ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ವ್ಯಕ್ತಿಯ ಶ್ವಾಸಕೋಶ ಮತ್ತು ಲಸಿಕೆ ತೆಗೆದುಕೊಳ್ಳದ ಕೊರೊನಾ ಸೋಂಕಿತ  ರೋಗಿಯ CT ಸ್ಕ್ಯಾನ್ ವರದಿಗಳ ದೃಶ್ಯಗಳು ಎಂದು ಹೇಳಿಕೊಳ್ಳುವ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.

ಆರೋಗ್ಯಯುತ ಸ್ಪಷ್ಟ ಶ್ವಾಸಕೋಶವನ್ನು ಹೊಂದಿರುವ ಎಡಭಾಗದಲ್ಲಿರುವ ಚಿತ್ರವನ್ನು ಲಸಿಕೆ ತೆಗೆದುಕೊಂಡಿರುವ ವ್ಯಕ್ತಿಯ ಸಿಟಿ ಸ್ಕ್ಯಾನ್ ವರದಿ ಎಂದು ಹೇಳಲಾಗಿದೆ. ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ, ಜನರು ಸಾಧ್ಯವಾದಷ್ಟು ಬೇಗ ಲಸಿಕೆ ಪಡೆಯಬೇಕು ಎಂದು ಹಲವು ಮಂದಿ ಪೋಸ್ಟ್ ಶೇರ್‌ ಮಾಡಿದ್ದಾರೆ. ಹಾಗಾದರೇ ಈ ಪೋಸ್ಟ್‌ನಲ್ಲಿ ಹೇಳಿರುವುದು ಸರಿಯೇ, ತಪ್ಪು ಮಾಹಿತಿಯೇ ಎಂಬುದನ್ನು  ಪರಿಶೀಲಿಸೋಣ.

ಕನ್ನಡ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿದೆ.

ಪೋಸ್ಟ್‌ನಲ್ಲಿ ಹಂಚಲಾದ ಫೋಟೋವನ್ನು ಗೋಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ನೋಡಿದಾಗ, ಏಪ್ರಿಲ್ 2020 ರಲ್ಲಿ ಪ್ರಕಟವಾದ ಲೇಖನದಲ್ಲಿ ಎರಡು ಸಿಟಿ ಸ್ಕ್ಯಾನ್ ವರದಿಗಳಲ್ಲಿ ಇದೇ ರೀತಿಯ ಫೋಟೋ ಇರುವುದು ಕಂಡುಬರುತ್ತದೆ. ಆದರೆ, ಏಪ್ರಿಲ್ 2020 ರಲ್ಲಿ, ಕೊರೊನಾ ವೈರಸ್‌ಗೆ ಲಸಿಕೆ ಲಭ್ಯವಿರಲಿಲ್ಲ.

ಈ ಲೇಖನದ ಪ್ರಕಾರ, ಈ ಸಿಟಿ ಸ್ಕ್ಯಾನ್ ವರದಿ ಹೋಲಿಕೆ ಚಿತ್ರವು ಸಂಶೋಧನಾ ಅಧ್ಯಯನಕ್ಕೆ ಸಂಬಂಧಿಸಿದೆ, ಇದು ಸಿಟಿ ಸ್ಕ್ಯಾನ್‌ಗಳನ್ನು ಬಳಸಿಕೊಂಡು ಕೊರೊನಾ ಸೋಂಕಿನ ವ್ಯಾಪ್ತಿಯನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿದೆ.

ಸಿಟಿ ಸ್ಕ್ಯಾನ್‌ಗಳನ್ನು ಬಳಸಿಕೊಂಡು ಕೊರೊನಾ ವೈರಸ್ ವ್ಯಾಪ್ತಿಯನ್ನು ಕಂಡುಹಿಡಿಯಲು ವ್ಯಾಂಕೋವರ್ ಜನರಲ್ ಆಸ್ಪತ್ರೆ, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ವ್ಯಾಂಕೋವರ್ ಕೋಸ್ಟಲ್ ಆರೋಗ್ಯ ಸಂಶೋಧನಾ ಸಂಸ್ಥೆಯ ಸಂಶೋಧಕರು ಮತ್ತು ವಿಕಿರಣಶಾಸ್ತ್ರಜ್ಞರು ಈ ಸಂಶೋಧನಾ ಅಧ್ಯಯನವನ್ನು ನಡೆಸಿದ್ದಾರೆ.

