Homeಮುಖಪುಟಎರಡು ಸಮುದಾಯದ ನಡುವೆ ಘರ್ಷಣೆ: 2000 ಜನರ ಮೇಲೆ ಎಫ್‌ಐಆರ್‌‌!

ಎರಡು ಸಮುದಾಯದ ನಡುವೆ ಘರ್ಷಣೆ: 2000 ಜನರ ಮೇಲೆ ಎಫ್‌ಐಆರ್‌‌!

- Advertisement -
- Advertisement -

ಗುಜರಾತ್‌ನಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 2,000 ಅಪರಿಚಿತ ಜನರ ವಿರುದ್ದ ಗುಜರಾತ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಘಟನೆಯಲ್ಲಿ ಆರು ಪೊಲೀಸರು ಮತ್ತು ಸುಮಾರು 10 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಜರಾತ್‌ನ ಗಿರ್‌ ಸೋಮನಾಥದ ಜಿಲ್ಲೆಯ ಉನಾ ತಾಲ್ಲೂಕಿನ ನವ ಬಂದರ್‌ ಎಂಬ ಗ್ರಾಮದಲ್ಲಿ ಘಟನೆ ನಡೆಸಿದ್ದು, ಎಫ್‌ಐಆರ್‌ನಲ್ಲಿ 47 ಜನರ ಹೆಸರನ್ನೂ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಸೆಪ್ಟಂಬರ್‌ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!

ಹಳ್ಳಿಯ ಜೆಟ್ಟಿಯೊಂದರಲ್ಲಿ ಎರಡು ಮೀನುಗಾರಿಕಾ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಈ ಕಾರಣಕ್ಕಾಗಿ ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆದಿದ್ದು, ನಂತರ ಅದು ಘರ್ಷಣೆಗೆ ತಿರುಗಿದೆ ಎಂದು ಅವರು ವಿವರಿಸಿದ್ದಾರೆ.

ಎರಡು ಸಮುದಾಯಗಳಿಗೆ ಸೇರಿದ ಸುಮಾರು 1,500 ರಿಂದ 2,000 ಜನರು ದೊಣ್ಣೆ, ಕತ್ತಿ, ಕಬ್ಬಿಣ ಮತ್ತು ಪ್ಲಾಸ್ಟಿಕ್ ಪೈಪುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲದೆ, ಜನರ ಗುಂಪಿನ ಮೇಲೆ ಕಲ್ಲು ಮತ್ತು ಖಾಲಿ ಗಾಜಿನ ಬಾಟಲಿಗಳನ್ನು ಸಹ ಎಸೆದಿದ್ದಾರೆ ಎಂದು ನವ ಬಂದರ್ ಸಾಗರ ಪೊಲೀಸ್‌ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದಾಗ, ಗಲಭೆಕೋರರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದು, ಈ ವೇಳೆ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾಟ್, ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಕೊರೊನಾ ಲಸಿಕೆ ಪಡೆದ ವ್ಯಕ್ತಿಯ ಶ್ವಾಸಕೋಶದ ಸಿಟಿ ಸ್ಕ್ಯಾನ್ ಚಿತ್ರವಲ್ಲ

ಘರ್ಷಣೆಗೆ ಸಂಬಂಧಿಸಿದಂತೆ, ಐಪಿಸಿ ಸೆಕ್ಷನ್ಸ್ 307 (ಕೊಲೆ ಯತ್ನ), 332, 333 (ಸ್ವಯಂಪ್ರೇರಣೆಯಿಂದ ಸರ್ಕಾರಿ ನೌಕರನಿಗೆ ತೀವ್ರ ನೋವನ್ನುಂಟುಮಾಡುವುದು), 337, 338 (ನಿರ್ಲಕ್ಷ್ಯದಿಂದ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವುದು), 143 (ಕಾನೂನುಬಾಹಿರ ಸಭೆ), 147 ಮತ್ತು 148 (ಗಲಭೆ) ಅಡಿಯಲ್ಲಿ ಭಾನುವಾರ ತಡರಾತ್ರಿ ಎರಡೂ ಸಮುದಾಯಗಳ 47 ಜನರ ಹೆಸರು ಸೇರಿದಂತೆ 1,500 ರಿಂದ 2,000 ಅಪರಿಚಿತ ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಘರ್ಷಣೆಯಲ್ಲಿ ಭಾಗಿಯಾಗಿದ್ದ ಹಲವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘರ್ಷಣೆಯ ಸಂದರ್ಭದಲ್ಲಿ ಹತ್ತಿರದ ಮೂರು ಪೊಲೀಸ್ ಠಾಣೆಗಳಾದ ಉನಾ, ಗಿರ್ ಗಡಾಡಾ ಮತ್ತು ಕೊಡಿನಾರ್ ಮತ್ತು ಸ್ಥಳೀಯ ಅಪರಾಧ ಶಾಖೆ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಸಿಬ್ಬಂದಿಗಳನ್ನು ಒಳಗೊಂಡ ದೊಡ್ಡ ಪೊಲೀಸ್ ತಂಡವು ಜನಸಮೂಹವನ್ನು ನಿಯಂತ್ರಿಸಲು ಘರ್ಷಣೆಯ ಸ್ಥಳಕ್ಕೆ ಧಾವಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ಕೊರೊನಾ ಲಸಿಕೆ ಪಡೆದ ವ್ಯಕ್ತಿಯ ಶ್ವಾಸಕೋಶದ ಸಿಟಿ ಸ್ಕ್ಯಾನ್ ಚಿತ್ರವಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...