರೂಪಯಿಗೆ ಸೂಲಿಗೆ ಮಾಡುತ್ತಾರೆ…….
  ಇದು ನನ್ನ ಅನುಭವದ ಮತ್ತು

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial