Homeಕರೋನಾ ತಲ್ಲಣತಮಿಳುನಾಡು: ಮೇ 24 ರ ನಂತರವು ಒಂದು ವಾರ ಕಠಿಣ ಲಾಕ್‌ಡೌನ್‌

ತಮಿಳುನಾಡು: ಮೇ 24 ರ ನಂತರವು ಒಂದು ವಾರ ಕಠಿಣ ಲಾಕ್‌ಡೌನ್‌

- Advertisement -
- Advertisement -

ಮೇ 24 ರ ನಂತರವು ಒಂದು ವಾರ ರಾಜ್ಯದಲ್ಲಿ ಯಾವುದೇ ರಿಯಾಯಿತಿಗಳಿಲ್ಲದೆ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ಪ್ರಕಟಿಸಿದ್ದಾರೆ.

ಈ ಕಠಿಣ ಲಾಕ್‌ಡೌನ್‌ಗೆ ಸಾರ್ವಜನಿಕರು ತಮ್ಮನ್ನು ಸಿದ್ಧಪಡಿಸಿಕೊಳ್ಳಲು, ಇಂದು (ಶನಿವಾರ) ರಾತ್ರಿ 9 ಗಂಟೆಯವರೆಗೆ ಎಲ್ಲಾ ಅಂಗಡಿಗಳನ್ನು ತೆರೆಯಲಾಗುತ್ತದೆ. ಅಂತೆಯೇ, ಎಲ್ಲಾ ಅಂಗಡಿಗಳು ಭಾನುವಾರ (ಮೇ 23) ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸಬಹುದು. ತಮ್ಮ ಊರುಗಳಿಗೆ ತೆರಳುತ್ತಿರುವವರ ಹಿತದೃಷ್ಟಿಯಿಂದ ಶನಿವಾರ ಮತ್ತು ಭಾನುವಾರ ಖಾಸಗಿ ಮತ್ತು ಸರ್ಕಾರಿ ಬಸ್‌ಗಳನ್ನು ಓಡಿಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಠಿಣ ಲಾಕ್‌ಡೌನ್ ಸಮಯದಲ್ಲಿ ಔಷಧಾಲಯಗಳು, ಸಿದ್ದೌಷಧ ಅಂಗಡಿಗಳು, ಪಶುವೈದ್ಯಕೀಯ ಔಷಧಾಲಯಗಳು, ಹಾಲು ಸರಬರಾಜು, ಕುಡಿಯುವ ನೀರು ಸರಬರಾಜು ಮತ್ತು ಪತ್ರಿಕೆಗಳ ಸರಬರಾಜನ್ನು ಮಾತ್ರ ಅನುಮತಿಸಲಾಗುತ್ತದೆ.

ಇದನ್ನೂ ಓದಿ: ಮೇ 24 ರೊಳಗೆ ಭಾರತಕ್ಕೆ ಅಪ್ಪಳಿಸಲಿದೆ ‘ಯಾಸ್‌ ಚಂಡಮಾರುತ’ – ಹವಾಮಾನ ಇಲಾಖೆ ಎಚ್ಚರಿಕೆ

ಚೆನ್ನೈನ ತೋಟಗಾರಿಕೆ ಇಲಾಖೆಯ ಮೂಲಕ ವಾಹನಗಳಲ್ಲಿ ಎಲ್ಲಾ ಜಿಲ್ಲೆಗಳಿಗೆ ತರಕಾರಿ ಮತ್ತು ಹಣ್ಣುಗಳನ್ನು ಸಾರ್ವಜನಿಕರಿಗೆ ಸರಬರಾಜು ಮಾಡಲಾಗುವುದು.

ಅಗತ್ಯ ಸೇವೆಗಳ ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸಲಿವೆ:

ಖಾಸಗಿ ಉದ್ಯಮಗಳು, ಬ್ಯಾಂಕುಗಳು, ವಿಮಾ ಕಂಪನಿಗಳು ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ನೌಕರರು ಮನೆಯಿಂದಲೇ ಕೆಲಸ ಮಾಡಲು ಕೋರಲಾಗಿದೆ.