ಈ ಸಂಶೋಧನೆಯ ಕುರಿತು ಇನ್ನೂ ಹೆಚ್ಚು ವಿವರಗಳನ್ನು ಹುಡುಕಿದಾಗ, ’ದಿ ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ’ ವೆಬ್‌ಸೈಟ್‌ನಲ್ಲಿ ಮತ್ತಷ್ಟು ಮಾಹಿತಿ ದೊರೆತಿದೆ. CT ಸ್ಕ್ಯಾನ್‌ಗಳನ್ನು ಬಳಸಿಕೊಂಡು ಕೋವಿಡ್ ವೈರಸ್ ಅನ್ನು ಕಂಡುಹಿಡಿಯುವ ಸಂಶೋಧನಾ ಅಧ್ಯಯನದಲ್ಲಿ ಇದೇ ರೀತಿಯ CT ಸ್ಕ್ಯಾನ್ ವರದಿಗಳ ಹೋಲಿಕೆ ಚಿತ್ರವನ್ನು ಪ್ರಕಟಿಸಲಾಗಿದೆ.

ಸಿಟಿ ಸ್ಕ್ಯಾನ್‌ಗಳನ್ನು ಬಳಸಿಕೊಂಡು ಕೋವಿಡ್ ವೈರಸ್ ಅನ್ನು ಪತ್ತೆಹಚ್ಚುವ ಬಗ್ಗೆ ತಮ್ಮ ಸಂಶೋಧನಾ ಅಧ್ಯಯನವನ್ನು ವಿವರಿಸುವಾಗ ವ್ಯಾಂಕೋವರ್ ಕೋಸ್ಟಲ್ ಹೆಲ್ತ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಹ ತಮ್ಮ ವೆಬ್‌ಸೈಟ್‌ನಲ್ಲಿ ಇದೇ ಚಿತ್ರವನ್ನು ಪ್ರಕಟಿಸಿದೆ.

ಕೊರೊನಾ ಸೋಂಕಿಗೆ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪೋಸ್ಟ್ ಹಂಚಿಕೊಳ್ಳಲಾಗುತ್ತಿದ್ದು, ಇದು ಈ ಸಮಯದ ಅವಶ್ಯಕತೆಯಾಗಿದೆ, ಅಷ್ಟೇ. ಆದರೆ, ಈ ಚಿತ್ರವು ಕೊರೊನಾ ಲಸಿಕೆ ಹಾಕಿಸಿಕೊಂಡ ವ್ಯಕ್ತಿಯ ಶ್ವಾಸಕೋಶವನ್ನು ಪ್ರತಿನಿಧಿಸುವುದಿಲ್ಲ. ಈ ಪೋಸ್ಟ್ ಹಂಚಿಕೊಳ್ಳುವುದರಿಂದಾಗಿ ಕೊರೊನಾ ಸೋಂಕಿತ ವ್ಯಕ್ತಿಗಳು ಈ ಚಿತ್ರಗಳನ್ನು ನೋಡುವಾಗ ಆತಂಕಕ್ಕೆ ಒಳಗಾಗುವ ಸಂಭವವಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಸಿಟಿ ಸ್ಕ್ಯಾನ್ ವರದಿಗಳು ಸಿಟಿ ಸ್ಕ್ಯಾನ್‌ಗಳನ್ನು ಬಳಸಿಕೊಂಡು ಕೊರೊನಾ ವೈರಸ್ ಅನ್ನು ಪತ್ತೆಹಚ್ಚುವ ಸಂಶೋಧನಾ ಅಧ್ಯಯನಕ್ಕೆ ಸಂಬಂಧಿಸಿವೆ, ಕೊರೊನಾ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿಲ್ಲ.


ಇದನ್ನೂ ಓದಿ: ‘ಕಾಂಗ್ರೆಸ್‌ ಟೂಲ್‌ಕಿಟ್‌ ಎಕ್ಸ್‌ಪೋಸ್ಡ್‌‌’ ಎಂದು ನಕಲಿಯನ್ನು ಹಂಚಿದ ಇಡೀ ‘ಬಿಜೆಪಿ ಪರಿವಾರ’!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here