ಇ-ಕಾಮರ್ಸ್ ಘಟಕಗಳು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸಬಹುದು.

ಬೆಳಿಗ್ಗೆ 6 ರಿಂದ 10 ರ ನಡುವಿನ ಹೋಟೆಲ್‌ಗಳಲ್ಲಿ ಟೇಕ್‌ಅವೇ ಸೇವೆಗಳನ್ನು ಮಾತ್ರ ಅನುಮತಿಸಲಾಗುತ್ತದೆ. ಮಧ್ಯಾಹ್ನ 12 ರಿಂದ 3ರ ವರೆಗೆ; ಸಂಜೆ 6 ರರಿಂದ 9ರ ಸಮಯದಲ್ಲಿ ಸ್ವಿಗ್ಗಿ ಮತ್ತು ಜೊಮಾಟೊದಂತಹ ಸಂಸ್ಥೆಗಳು ಆಹಾರವನ್ನು ತಲುಪಿಸಬಹುದಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೊರೊನಾ ಮುಕ್ತ ಭಾರತಕ್ಕಾಗಿ ನನ್ನ ಎಲ್ಲಾ ಸಂಪತ್ತನ್ನು ವ್ಯಯಿಸುತ್ತೇನೆ ಎಂದು ರತನ್ ಟಾಟಾ ಹೇಳಿದ್ದರೆ

ಪೆಟ್ರೋಲ್ ಮತ್ತು ಡೀಸೆಲ್ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಎಟಿಎಂ ಮತ್ತು ಸಂಬಂಧಿತ ಸೇವೆಗಳು ಲಭ್ಯವಿರುತ್ತವೆ. ಕೃಷಿ ಉತ್ಪನ್ನಗಳು ಮತ್ತು ಇನ್ಪುಟ್ ವಸ್ತುಗಳ ಸಾಗಣೆಗೆ ಅವಕಾಶ ನೀಡಲಾಗುವುದು. ಅಗತ್ಯ ಸರಕುಗಳನ್ನು ಸಾಗಿಸುವ ಸರಕು ವಾಹನಗಳಿಗೆ ಅವಕಾಶ ನೀಡಲಾಗುವುದು.

ಇ-ನೋಂದಣಿ ಮಾಡಿದವರಿಗೆ ಅಂತ್ಯ ಸಂಸ್ಕಾರದ ವಿಧಿಗಳಿಗೆ ಹಾಜರಾಗಲು ಮಾತ್ರ ಅಂತರ ಜಿಲ್ಲೆಯ ಪ್ರಯಾಣವನ್ನು ಅನುಮತಿಸಲಾಗುತ್ತದೆ. ವೈದ್ಯಕೀಯ ಕಾರಣಕ್ಕಾಗಿ ಜಿಲ್ಲೆಯೊಳಗೆ ಪ್ರಯಾಣಿಸಲು ಇ-ನೋಂದಣಿ ಅಗತ್ಯವಿರುವುದಿಲ್ಲ.

ಪತ್ರಿಕೆ ಮತ್ತು ಮಾಧ್ಯಮ ಕಾರ್ಯನಿರ್ವಹಿಸಬಹುದು. ನಿರಂತರ ಪ್ರಕ್ರಿಯೆಯ ಕೈಗಾರಿಕೆಗಳು, ಅಗತ್ಯ ಸರಕುಗಳನ್ನು ತಯಾರಿಸುವ ಕೈಗಾರಿಕೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸಬಹುದು. ಮಾಲ್‌ಗಳಿಗೆ ಯಾವುದೇ ಅನುಮತಿ ಇಲ್ಲ.

ಇದನ್ನೂ ಓದಿ: ‘ಇನ್ನು ಮುಂದೆ ನನ್ನ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ’ – ಜೈಲಿನಿಂದಲೆ ಸ್ಪರ್ಧಿಸಿ ಶಾಸಕನಾದ ಹೋರಾಟಗಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...